ಯಾದಗಿರಿ ಜಿಲ್ಲೆಯ ಶಹಾಪೂರ ಪಟ್ಟಣದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿಯಲ್ಲಿನ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಮೇಲ್ವಿಚಾರಕ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅವರನ್ನು ಕೂಡಲೇ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ದಲಿತ ಸಂಘರ್ಷ ಸಮಿತಿ(ಭೀಮವಾದ) ವತಿಯಿಂದ ಧರಣಿ ನಡೆಸಲಾಯಿತು.
ನಗರದ ತಹಶೀಲ್ದಾರ್ ಕಾರ್ಯಾಲಯದ ಮುಂದೆ ಹಮ್ಮಿಕೊಂಡಿದ್ದ ಧರಣಿಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವ ನಾಟೇಕಾರ್, “ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿನ ಸಮಸ್ಯೆಗಳಿಗೆ ಸ್ಪಂದಿಸದೆ ವಿದ್ಯಾರ್ಥಿಗಳೊಂದಿಗೆ ಅಸಭ್ಯವಾಗಿ ವರ್ತಿಸಿ, ಬೆದರಿಕೆವೊಡುತ್ತಿರುವ ನಿಲಯದ ಮೇಲ್ವಿಚಾರಕರಾದ ಭೀಮಸೇನ್ ರವರನ್ನು ಅಮಾನತುಗೊಳಿಸಬೇಕು. ಅವರ ಸ್ಥಾನಕ್ಕೆ ಬೇರೆಯೊಬ್ಬರನ್ನು ನೇಮಿಸಬೇಕು. ಇಲ್ಲವಾದಲ್ಲಿ ವಿದ್ಯಾರ್ಥಿಗಳ ಮುಖಾಂತರ ಬೃಹತ್ ಹೋರಾಟ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನು ಓದಿದ್ದೀರಾ? ಕಾರಟಗಿ | ವರ್ಷಗಳಿಂದ ದುರಸ್ತಿಯೇ ಆಗದ ರಸ್ತೆ: ಗ್ರಾಮಸ್ಥರ ಗೋಳು ಕೇಳುವವರಾರು?
ಇದೇ ವೇಳೆ ಧರಣಿಯಲ್ಲಿದ್ದ ವಸತಿ ನಿಲಯದ ವಿದ್ಯಾರ್ಥಿಗಳು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡರಾದ ಲಕ್ಷ್ಮಣ ಹಳಿಸಗರ , ಅಯ್ಯಪ್ಪ ಗೊಂದೆನೂರ್ , ಶೇಖರ್ ಬಡಿಗೆರ್ , ನಿಂಗಪ್ಪ ಸತ್ಯಂಪೇಟೆ, ಬಸವರಾಜ್ ಚಿಪ್ಪಾರ್, ವಿಶ್ವ ಬೀರನೂರ, ಹುಸೇನ್ ಕೊಂಗಂಡಿ, ಅಮರೇಶ ಬೂದನೂರ್, ವಿಶ್ವ ಪರಸಾಪೂರ್, ಮೌನೇಶ್ ಜಾರಕಿಹೊಳಿ ಹಾಗೂ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಿದ್ದರು.
