ಒಂದು ದೇಶ ಒಂದು ಚುನಾವಣೆಯ ಜಾರಿಗೆ ತರಲು ನಿರ್ಧರಿಸಿದ ಕೇಂದ್ರ ಸರಕಾರ ತನ್ನ ನಿರ್ಧಾರ ವಾಪಸ್ ಪಡೆಯಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಧರಣಿ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಯಾದಗಿರಿ ನಗರದ ಸುಭಾಷ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಸಿ ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು.
ಜಿಲ್ಲಾ ಸಂಚಾಲಕ ಶಿವಪುತ್ರ ಜವಳಿ ಮಾತನಾಡಿ, ʼಒಂದು ದೇಶ ಒಂದು ಚುನಾವಣೆಯ ಇದೊಂದು ಕೇಂದ್ರ ಸರ್ಕಾರದ ಅಜೆಂಡಾದ ಭಾಗ ಕ್ರೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪ ಒಕ್ಕೂಟ ವ್ಯವಸ್ಥೆಗೆ ವಿರುದ್ಧವಾಗಿದೆ. ಇದನ್ನು ಅನುಷ್ಠಾನ ಮಾಡುವುದಕ್ಕೆ ಸಾಧ್ಯವೇ ಇಲ್ಲʼ ಎಂದರು.
ʼಆಡಳಿತರೂಡ ಬಿಜೆಪಿಯ ಗುಪ್ತ ಅಜೆಂಡಾವನ್ನು ಒಳಗೊಂಡಿರುವ ಒಂದು ದೇಶ ಒಂದು ಚುನಾವಣೆ ಪ್ರಸ್ತಾಪವನ್ನು ಸಂಸತ್ ಒಳಗೆ ಮತ್ತು ಹೊರಗೆ ದೇಶದ ಜನಾಭಿಪ್ರಾಯವೂ ಒಂದು ದೇಶ ಒಂದು ಚುನಾವಣೆಯ ವ್ಯವಸ್ಥೆ ಸಂಪೂರ್ಣವಾಗಿ ಪ್ರಜಾಪ್ರಭುತ್ವ ವಿರೋಧಿಯಾಗಿದೆ. ಇಡೀ ದೇಶದಲ್ಲಿ ಒಂದೇ ಬಾರಿ ಲೋಕಸಭೆ ಮತ್ತು ವಿಧಾನ ಸಭಾ ಚುನಾವಣೆಗಳನ್ನು ನಡೆಸುವ ಶಕ್ತಿ ಸಾಮಾರ್ಥ್ಯ ನಮ್ಮ ಈಗ ಇರುವ ಚುನಾವಣೆ ಆಯೋಗಕ್ಕೆ ಇಲ್ಲ. ನಮ್ಮ ಚುನಾವಣಾ ವ್ಯವಸ್ಥೆಯನ್ನು ದುಪ್ಪಟ್ಟು ಪ್ರಮಾಣದಲ್ಲಿ ವಿಸ್ತರಿಸಬೇಕಾಗುತ್ತದೆ. ಇವೆಲ್ಲವೂ ಅವಸರದಿಂದ ಮಾಡುವ ಕೆಲಸ ಅಲ್ಲʼ ಎಂದು ಹೇಳಿದರು.
ಹೊಸ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಾದರೆ ಮೊದಲು ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿ ಮಾಡಬೇಕಾಗುತ್ತದೆ. ಇದರ ಜೊತೆಗೆ ಸಂವಿಧಾನದಕ್ಕೆ ತಿದ್ದುಪಡಿ ತರಬೇಕಾಗುತ್ತದೆ. ಇವೆಲ್ಲವೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಗೊತ್ತಿದ್ದರೂ ಕೇವಲ ಜನರಲ್ಲಿ ಗೊಂದಲ ಹುಟ್ಟು ಹಾಕಿ ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಲು ಈ ಕೆಲಸವನ್ನು ಮಾಡಲಾಗಿದೆʼ ಎಂದು ದೂರಿದರು.
ಸಂಚಾಲಕ ಚಂದಪ್ಪ ಮುನಿಯಪ್ಪನೊರ ಮಾತನಾಡಿ, ʼಶಾಸಕ ಮುನ್ನಿರತ್ನ ಜಾತಿ ನಿಂದನೆ ಜೀವ ಬೆದರಿಕೆ, ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ ಬಂಧನದಲ್ಲಿದ್ದು, ಅವರನ್ನು ಕಠಿಣ ಕಾನೂನು ಶಿಕ್ಷೆಗೆ ಒಳಪಡಿಸಬೇಕುʼ ಎಂದು ಆಗ್ರಹಿಸಿದರು.
ʼಒಕ್ಕಲಿಗ ಮತ್ತು ದಲಿತ ಸಮುದಾಯಗಳನ್ನು ಅವಹೇಳನ ಮಾಡುವ ರೀತಿಯಲ್ಲಿ ಮತ್ತು ಮಹಿಳೆ ಮೇಲೆ ಅತ್ಯಾಚಾರ ಕೇಸನ್ನು ಎದುರಿಸುತ್ತಿರುವ ಮುನಿರತ್ನ ಈಗ ಜೈಲಿನಲ್ಲಿದ್ದಾರೆ. ಈ ಆರೋಪಗಳು ತೀರಾ ಗಂಭೀರ ಸ್ವರೂಪದ್ದಾಗಿವೆ. ಇದನ್ನೆಲ್ಲಾ ತನಿಖೆ ಮಾಡುವುಕ್ಕೆ ವಿಶೇಷ ತನಿಖಾ ತಂಡ ರಚಿಸಿರುವುದು ಸರಕಾರದ ನಿಧಾರ ಸಮಿತಿಯು ಸ್ವಾಗತಿಸುತ್ತದೆ. ಎಸ್ಐಟಿ ಕಾಲಬದ್ಧವಾಗಿ ಹಾಕಿಕೊಂಡು ತನಿಖೆ ನಡೆಸಬೇಕುʼ ಎಂದು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಕಲಬುರಗಿ | ಮುಳುವಾದ ವಾಟ್ಸಪ್ ಸಂದೇಶ: ಮೇಲ್ವಿಚಾರಕಿಯ ನಿಂದನೆಗೆ ಮೂರ್ಛೆ ಹೋದ ಅಂಗನವಾಡಿ ಕಾರ್ಯಕರ್ತೆ!
ಪ್ರತಿಭಟನೆಯಲ್ಲಿ ಪ್ರಮುಖರಾದ ಶಿವಲಿಂಗ ಹಸನಾಪೂರ, ಭೀಮಣ್ಣ, ತಿಪ್ಪಣ್ಣ ಶೆಳ್ಳಗಿ, ಶೇಖರ ಮಂಗಳೂರು, ವೆಂಕಟೇಶ ದೇವಾಪೂರ, ರಾಜು ಬಡಿಗೇರ, ಚಿನ್ನಪ್ಪ ದೇವಾಪೂರ, ಖಾಜಾ ಅಜಮೀರ, ಎಂ. ಪಟೇಲ್, ಮರೆಪ್ಪ ಕ್ರಾಂತಿ, ಸಂತೋಷ ಗುಂಡಳ್ಳಿ, ಶರಬಣ್ಣ ದೋರನಹಳ್ಳಿ, ನಾಗರಾಜ ಕೊಡಮನಳ್ಳಿ, ಶ್ರೀಮಂತ ಸಿಂಗನಹಳ್ಳಿ, ಶರಣಪ್ಪ ಕೋಟಿ ಖಜಾಂಚಿ, ತಾಯಪ್ಪ ಬಂಡಾರಿ, ಪುರಷೋತ್ತಮ, ಚಂದ್ರು ಬುದ್ರನಗರ, ರಂಗಸ್ವಾಮಿ ದಾಸರಿ, ಬಾಲರಾಜ ಖಾನಪೂರ, ದೊಡ್ಡಪ್ಪ ಕಾಡಮಗೇರಿ, ಚಿನ್ನದಸ್ಸು ಗುರಸುಣಗಿ, ಹಣಮಂತ ಗುರುಸಣಗಿ, ಶರಣಪ್ಪ ಮಳ್ಳಳ್ಳಿ, ಚಂದ್ರ ಬಲಶೆಟ್ಟಿಹಾಳ, ಚೌಡಪ್ಪ ಯತ್ನಹಳ್ಳಿ, ಮಲ್ಲಿಕಾರ್ಜುನ ಹುರಸಗುಂಡಗಿ, ಶರಣಪ್ಪ ಮಾಳೂರ, ಯಲ್ಲಪ್ಪ ಗುಂಡಲಗೇರಿ, ಪರಮಣ್ಣ ಚಿಲವಾದಿ, ಸಂಗಮೇಶ ಮಾಳೂರು, ಬಲಭೀಮ ದೇವನಹಳ್ಳಿ, ವಾಸು ಕೋಗಿಲ್ಕರ್, ಸುಭಾಷ ಹುರಸಗುಂಡಗಿ, ಸಂದೀಪ ಯರಗೋಳ, ಮಲ್ಲಪ್ಪ ತಡಿಬಿಡಿ, ಭೀಮಾಶಂಕರ ಗುಂಡಳ್ಳಿ, ಜೈಭೀಮ ಕೊಡಮನಹಳ್ಳಿ, ಸಿದ್ದಪ್ಪ ಕೊಡಮನಹಳ್ಳಿ, ನಾಗರಾಜ ರಸ್ತಾಪುರ್, ಬಸಲಿಂಗ ಹಾಲಭಾವಿ, ದೇವಪ್ಪ ಕೊಂಬಿನ್ ಪಾಲ್ಗೊಂಡಿದ್ದರು.