ಸರಕಾರಿ ಸೇವೆಯಿಂದ 1-7- 2022 ರಿಂದ 31-7-2024 ರ ಅವಧಿಯಲ್ಲಿ ಸೇವಾ ನಿವೃತ್ತಿ ಹೊಂದಿದವರ ವೇತನ ನಿಗದಿಗೊಳಿಸಿ ಮೇಲಿನ ಹಂತಕ್ಕೆ ಕಳುಹಿಸಿಕೊಡುವಂತೆ ಆಗ್ರಹಿಸಿ ಕರ್ನಾಟಕ ನಿವೃತ್ತಿ ನೌಕರರ ವೇದಿಕೆ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ಕರ್ನಾಟಕ ಸರ್ಕಾರವು ಜಾರಿಗೊಳಿಸಿರುವ ಏಳನೇ ವೇತನ ಆಯೋಗದ ಆದೇಶಾನುಸಾರವಾಗಿ ತಮ್ಮ ಇಲಾಖೆಯ 1-7-2022ರಿಂದ 31-7- 2024 ರಂದು ಸೇವಾ ವಯೋ ನಿವೃತ್ತಿ ಹೊಂದಿದ ನೌಕರರ ಹಾಗೂ ಈ ಅವಧಿಯಲ್ಲಿ ಮೃತಪಟ್ಟ ನೌಕರರ ಕುಟುಂಬದವರಿಗೆ ಘನ ಸರ್ಕಾರವು ಏಳನೇ ವೇತನ ಆಯೋಗ ಜಾರಿಗೊಳಿಸುವಂತೆ ಆದೇಶಿಸಿದ ತಕ್ಷಣ ವೇತನ ನಿಗದಿಗೊಳಿಸಬೇಕು ಎಂದು ಒತ್ತಾಯಿಸಿದರು.
ಅನುಸಾರ ವೇತನ ಸೆಳೆಯುವ ಅಧಿಕಾರಿಗಳಾಗಿರುವ ತಾವುಗಳು ಪರಿಷ್ಕೃತ ಹೊಸ ಪಿಂಚಣಿ ನಿಗದಿಗೊಳಿಸಿದ ವಿವರವನ್ನು ಮಹಾಲೇಖಪಾಲರು ಬೆಂಗಳೂರು ಇವರಿಗೆ ಅದಷ್ಟು ಬೇಗ ಕಳುಹಿಸಿಕೊಡುವ ಮೂಲಕ ನಮಗೆ ಹೊಸದಾಗಿ ಪರಿಷ್ಕೃತ ಆರ್ಥಿಕ ಸೌಲಭ್ಯದ ಮಾಸಿಕ ಪಿಂಚಣೆ ಬೇಗನೆ ದೊರೆಯುವಲ್ಲಿ ಅನುಕೂಲ ನೀಡಬೇಕೆಂದು ಕರ್ನಾಟಕ ನಿವೃತ್ತ ನೌಕರರ ವೇದಿಕೆಯ ರಾಯಚೂರು ತಾಲೂಕು ಘಟಕದ ನಿವೃತ್ತರಾದ ನೌಕರರು ಮನವಿ ಮಾಡಿದರು.
ಇದನ್ನು ಓದಿದ್ದೀರಾ? ಸಿಎಂ ಸಿದ್ಧರಾಮಯ್ಯ ಬೆಂಬಲಿಸಿ ಅಹಿಂದ ಸಂಘಟನೆಯಿಂದ ಇಂದು ‘ಶಿಕಾರಿಪುರ’ ಬಂದ್‌ಗೆ ಕರೆ
ಸಂದರ್ಭದಲ್ಲಿ ಹನುಮಂತಪ್ಪ ಎಂ ಹೆಚ್ ನಾಯಕ್ ತೆರೆಸಾ, ಈರಣ್ಣ ವಿಶ್ವನಾಥ್ ರೆಡ್ಡಿ ಸೇರಿದಂತೆ ಇನ್ನಿತರರು ಹಾಜರಿದ್ದರು.
