ರಾಯಚೂರು | ಭಗತ್ ಸಿಂಗ್ ಆಶಯಗಳನ್ನು ಮುನ್ನಡೆಸಬೇಕು: ಅಜೀಜ್ ಜಾಗೀರದಾರ

Date:

Advertisements

ದೇಶದಲ್ಲಿ ಹಸಿವು, ಬಡತನ, ನಿರುದ್ಯೋಗ ತಾಂಡವಾಡುತ್ತಿದೆ. ಜಾತಿ, ಧರ್ಮದ ವಿಷಬೀಜ ಬಿತ್ತುತ್ತಿರುವ ಕಾರ್ಪೊರೇಟ್ ಶಕ್ತಿಗಳ ಕೃಪಾಪೋಷಿತ ಮನುವಾದವು ದೇಶದ ಜನರ ಭಾವೈಕ್ಯತೆಯ ಅಭಿವೃದ್ಧಿಗೆ ಕಂಟಕವಾಗಿದೆ ಎಂದು ಯುವಮುಖಂಡ ಅಜೀಜ್ ಜಾಗೀರದಾರ ಹೇಳಿದರು.

ರಾಯಚೂರು ನಗರದ ಆಶಾಪೂರ ರಸ್ತೆಯಲ್ಲಿರುವ ಟಿಯುಸಿಐ ಕಾರ್ಮಿಕ ರಾಜ್ಯ ಕಾರ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಭಾರತದ ಕ್ರಾಂತಿಕಾರಿ ಶಹೀದ್ ಭಗತ್ ಸಿಂಗ್ ಅವರ 117ನೇ ಜನ್ಮದಿನೋತ್ಸವ ಉದ್ಘಾಟಿಸಿ ಮಾತನಾಡಿದರು.

“ಭಗತ್ ಸಿಂಗ್ ಅವರು ತನ್ನ ತಾರುಣ್ಯ ವಯಸ್ಸಿನಲ್ಲಿ ಕಟ್ಟಾ ಕ್ರಾಂತಿಕಾರಿಯಾಗಿದ್ದರು. ಕಾರ್ಲ್ ಮಾರ್ಕ್ಸ್, ಲೆನಿನ್‌ ಮೊದಲಾದವರ ಚಿಂತನೆಗಳಿಂದ ತೀವ್ರ ಪ್ರಭಾವಿತರಾಗಿದ್ದ ಭಗತ್‌ ಸಿಂಗ್‌ ಸಹಜವಾಗಿಯೇ ಸಮಾಜವಾದದೆಡೆಗೆ ಆಕರ್ಷಿತರಾಗಿದ್ದರು” ಎಂದು ತಿಳಿಸಿದರು.

Advertisements

“ಧರ್ಮವು ಅಫೀಮು ಆಗಬಲ್ಲುದೆಂಬ ಸತ್ಯವನ್ನು ಅರಿತ ಭಗತ್‌ ಸಿಂಗ್‌, ತನ್ನ ಕ್ರಾಂತಿಕಾರಿ ಹೋರಾಟವನ್ನು ಧರ್ಮ ನಿರಪೇಕ್ಷತೆಯ ಆಧಾರದಲ್ಲೇ ನಡೆಸಬೇಕೆಂಬ ಧ್ಯೇಯ ಹೊಂದಿದ್ದು, ಅಂತೆಯೇ ನಡೆದರು. ನಾವು ಅವರ ಮಾರ್ಗದರ್ಶನದ ಆಶಯಗಳನ್ನು ಈಡೇರಿಸುವ ದೃಢಸಂಕಲ್ಪ ಮಾಡಬೇಕು” ಎಂದು ಕರೆ ನೀಡಿದರು.

ಈ ಸುದ್ದಿ ಓದಿದ್ದೀರಾ? ಚಿಕ್ಕಮಗಳೂರು | ಓವರ್ ಡೋಸ್ ಇಂಜೆಕ್ಷನ್‌ಗೆ ಏಳು ವರ್ಷದ ಬಾಲಕ‌ ಬಲಿ: ವೈದ್ಯ ಪರಾರಿ

“ಸಮಸ್ತ ದುಡಿಯುವ ವರ್ಗವನ್ನು ಸಂಘಟಿಸಿ ಭಗತ್ ಸಿಂಗ್ ಕಂಡಂತಹ ಸಮಾನತೆಯ ಸಮಾಜಕ್ಕಾಗಿ ಹೋರಾಟ ಮಾಡಲು ವಿದ್ಯಾರ್ಥಿ-ಯುವಜನರು ಬೀದಿಗಿಳಿಯಬೇಕಾಗಿದೆ. ಶಿಕ್ಷಣ ಪಡೆದರೂ ನಿರುದ್ಯೋಗದಂತಹ ಜ್ವಲಂತ ಸಮಸ್ಯೆಗಳನ್ನು ಎದುರಿಸುತ್ತಿರುವ ಲಕ್ಷಾಂತರ ಯುವಜನರು ಉದ್ಯೋಗದ ಹಕ್ಕಿಗಾಗಿ ಕ್ರಾಂತಿಕಾರಿ ಹೋರಾಟಗಳನ್ನು ಮುನ್ನೆಡೆಸುವುದು ಇಂದಿನ ಯುವ ಪೀಳಿಗೆಯ ಧ್ಯೇಯವಾಗಿದೆ” ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿ ಮುಖಂಡರುಗಳಾದ ನಿರಂಜನ್ ಕುಮಾರ್, ಎಲ್ಲಪ್ಪ, ರವಿಚಂದ್ರನ್, ಆನಂದ್ ಕುಮಾರ್, ಹನೀಫ್ ಅಬಕಾರಿ, ಸಂತೋಷ್, ಮಾರೆಪ್ಪ ಸೇರಿದಂತೆ ಇತರರು ಇದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

ಸಾಗರ | ಸಿಗಂದೂರು ಸೇತುವೆ ಮೇಲೆ ವ್ಹೀಲಿಂಗ್ ; ಬಿತ್ತು 5,000₹ ದಂಡ

ಸಾಗರದ ಸಿಗಂದೂರು ಸೇತುವೆ ಮೇಲೆ ದುಬಾರಿ ಬೈಕ್‌ನಲ್ಲಿ ವೀಲಿಂಗ್‌ ಮಾಡಿದ ಯುವಕನಿಗೆ...

ಶಿವಮೊಗ್ಗ | ಒಳಮೀಸಲಾತಿ ಪುನರ್ ಪರಿಶೀಲಿಸಿ, ನ್ಯಾಯ ಒದಗಿಸಿ ; ಅಖಿಲ ಕರ್ನಾಟಕ ಕೊರಚ ಮಹಾ ಸಂಘ ಆಗ್ರಹ

ಶಿವಮೊಗ್ಗ, ಅಖಿಲ ಕರ್ನಾಟಕ ಕೊರಚ ಮಹಾ ಸಂಘವು ಸರ್ಕಾರದ ಒಳಮೀಸಲಾತಿಯನ್ನು ಪುನರ್...

Download Eedina App Android / iOS

X