ಕೊಡಗು | ಶಾಸ್ತ್ರೀಯ ಕಲಾವಿದರಿಗಿಂತ ಜಾನಪದ ಕಲಾವಿದರು ಕಡಿಮೆಯೇನಿಲ್ಲ: ಜರಗನಹಳ್ಳಿ ಕಾಂತರಾಜು

Date:

Advertisements

ಜಾನಪದ ಕಲಾವಿದರು ಅನಾಥರಲ್ಲ. ಅವರೆಲ್ಲರನ್ನೂ ಸೇರಿಸಿ ನೇಪಾಳದಲ್ಲಿ ಸರ್ಕಾರಕ್ಕೆ ಮಾರ್ಗದರ್ಶಿಯಾಗಿರುವಂತೆ ಜನಪದ ಸಿರಿ ಕನ್ನಡ ವಾಹಿನಿ ವತಿಯಿಂದ ಬರುವ ತಿಂಗಳಿನಲ್ಲಿ ಅಂತರಾಷ್ಟೀಯ ಕಾರ್ಯಕ್ರಮ ಮಾಡಿ, ಶಾಸ್ತ್ರೀಯ ಕಲಾವಿದರಿಗಿಂತ ಜಾನಪದ ಕಲಾವಿದರು ಕಡಿಮೆಯೇನಿಲ್ಲವೆಂದು ತೋರಿಸುವ ಕಾರ್ಯಕ್ರಮ ಇದಾಗಿದೆ ಎಂದು ಜನಪದ ಸಿರಿಯ ಜರಗನಹಳ್ಳಿ ಕಾಂತರಾಜು ಅಭಿಪ್ರಾಯಪಟ್ಟರು.

ಕೊಡಗು ಜಿಲ್ಲೆಯ ಕುಶಾಲನಗರದ ಜನಪದ ಸಿರಿ ದೇಸಿ ಚಾನೆಲ್ ಅರ್ಪಿಸುವ ವೀರಭೂಮಿ ಜನಪದ ಗ್ರಾಮ ಸಹಯೋಗದಲ್ಲಿ ನಡೆದ ʼಜನರ ಬಳಿಗೆ ಜಾನಪದ ವೇದಿಕೆʼ ಕಾರ್ಯಕ್ರಮದಲ್ಲಿ ಮಾತನಾಡಿದರು.

“ಕುಶಾಲನಗರದ ಪ್ರಖ್ಯಾತ ವೀರಭೂಮಿ ರೆಸ್ಟೋರೆಂಟ್ ಇಂದಿನಿಂದ ಜಾನಪದ ಕಲಾಗ್ರಾಮವೆಂದು ಸಾಕ್ಷಿಯಾಗಲು ಎಲ್ಲ ನಮ್ಮ ಕಲಾವಿದರು ಸಜ್ಜಾಗಿದ್ದೀರಿ” ಎಂದು ಹರ್ಷ ವ್ಯಕ್ತಪಡಿಸಿದರು.

Advertisements

“ಎಚ್ ಎಲ್ ನಾಗೇಗೌಡ ಸ್ಥಾಪಿತ ಕರ್ನಾಟಕ ಜಾನಪದ ಪರಿಷತ್ ಯುನೆಸ್ಕೊ ಮಾನ್ಯತೆ ಪಡೆದಿದ್ದರಿಂದ ಅದರ ಈಗಿನ ಅಧ್ಯಕ್ಷ ಜಾನಪದ ವಿದ್ವಾಂಸ ಡಾ. ಹಿ ಚಿ ಬೋರಲಿಂಗಯ್ಯ ಅವರು ದೂರವಾಣಿಯ ಮುಖಾಂತರ ಹರ್ಷವ್ಯಕ್ತಪಡಿಸಿ, ತಮಿಳುನಾಡಿನಲ್ಲಿ ಪರಿಷತ್‌ನ ಶಾಖೆ ಪ್ರಾರಂಭವಾಗುತ್ತಿದೆಯೆಂದು ತಿಳಿಸಿದ್ದಾರೆ” ಎಂದರು.

ರಾಜ್ಯದ ನಾನಾ ಜಿಲ್ಲೆಗಳಿಂದ ಬಂದ 150 ಮಂದಿ ಮೂಲ ಜಾನಪದ ಕಲಾವಿದರು ತಮ್ಮ ತಂಡದೊಂದಿಗೆ ಕಲಾಪ್ರದರ್ಶನ ಪ್ರಸ್ತುತಪಡಿಸಿದವು ಹಾಗೂ ಪ್ರಖ್ಯಾತ ಹಾಡುಗಾರರಾದ ಮೈಸೂರು ಗುರುರಾಜ್, ಉಮಾ ವೈ ಜಿ, ಜುಂಜಪ್ಪ ಖ್ಯಾತಿಯ ಮೋಹನ್ ಕುಮಾರ್, ಆರ್ ರವಿಕುಮಾರ್, ಆರ್ ಮಹೇಂದ್ರ, ಗೌತಮಿ ಮಧುಸೂಧನ್ ಹಾಗೂ ಪದ್ಮಶ್ರೀ ಹಾಡಿ ಪ್ರೇಕ್ಷಕರನ್ನು ರಂಜಿಸಿದರು.

ಜನಪದ ಕಲಾವಿದರು ಪುರಿಗಾಲಿ ಮಹಾದೇವಸ್ವಾಮಿ, ಕೈಲಾಸ ಮೂರ್ತಿ, ಕೆಬ್ಬೇಪುರ ಸಿದ್ಧರಾಜು ಜನಪದ ಮಹಾಕಾವ್ಯಗಳನ್ನು ಪ್ರಸ್ತುತಪಡಿಸಿದರು. ವಿಶೇಷವಾಗಿ ಉಡುಪಿ ಜಿಲ್ಲೆಯ ಕಟಪಾಡಿ ಕಲೆ, ಕೊಡಗು ಜಿಲ್ಲೆಯ ಉಮ್ಮತ್ತಾಟ್ ಕಲೆ, ಸಿದ್ಧಿ ಜನಾಂಗದ ಮಹಿಳಾ ಕಲೆ, ಮಂಡ್ಯ ಕಲಾವಿದರ ಪೂಜಾ ಕುಣಿತ ಪ್ರೇಕ್ಷಕರ ಗಮನ ಸೆಳೆಯಿತು.

ಈ ಸುದ್ದಿ ಓದಿದ್ದೀರಾ? ರಾಯಚೂರು | ಹೊನ್ನಟಗಿ ಗ್ರಾಮವು ಹೆಸರಿಗೆ ಮಾತ್ರ ಆದರ್ಶ ಗ್ರಾಮ; ಅಭಿವೃದ್ಧಿ ಮರೀಚಿಕೆ

ಕಾರ್ಯಕ್ರಮಕ್ಕೂ ಮುನ್ನ ದಿ ನಾಡೋಜ ಎಚ್ ಎಲ್ ನಾಗೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಅರ್ಪಿಸುವುದರ ಮೂಲಕ ಖ್ಯಾತ ವಿದ್ವಾಂಸರಾದ ಡಾ. ಕುರುವ ಬಸವರಾಜ, ಪದ್ಮಶ್ರೀ ಡಾ. ರಾಣಿ ಮಾಚಯ್ಯ, ಜಗದೀಶ ಮಲ್ನಾಡ್ ಉದ್ಘಾಟನೆ ನೆರವೇರಿಸಿದರು.

ವೇದಿಕೆಯಲ್ಲಿ ವೀರಭೂಮಿ ಕಲಾಗ್ರಾಮದ ಹೆಚ್ ಆರ್ ನಾಗೇಂದ್ರ, ಪುಷ್ಪ, ಬಿ ಸಿದ್ಧರಾಜಯ್ಯ ಕಲಾಗ್ರಾಮದ ಬಳಗ ಮತ್ತು ಇತರರು ಇದ್ದರು.

ವರದಿ: ಶಿವರಾಜ್ ಮೋತಿ

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X