ಯಾದಗಿರಿ | ಕುಲಾಂತರಿ ಬೆಳೆ ನಿರ್ಮೂಲನೆಗೆ ರೈತ ಸಂಘ ಪ್ರತಿಭಟನೆ

Date:

Advertisements

ಕುಲಾಂತರಿ ಬೆಳೆ ನಿರ್ಮೂಲನೆ ಜನಾಂದೋಲನದವು ಇಡೀ ರಾಜ್ಯಾದ್ಯಂತ ನಡೆಯುತ್ತಿದ್ದು, ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಯಾದಗಿರಿ ಜಿಲ್ಲೆಯ ಸುರಪುರ ತಹಶೀಲ್ದಾರ್ ಕಚೇರಿಯ ಎದುರು ಪ್ರತಿಭಟನೆ ನಡೆಸಿದರು.

ಬಳಿಕ ಸುರಪುರ ತಹಶೀಲ್ದಾರ್ ಮುಖಾಂತರ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಿ ತಾಲೂಕು ಅಧ್ಯಕ್ಷ ಹಣಮಂತ್ರಾಯ ಚಂದಲಾಪೂರ ಮಾತನಾಡಿ, “ಕೃಷಿ ಪ್ರಧಾನ ದೇಶವಾದ ಭಾರತದ ನೆಲದಲ್ಲಿ, ಸ್ಥಳೀಯ ಬೇಸಾಯ ಹಾಗೂ ಜನಸಮುದಾಯದ ಮೇಲೆ ದುಷ್ಪರಿಣಾಮ ಬೀರಬಲ್ಲ ಕುಲಾಂತರಿ ಬೆಳೆಗಳನ್ನು ಬೆಳೆಸುವ ಮೂಲಕ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳಲು ಮುಂದಾದ ವಿದೇಶಿ ಬಂಡವಾಳಶಾಹಿ ಕಂಪನಿಗಳ ಹುನ್ನಾರಕ್ಕೆ ಹಿಂದಿನಿಂದಲೂ ದೊಡ್ಡಮಟ್ಟದ ವಿರೋಧ ವ್ಯಕ್ತವಾಗಿದೆ. ದೀರ್ಘಕಾಲದಿಂದ ಚಳವಳಿಗಳು ನಡೆಯುತ್ತಿವೆ” ಎಂದು ಎಚ್ಚರಿಸಿದರು.

“ಇಷ್ಟಾದರೂ ಲಾಭಕೋರ ಸಂಸ್ಥೆಗಳು ತಮ್ಮ ಪಟ್ಟನ್ನು ಬಿಡದೆ ಮತ್ತೆ ತಮ್ಮ ಪ್ರಯತ್ನವನ್ನು ಮುಂದುವರೆಸುತ್ತಲೇ ಇವೆ. ಇವರ ಜತೆಗೆ ಸರ್ಕಾರದ ಕೆಲವು ನೀತಿ ನಿರೂಪಕರೂ ಕೂಡ ಸೇರಿಕೊಂಡು ದೇಶದ ಆಹಾರ ಭದ್ರತೆ, ಉತ್ತಮ ಪೌಷ್ಠಿಕ ಆಹಾರ, ಕೀಟಭಾದೆಯಿಂದ ರಕ್ಷಣೆ ಮತ್ತು ರೈತರಿಗೆ ಹೆಚ್ಚಿನ ಇಳುವರಿಯಲ್ಲದೆ ಎಂತಹ ವಾತಾವರಣದಲ್ಲಿ
ಬೇಕಾದರೂ ಬೆಳೆಯುತ್ತವೆಂಬ ಕತೆಗಳನ್ನು ಹೇಳುತ್ತ ಜನರನ್ನು ನಂಬಿಸಲು ಹೊರಟಿದ್ದಾರೆ” ಎಂದು ದೂರಿದರು.

Advertisements

“ಇಂತಹ ಸಂದರ್ಭದಲ್ಲಿ ಜವಾಬ್ದಾರಿಯುತ ನಾಗರಿಕರಾದ ನಾವು ಸ್ವಲ್ಪ ಎಚ್ಚರ ತಪ್ಪಿದರೂ ದೇಶದ ಆಹಾರ ಪೂರೈಕೆ ವ್ಯವಸ್ಥೆ ಮತ್ತು ಕೃಷಿ ಪರಿಸರದಲ್ಲಿ ಅಲ್ಲೋಲ ಕಲ್ಲೋಲವಾಗುವ ಸಾಧ್ಯತೆ ಇದೆ” ಎಂದರು.

ಕುಲಾಂತರಿ ಪರವಾಗಿರುವವರು ಏನೇ ಗುಣಗಾನ ಮಾಡಿದರೂ ವಾಸ್ತವದಲ್ಲಿ, ಚಾಲ್ತಿಯಲ್ಲಿರುವ ಶೇ.99ರಷ್ಟು ಕುಲಾಂತರಿ (ಜೆಎಂ) ಬೆಳೆಗಳು ಎರಡು ರೀತಿಯ ಲಕ್ಷಣಗಳನ್ನು ಮಾತ್ರ ಹೊಂದಿವೆ.

“ಸಸ್ಯದೊಳಗೆ ಕೀಟನಾಶಕ ಉತ್ಪಾದನೆ ಮಾಡುವುದು. ಅಪಾಯಕಾರಿ ಕಳೆನಾಶಕ ಸಿಂಪಡಿಸಿದರೂ ಬೆಳೆಗೆ ಏನೂ ಆಗದಂತೆ ವಿಷಗಳ ಪ್ರತಿರೋಧಕತೆ ಹೊಂದಿರುವಂತಹದು” ಎಂದು ತಿಳಿಸಿದರು.

“ಈಗಾಗಲೇ ದೇಶಾದ್ಯಂತ 100ಕ್ಕೂ ಹೆಚ್ಚು ಕಡೆಗಳಲ್ಲಿ (ಮುಚ್ಚಿದ ತಾಕುಗಳು ಮತ್ತೆ ತೆರೆದ ತಾಕುಗಳಲ್ಲಿ) 12ಕ್ಕೂ ಹೆಚ್ಚು ಇಂತಹ ಬೆಳೆಗಳ ಪ್ರಯೋಗ ನಡೆಸಲು ಸರ್ಕಾರ ಅನುಮೋದಿಸಿದೆ. ಅಷ್ಟೇ ಅಲ್ಲ, ಕಾನೂನು ಬಾಹಿರವಾಗಿ ಬೆಳೆಯುತ್ತಿದ್ದ ಬಿಟಿ ಹತ್ತಿಯನ್ನು 2002ರಲ್ಲಿ ಭಾರತ ಸರ್ಕಾರವು ಕಾನೂನುಬುದ್ಧಗೊಳಿಸಿದ ನಂತರ, ಸರ್ಕಾರದ ನೀತಿ ನಿರೂಪಕರು ಇನ್ನೂ ಮುಂದುವರೆದು ಎರಡು ಜನಪ್ರಿಯ ಆಹಾರ ಬೆಳೆಗಳಾದ ಬಿಟಿ ಬದನೆಕಾಯಿ(2009 ರಲ್ಲಿ) ಮತ್ತು 2017ರಲ್ಲಿ ಕುಲಾಂತರಿ ಸಾಸಿವೆ. ಅಂತಿಮವಾಗಿ (2022 ರಲ್ಲಿ) ಕಳೆನಾಶಕ ಸಹಿಷ್ಣು(ಎಚ್‌ಟಿ)ಗಳ ಕುಲಾಂತರಿ ಬೀಜಗಳನ್ನು ಅನುಮೋದಿಸಲು ಮುಂದಾಗಿದ್ದಾರೆ” ಎಂದು ಪ್ರತಿಭಟನಾಕಾರರು ಅಕ್ರೋಶ ವ್ಯಕ್ತಪಡಿಸಿದರು.

“ಲಾಭಕೋರ ಸಂಸ್ಥೆಗಳು ತಮ್ಮ ಪಟ್ಟನ್ನು ಬಿಡದೆ ಮುದುವರೆಸುವುದು ಖಂಡನಾರ್ಹವಾಗಿದೆ. ಈ ಸಂಸ್ಥೆಗಳ ಮೇಲೆ ಒತ್ತಡ ಹಾಕಿ ಸುರಕ್ಷಿತ, ಸುಸ್ಥಿರ ಮತ್ತು ಆರೋಗ್ಯಕರ ಭಾರತವನ್ನಾಗಿ ರೂಪಿಸಬೇಕು” ಎಂದು ಮನವಿ ಮಾಡಿದರು.

“ಹುಣಸಗಿ ತಾಲೂಕಿನ ಕೊಡೇಕಲ್ ಹೋಬಳಿ ವ್ಯಾಪ್ತಿಯಲ್ಲಿ ಬರುವ ಜಂಗಿನಗಡ್ಡಿ ಗ್ರಾಮದ ಸರ್ವೆ ನಂ. 66 ಮತ್ತು 64 ಮತ್ತು 90 ಸರ್ವೆ ನಂಬರ್‌ಗಳಿಗೆ ಯಾವುದೇ ಯಾವುದೇ ನಕಾಶೆ ಇರುವುದಿಲ್ಲ. ತಕ್ಷಣವೇ ನಕಾಶೆ ಮಾಡಿಕೊಡಬೇಕು. ಈಗ ಸುಮಾರು ವರ್ಷಗಳಿಂದ ರೈತರು ಬೆಳೆದ ಹತ್ತಿ ಬೆಳೆಗೆ ಬೆಂಬಲ ಬೆಲೆ ನೀಡಿರುವುದಿಲ್ಲ. ಕೆಲವೊಂದು ಕಡೆ ಕೊಡುವುದು ಕೆಲವೊಂದು ಕಡೆ ಬಿಡುತ್ತಿದ್ದು, ತಾರತಮ್ಯ ಮಾಡುತ್ತಿದ್ದಾರೆ. ಈ ಸುರಪುರ ಭಾಗದಲ್ಲಿ ಅತಿಹೆಚ್ಚು ರೈತರು ಹತ್ತಿ ಬೆಳೆಯನ್ನು ಬೆಳೆಯುತ್ತಿದ್ದಾರೆ. ಇದಕ್ಕೆ ಈ ಕೂಡಲೇ ಬೆಂಬಲ ಬೆಲೆ ನೀಡಬೇಕು” ಎಂದು ಒತ್ತಾಯಿಸಿದರು.

“ಅನಾವೃಷ್ಠಿಯಿಂದ ರೈತರ ಬೆಳೆ ನಷ್ಟವಾಗಿದೆ(ಹತ್ತಿ, ಸಜ್ಜಿ, ತೊಗರಿ, ಶೇಂಗಾ) ಈ ಕೂಡಲೇ ಪರಿಹಾರ ನೀಡಬೇಕು. ಈ ಹಿಂದೆ ಬಹುದಿನಗಳಿಂದ ಸುರಪುರ ತಾಲೂಕಿನಲ್ಲಿ ಬರುವ ರಂಗಂಪೇಟೆಯಲ್ಲಿ ಪ್ರತಿ ಭಾನುವಾರದಂದು ದನದ ಸಂತೆ ನಡೆಯುತಿತ್ತು. ಆದರೆ ಸಂತೆ ನಡೆಯುವ ಜಾಗವನ್ನು ಅಕ್ರಮವಾಗಿ ಪ್ರಭಾವಿಗಳು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡಿ ಸಂತೆ ನಡೆಯದಂತೆ ಮಾಡಿದ್ದಾರೆ. ಕೂಡಲೇ ಪರಿಶೀಲಿಸಿ ಒತ್ತುವರಿ ಮಾಡಿರುವ ಜಾಗವನ್ನು ತೆರವುಗೊಳಿಸಿ ರೈತರಿಗೆ ದನದ ವ್ಯಾಪಾರ ಮಾಡುವುದಕ್ಕೆ ಅನುಕೂಲ ಮಾಡಿಕೊಡಬೇಕು” ಎಂದು ಆಗ್ರಹಿಸಿದರು.

ಈ ಸುದ್ದಿ ಓದಿದ್ದೀರಾ? ಚುನಾವಣಾ ಬಾಂಡ್ | ನಿರ್ಮಲಾ ಸೀತಾರಾಮನ್ ರಾಜೀನಾಮೆ ನೀಡುತ್ತಾರಾ: ಸಿಎಂ ಪ್ರಶ್ನೆ

“ಸುರಪುರ ತಹಶೀಲ್ ಕಚೇರಿಯಲ್ಲಿ ಒಂದೇ ಒಂದು ಪಹಣಿ ಕೇಂದ್ರವಿದ್ದು, ಇದರಿಂದ ರೈತರಿಗೆ ತುಂಬಾ ಅನಾನುಕೂಲವಾಗಿದೆ. ಇನ್ನು ಎರಡು ಮೂರು ಪಹಣಿ ಕೇಂದ್ರ ತೆಗೆದು ರೈತರಿಗೆ ಅನುಕೂಲ ಮಾಡಿಕೊಡಬೇಕು. ತಹಶೀಲ್ ಕಚೇರಿಯಲ್ಲಿ ಸಾರ್ವಜನಿಕರಿಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ ಮತ್ತು ಶೌಚಾಲಯ ಇಲ್ಲ” ಎಂದು ದೂರಿದರು.

ಸಾಹೇಬಗೌಡ ಮದಲಿಂಗನಾಳ, ಭೀಮಣ್ಣ ತಿಪ್ಪನಟಗಿ, ವೆಂಕಟೇಶಗೌಡ ಕುಪಗಲ್, ದೇವಿಂದ್ರಪ್ಪ ತಿಪ್ಪನಟಗಿ, ಭೀಮನಗೌಡ ಕರ್ನಾಳ, ಇಮಾಮಸಾಬ ತಿಪ್ಪನಟಗಿ, ಮಲ್ಲಣ್ಣ ಹಾಲಭಾವಿ, ಹಣಮಗೌಡ ನಾರಾಯಣಪೂರ, ಗದ್ದೆಪ್ಪ ನಾಗದೇವಿನಾಳ, ದೇವಣ್ಣ ಎರಕಿಹಾಳ, ಪ್ರಭುದೂರೆ ಅರಳಹಳ್ಳಿ, ಅವಿನಾಶ ಕೊಡೇಕಲ್, ಶಿವನಗೌಡ ರುಕ್ಮಾಪೂರ, ಭೀಮರಾಯ ಒಕ್ಕಲಿಗ, ಇಮಾಮಸಾಬ ತಿಪ್ಪನಟಗಿ, ಮೌನೇಶ ಅರಳಹಳ್ಳಿ, ಸಿದ್ದಪ್ಪ, ಮೈಯಿಬುಅಂಗಡಿ, ಅಮೀನ್ ಸಾಬ ನಾರಾಯಣಪೂರ, ಸಾಬಣ್ಣ ‌ಸೇರಿದಂತೆ ಇತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X