ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕು ಪಂಚಾಯತ್ ಆವರಣದಲ್ಲಿ ʼಸ್ವಚ್ಛತಾ ಹೀ ಸೇವಾ -2025ʼರ ಅಭಿಯಾನದ ಅಂಗವಾಗಿ ಅರೋಗ್ಯ ತಪಾಷಣೆ ಶಿಬಿರ ಆಯೋಜಿಸಲಾಗಿತ್ತು.
ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್, ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಐಟಿಸಿ ಸಂಸ್ಥೆ ಮತ್ತು ಮೈಕಾಪ್ಸ್ ಸಂಸ್ಥೆಗಳ ಸಹಯೋಗದಲ್ಲಿ ಸ್ವಚ್ಛತಾಗಾರರು, ವಾಹನ ಚಾಲಕಿಯರು, ಎಂಬಿಕೆ, ಎಲ್‌ಸಿಆರ್‌ಪಿ ಮತ್ತು ನೀರುಗಂಟಿಗಳಿಗೆ ಅರೋಗ್ಯ ತಪಾಷಣೆ ಶಿಬಿರ ಆಯೋಜಿಸಲಾಗಿತ್ತು.
ಶಿಬಿರದಲ್ಲಿ ಸುಮಾರು 200ಕ್ಕೂ ಹೆಚ್ಚು ಜನರು ಭಾಗವಹಿಸಿ ಪ್ರಾಥಮಿಕ ಅರೋಗ್ಯ ಪರೀಕ್ಷಿಸಿಕೊಳ್ಳುವ ಮೂಲಕ ಶಿಬಿರವನ್ನು ಯಶಸ್ವಿಗೊಳಿಸಿದರು.
ಈ ಸುದ್ದಿ ಓದಿದ್ದೀರಾ? ಮಂಡ್ಯ | ʼಜಗದ್ಗುರು ಶ್ರೀ ಬಾಲಗಂಗಾಧರನಾಥ ಸ್ವಾಮೀಜಿʼಯವರ 51ನೇ ಪಟ್ಟಾಭಿಷೇಕ ಮಹೋತ್ಸವ
ಅಭಿಯಾನದಲ್ಲಿ ತಾಲೂಕು ಕಾರ್ಯನಿರ್ವಾಹಕ ಅಧಿಕಾರಿ, ತಾಲೂಕು ಯೋಜನಾ ಅಧಿಕಾರಿ, ತಾಲೂಕು ಆರೋಗ್ಯ ಅಧಿಕಾರಿ, ಮೈ ಕ್ಯಾಪ್ಸ್ ಸಂಸ್ಥೆಯ ನಿರ್ದೇಶಕ, ಜಿಲ್ಲಾ ಎಚ್‌ಆರ್‌ಡಿ ಸಮಾಲೋಚಕ, ಜಿಲ್ಲಾ ಸಂಯೋಜಕರು, ತಾಲೂಕು ಸಂಯೋಜಕರು ಇದ್ದರು.