ಮೈಕ್ರೋ ಫೈನಾನ್ಸ್ ದಿಂದ ಪಡೆದ ಮರುಪಾವತಿಸಲು ಸಾಧ್ಯವಾಗದೆ ಅಧಿಕಾರಿಗಳ ಕಿರುಕುಳಕ್ಕೆ ನೊಂದು ಮಹಿಳೆಯೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ನಗರದ ಸಿದ್ದೇಶ್ವರ ಕಾಲೋನಿಯಲ್ಲಿ ಶನಿವಾರ ಮಧ್ಯಾಹ್ನ ನಡೆದಿದೆ.
ಗಂಗಮ್ಮ (38) ಆತ್ಮಹತ್ಯೆಗೆ ಶರಣಾದ ಮಹಿಳೆ. ಗಂಗಮ್ಮ ಅವರು ಸುಮಾರು ಆರು ಮೈಕ್ರೋ ಫೈನಾನ್ಸ್ ಗಳಿಂದ ಕಿರು ಸಾಲ ಪಡೆದಿದ್ದರು. ಸೂಕ್ತ ಸಮಯಕ್ಕೆ ಸಾಲದ ಮರುಪಾವತಿ ಮಾಡದ ಕಾರಣ ಅಧಿಕಾರಿಗಳು ಮನೆ ಬಾಗಿಲಿಗೆ ಬಂದು ಮರ್ಯಾದೆ ತೆಗೆದಿದ್ದರು. ಗಂಗಮ್ಮ ಸಾಲ ತೀರಿಸಲು ಮನೆ ಮಾರಾಟ ಮಾಡಿದರೂ ಸಾಲ ಸಂಪೂರ್ಣ ತೀರಿಸಲು ಆಗಲಿಲ್ಲ.
ಬ್ಯಾಂಕ್ ಅಧಿಕಾರಿಗಳು ಮನೆಗೆ ಬಂದು ಸಾಲ ಪಾವತಿಸುವಂತೆ ಪಿಡಿಸುತ್ತಿರುವುದು, ಸಾಲದ ಮೇಲೆ ವಿಧಿಸುವ ಬಡ್ಡಿ, ಚಕ್ರಬಡ್ಡಿಯಿಂದ ಮಹಿಳೆಗೆ ಮಾನಸಿಕ ಒತ್ತಡ ಹೆಚ್ಚಾಗಿ ಕೊನೆಗೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆʼ ಎನ್ನಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಹಂದಿಗಳ ಜೊತೆ ಗುದ್ದಾಡಲ್ಲ: ಕುಮಾರಸ್ವಾಮಿಗೆ ಲೋಕಾಯುಕ್ತ ಎಡಿಜಿಪಿ ಚಂದ್ರಶೇಖರ್ ಮಾರ್ಮಿಕ ಉತ್ತರ
ಮೃತರಿಗೆ ಪತಿ, ಪುತ್ರಿ ಹಾಗೂ ಇಬ್ಬರು ಪುತ್ರರಿದ್ದಾರೆ. ಪತಿ ಲಾರಿ ಚಾಲಕ ಕೆಲಸ ಮಾಡುತ್ತಾರೆ, ತಾಯಿಯನ್ನು ಕಳೆದಕೊಂಡ ಪುಟ್ಟ ಮಕ್ಕಳ, ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.