ಆನೆ ದಾಳಿಗೆ ರೈತ ಬಲಿಯಾಗಿದ್ದು, ಸರ್ಕಾರ ಆತನ ಕುಟುಂಬಕ್ಕೆ ₹25 ಲಕ್ಷ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘದಿಂದ ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ರಾಜ್ಯ ರೈತ ಸಂಘದಿಂದ ಪ್ರತಿಭಟನೆ ನಡಿಸಿ ಮನವಿ ನೀಡಿ ಮಾತನಾಡಿದ ರಾಜ್ಯ ರೈತ ಸಂಘದ ಬಸವರಾಜಪ್ಪ ಅವರು, “ಶಿವಮೊಗ್ಗ ಗ್ರಾಮಾಂತರದ ಪುರದಾಳ ಗ್ರಾಮದ ಹನುಮಂತಪ್ಪ ದಾಸಣ್ಣನವರು ಜಮೀನಿನಲ್ಲಿ ಕೆಲಸ ಮಾಡುತ್ತಿರುವಾಗ ಆನೆ ದಾಳಿಗೆ ಒಳಗಾಗಿ ಮೃತಪಟ್ಟಿದ್ದಾರೆ. ಅರಣ್ಯ ಇಲಾಖೆಯವರು ಇವರ ಕುಟುಂಬಕ್ಕೆ ಸರ್ಕಾರ ನಿಗದಿಮಾಡಿರುವಂತೆ ಕೂಡಕಲೇ ₹25 ಲಕ್ಷ ಪರಿಹಾರ ನೀಡಬೇಕು” ಎಂದು ಆಗ್ರಹಿಸಿದ್ದಾರೆ.

“ಆನೆಗಳು ಗುಂಪಾಗಿ ಬಂದು ರೈತರ ಜಮೀನಿನ ಮೇಲೆ ದಾಳಿ ಮಾಡುತ್ತಿದ್ದು, ರೈತರು ಬೆಳೆದಿರುವ ಮೆಕ್ಕಜೋಳ, ಬಾಳೆ, ಅಡಿಕೆ ಬೆಳೆಗಳನ್ನು ನಾಶಪಡಿಸಿ ರೈತರಿಗೆ ಅಪಾರ ನಷ್ಟವುಂಟು ಮಾಡುತ್ತಿವೆ. ಅಲ್ಲದೇ ಕೆಲವು ಗ್ರಾಮಗಳಿಗೆ ನುಗ್ಗಿದ ಉದಾಹರಣೆಗಳಿಂದ ಸ್ಥಳೀಯರು ಆತಂಕದಿಂದ ಬದುಕುತ್ತಿದ್ದಾರೆ” ಎಂದರು.
“ಸ್ಥಳೀಯ ರೈತರಿಗೆ ರಕ್ಷಣೆ ಒದಗಿಸುವುದರ ಜೊತೆಗೆ ಸೂಕ್ತ ಬೆಳೆನಷ್ಟ ಪರಿಹಾರವನ್ನು ಕೊಡಬೇಕು ಮತ್ತು ಜಮೀನಿಗೆ ಗ್ರಾಮದೊಳಗೆ ಅನೆಗಳು ಬಾರದಂತೆ ತಡೆಯಬೇಕು. ಜತೆಗೆ ಆನೆಗಳನ್ನು ಕಾಡಿಗೆ ಕಳುಹಿಸುವ ಕೆಲಸ ಮಾಡಬೇಕು” ಎಂದು ಒತ್ತಾಯಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೊಡಗು | ಗೋಣಿಕೊಪ್ಪಲು-ಕುಟ್ಟ ಮಾರ್ಗದ ರಸ್ತೆ ಮೇಲ್ದರ್ಜೆಗೆ ಕೇಂದ್ರ ಸರ್ಕಾರ ಅನುಮತಿ: ಸಂಸದ ಯದುವೀರ್ ಒಡೆಯರ್
ರಾಜ್ಯಾದ್ಯಂತ ಕಾಡು ಪಾಣಿಗಳೂ ಮತ್ತು ಮಾನವನ ಮಧ್ಯೆ ಇತ್ತೀಚಿನ ದಿನಗಳಲ್ಲಿ ಸಂಘರ್ಷ ನಡೆಯುತ್ತಲೇ ಇದೆ. ಈ ಬಗ್ಗೆ ರೈತ ಸಂಘ ಸರ್ಕಾರದ ಜತೆಗೆ ಮಾತುಕತೆ ನಡೆಸಿ ಒತ್ತಾಯ ಮಾಡಿದ್ದೇವೆ. ಆದರೂ ಸರ್ಕಾರ ಉದಾಸೀನ ತೋರುತ್ತಿದೆ. ರೈತರ ಪ್ರಾಣದ ಜತೆ ಚೆಲ್ಲಾಟವಾಡುತ್ತಿವೆ. ರಾಜ್ಯಾದ್ಯಂತ ಕೊಡಲೇ ಈ ಸಂಘರ್ಷವನ್ನು ತಪ್ಪಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ಕೋರಿದರು.