ತನ್ನ ಬಳಿಯಿದ್ದ 500 ರೂ.ಗಳನ್ನು ಕದ್ದಿರಬಹುದೆಂಬ ಅನುಮಾನದ ಮೇಲೆ ವ್ಯಕ್ತಿಯೊಬ್ಬ ತನ್ನ ಮಗನನ್ನೇ ಹೊಡೆದು ಕೊಂದಿರುವ ದುರ್ಘಟನೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದಿದೆ.
ಗಾಜಿಯಾಬಾದ್‌ನ ಭೋಜ್‌ಪುರ ಪೊಲೀಸ್ ಠಾಣೆಯ ತ್ಯೋಡಿ ಗ್ರಾಮದಲ್ಲಿ ಘಟನೆ ನಡೆದಿದೆ. 10 ವರ್ಷದ ಮಗನನ್ನು ಬೆಲ್ಟ್ ಮತ್ತು ಕೋಲಿನಿಂದ ಥಳಿಸಿದ್ದು, ಬಾಲಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಘಟನಾ ಸ್ಥಳಕ್ಕೆ ಭೋಜ್‌ಪುರ ಪೊಲೀಸರು ತೆರಳಿದ್ದು, ಬಾಲಕ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮಾಹಿತಿ ಪ್ರಕಾರ, ತನ್ನ ಮಗ ಅಹದ್ 500 ರೂ. ಕದ್ದಿದ್ದಾನೆಂದು ಆರೋಪಿ ನೌಶಾದ್ ಅನುಮಾನಗೊಂಡಿದ್ದಾರೆ. ಹಣದ ಬಗ್ಗೆ ವಿಚಾರಿಸಿ, ಬೆಲ್ಟ್‌ನಿಂದ ಥಳಿಸಿದ್ದಾರೆ. ನಿರಂತರವಾಗಿ ಹಲ್ಲೆ ಮಾಡಿದ್ದರಿಂದ ಅಹದ್ ಪ್ರಜ್ವೆ ತಪ್ಪಿದ್ದಾರೆ. ಆತನನ್ನು ಕುಟುಂಬಸ್ಥರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ, ಅತ ಆ ವೇಳೆಗಾಗಲೇ ಮೃತಪಟ್ಟಿದ್ದನೆಂದು ವೈದ್ಯರು ಘೋಷಿಸಿದ್ದಾರೆ ಎಂದು ವರದಿಯಾಗಿದೆ.