ದ್ವೇಷ ರಾಜಕಾರಣ | ಕಟಕಟೆಯಲ್ಲಿ ಮೂವರು ಸಿಎಂಗಳು…!

Date:

Advertisements

ಇದು ಮೋದಿ ಯುಗ, ಮೋದಿ ಅಡಳಿತದ ಯುಗ, ಸರ್ವಾಧಿಕಾರಿ ಧೋರಣೆ ಯುಳ್ಳ ಯಗ. ಇಲ್ಲಿ ವಿಮರ್ಶೆಗೆ ಅವಕಾಶವಿಲ್ಲ. ಟೀಕೆಗೆ ಆಸ್ಪದವಿಲ್ಲ. ವಿರೋಧ-ಪ್ರತಿರೋಧಕ್ಕೆ ಮನ್ನಣೆಯೇ ಇಲ್ಲ. ಯಾರು ಮೋದಿ ವಿರುದ್ಧ ಮಾತನಾಡುವಂತಿಲ್ಲ. ದನಿ ಎತ್ತುವಂತಿಲ್ಲ. ದನಿ ಎತ್ತಲು ಯತ್ನಿಸಿದವರ ಮೇಲೆ ನಡೆಯುವುದು ದ್ವೇಷ ರಾಜಕಾರಣ ಮತ್ತು ದಮನ. ಅದು ಸಾಮಾನ್ಯ ಪ್ರಜೆಯಾಗಿದ್ದರು, ಸಂಘಟಕನಾಗಿದ್ದರೂ, ಪತ್ರಕರ್ತನಾಗಿದ್ದರೂ, ಅಷ್ಟೇ ಯಾಕೆ ವಿಪಕ್ಷಗಳ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಯೇ ಆಗಿದ್ದರೂ.

ಹೌದು, ಮೋದಿ ತಮ್ಮ ವಿರುದ್ಧ ಮಾತನಾಡುವವರನ್ನು ಸಹಿಸುವುದಿಲ್ಲ. ತಮ್ಮ ವಿರುದ್ಧ ಮಾತನಾಡಿದರೆ, ಅದು ಮುಖ್ಯಮಂತ್ರಿಯೇ ಆಗಿದ್ದರೂ, ಅವರು ಕಿರುಕುಳ ಅನುಭವಿಸೋದು, ಜೈಲು ಸೇರೋದು ಖಚಿತ. ಅದಕ್ಕೆ ಉದಾಹರಣೆಯಾಗಿ ಇಬ್ಬರು ಮುಖ್ಯಮಂತ್ರಿಗಳು ಈಗಾಗಲೇ ಜೈಲಿಗೆ ಹೋಗಿ ಬಂದಿದ್ದಾರೆ. ಮತ್ತೊಬ್ಬ ಮುಖ್ಯಮಂತ್ರಿ ವಿರುದ್ಧ ಎಫ್ಐಆರ್ ದಾಖಲಾಗಿದೆ. ಅದೂ, ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ. ಮೋದಿ ಸರ್ಕಾರ, ಇದೇ ವರ್ಷದಲ್ಲಿ ಮೂವರು ಮುಖ್ಯಮಂತ್ರಿಗಳನ್ನು ಕಟಕಟೆಗೆ ತಂದು ನಿಲ್ಲಿಸಿದೆ.

ದೆಹಲಿ ಸಿಎಂ ಅರವಿಂದ್ ಕೇಜ್ರೀವಾಲ್, ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೋರೆನ್ ಇಬ್ಬರು ಸಿಎಂಗಳು ಜೈಲು ಸೇರಿ, ಜಾಮೀನು ಪಡೆದು ಹೊರಬಂದಿದ್ದಾರೆ. ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

Advertisements

ಮೊದಲನೇಯದಾಗಿ ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರೀವಾಲ್ ಅವರ ವಿಚಾರಕ್ಕೆ ಬರೋಣ… ಅಣ್ಣಾ ಹಜಾರೆ ಅವರ ಜೊತೆಗೆ ಗುರುತಿಸಿಕೊಂಡಿದ್ದ ಇವರು ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದ್ದರು. ಬಳಿಕ, ತಮ್ಮದೇ ಆದ ಆಮ್ ಆದ್ಮಿ ಪಕ್ಷವನ್ನ ಕಟ್ಟಿ ಬೆಳೆಸುವಲ್ಲಿ ಸಫಲರಾಗಿದ್ದರು. ಅಲ್ಲದೇ, ಗ್ಯಾರೆಂಟಿ ಯೋಜನೆಗಳು ಸೇರಿದಂತೆ ದೆಹಲಿಯಲ್ಲಿ ಉತ್ತಮ ಶಿಕ್ಷಣ ನೀಡುವ ವ್ಯವಸ್ಥೆಯನ್ನ ರೂಪಿಸಿದ್ರು, ಪ್ರಾದೇಶಿಕ ಪಕ್ಷವಾಗಿದ್ದ ಎಎಪಿಯನ್ನ ರಾಷ್ಟ್ರೀಯ ಪಕ್ಷವಾಗಿ ಬೆಳೆಸಿದ್ದರು. ಪಂಬಾಬ್‌ನಲ್ಲಿ ಎಎಪಿ ಪಕ್ಷ ಗೆದ್ದು ಅಧಿಕಾರವನ್ನ ತನ್ನ ಹಿಡಿತಕ್ಕೆ ತೆಗೆದುಕೊಂಡಿತು. ಅಲ್ಲದೇ, ಹರಿಯಾಣ, ಗೋವಾದಲ್ಲಿ ಎಎಪಿ ತನ್ನ ಚಾಪನ್ನ ಮೂಡಿಸಿದೆ. ಮೋದಿಯ ತವರು ರಾಜ್ಯ ಗುಜರಾತ್‌ನಲ್ಲಿಯೂ ಕೂಡ ಎಎಪಿ ಲಗ್ಗೆಯಿಟ್ಟಿದೆ. ಜೊತೆಗೆ, ಕೇಜ್ರಿವಾಲ್ ಅವರ ವರ್ಚಸ್ಸು, ಪ್ರಭಾವ ಕೂಡ ಹೆಚ್ಚುತ್ತಿದೆ.

ಇದನ್ನ ಸಹಿಸಲಾಗದೇ, ಮೋದಿ ಸರ್ಕಾರ ಸ್ವಾಯತ್ತ ಸಂಸ್ಥೆಗಳಾದ ಇಡಿ, ಐಟಿ, ಸಿಬಿಐನಂತರ ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ದೆಹಲಿ ಮುಖ್ಯಮಂತ್ರಿಯಾಗಿದ್ದ ಅರವಿಂದ ಕೇಜ್ರಿವಾಲ್ ಅವರನ್ನ ಆಪಾದಿತ ಅಬಕಾರಿ ನೀತಿ ಹಗರಣದಲ್ಲಿ ಬಂಧಿಸಿ ಜೈಲಿನಲ್ಲಿರಿಸಿತ್ತು. ಇನ್ನು ಇಡಿ ಪ್ರಕರಣದಲ್ಲಿ ಅರವಿಂದ್ ಕೇಜ್ರಿವಾಲ್ ಅವರು ಬಿಡುಗಡೆಯಾಗುವ ಹೊಸ್ತಿಲಿನಲ್ಲಿರುವಾಗ ಸಿಬಿಐ ಅರವಿಂದ್ ಕೇಜ್ರಿವಾಲ್ ಅವರನ್ನ ಬಂಧಿಸಿತು.

ಇಡಿ ಪ್ರಕರಣದಲ್ಲಿ ಜಾಮೀನು ಪಡೆಯುತ್ತಿದ್ದರೂ, ಕೇಜ್ರಿವಾಲ್‌ರನ್ನು ಬಂಧಿಸಿದ ಸಿಬಿಐ ನಡೆಯ ವಿರುದ್ಧ ಅಸಮಧಾನ ವ್ಯಕ್ತಪಡಿಸಿದ್ದ ಸುಪ್ರೀಂ ಕೋರ್ಟ್, ‘ತನಿಖಾ ಸಂಸ್ಥೆಯು ಪಂಜರದ ಗಿಳಿಯಾಗಬಾರದು’ ಎಂದು ಛೀಮಾರಿ ಹಾಕಿತ್ತು. ಲೋಕಸಭಾ ಚುನಾವಣೆಯ ಸಮಯದಲ್ಲಿ ಒಬ್ಬ ಪ್ರಸಿದ್ಧ ರಾಜಕಾರಣಿಯನ್ನ ರಾಜಕೀಯ ತಂತ್ರಗಾರಿಕೆ ಬಳಸಿ ಆಡಳಿತದಲ್ಲಿರುವ ಬಿಜೆಪಿ ಸರ್ಕಾರ ಕೇಜ್ರೀವಾಲ್ ಅವರ ಹೆಡೆಮುರಿ ಕಟ್ಟಿದೆ ಎಂಬ ಆರೋಪ ಹೆಚ್ಚು ಸದ್ದು ಮಾಡಿತ್ತು.

ಇನ್ನು ಎರಡನೇ ಸಿಎಂ ಅಂದರೆ ಅದು ಜಾರ್ಖಂಡನ ಸಿಎಂ ಹೇಮಂತ್ ಸೋರೆನ್ ಅವರು, ಕಳೆದ ನಾಲ್ಕೂವರೆ ವರ್ಷದ ಹಿಂದೆ ನಡೆದಿದ್ದ ಜಾರ್ಖಂಡ್ ವಿಧಾನಸಭೆ ಚುನಾವಣೆಯಲ್ಲಿ ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಬಿಜೆಪಿಯನ್ನ ಹಿಂದಿಕ್ಕಿ ಅಧಿಕಾರಕ್ಕೆ ಬಂದಿತ್ತು. ಕಾಂಗ್ರೆಸ್ ಹಾಗೂ ಆರ್ ಜೆಡಿ ಕೂಡ ಹೇಮಂತ್ ಸೋರೆನ್ ಅವರನ್ನ ಬೆಂಬಲಿಸಿದ್ದರು. ಆನಂತರ ಹೇಮಂತ್ ಅವರು ಸಿಎಂ ಆಗಿದ್ದರು. ಆದರೆ, ಹೇಮಂತ್ ಸೋರೆನ್ ವಿರುದ್ದ ಅಕ್ರಮ ಹಣ ಸಂಗ್ರಹಣೆ ಆರೋಪದ ಮೇಲೆ ಮೊಕದ್ದಮೆ ದಾಖಲಾಗಿತ್ತು.  ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಪ್ರಕರಣ ದಾಖಲಿಸಿದ್ದರಿಂದ ಈ ವರ್ಷದ ಜನವರಿಯಲ್ಲಿ ಹೇಮಂತ್ ಸೋರೆನ್ ಅವರನ್ನ ಬಂಧನ ಮಾಡಲಾಗಿತ್ತು. ಐದು ತಿಂಗಳು ಜೈಲು ಸೇರಿದ್ದ ಹೇಮಂತ್ ಸೋರೆನ್ ಅವರು ಸಿಎಂ ಹುದ್ದೆಗೆ ರಾಜೀನಾಮೆ ನೀಡಿದ್ದರು. ಜಾಮೀನು ಸಿಕ್ಕ ಬಳಿಕ ಬಿಡುಗಡೆಯಾಗಿ ಮತ್ತೆ ಸಿಎಂ ಗಾದಿ ಏರಿದ್ದಾರೆ.

ಇದೀಗ, ಇಬ್ಬರು ಸಿಎಂಗಳು ಬಂಧನವಾಗಿ ಜೈಲಿನಿಂದ ಬಿಡುಗಡೆಯಾಗಿದ್ದಾರೆ. ಇದೀಗ, ಮೂರನೇ ಸಿಎಂ ಅಂದರೆ, ಕರ್ನಾಟಕದ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಮೇಲೆ… ಕರ್ನಾಟಕದಲ್ಲಿ ಇಡೀ ತಮ್ಮ ಸಂಪೂರ್ಣ ರಾಜಕೀಯ ಜೀವನದಲ್ಲಿ ಕಳಂಕ ರಹಿತವಾಗಿ ಇದ್ದ ರಾಜಕಾರಣಿ ಅಂದ್ರೆ, ಅದು ಸಿದ್ಧರಾಮಯ್ಯ ಅವರು… ಬಡವರು, ಹಿಂದುಳಿದ ವರ್ಗದವರಿಗಾಗೇ ಹೆಚ್ಚು ಶ್ರಮಿಸಿದ್ದಾರೆ. ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಚುನಾವಣೆ ಪೂರ್ವದಲ್ಲಿ ನೀಡಿದ್ದ 5 ಗ್ಯಾರೆಂಟಿಗಳನ್ನು ಅಧಿಕಾರಕ್ಕೆ ಬಂದ ಆರೇ ತಿಂಗಳಲ್ಲಿ ಜಾರಿಗೊಳಿಸಿದ್ದಾರೆ. ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ ರಾಜಕಾರಣಿಯಾಗಿದ್ದಾರೆ.

ಅವರ ರಾಜಕಾರಣಕ್ಕೆ ಭ್ರಷ್ಟಾಷಾರದ ಕಳಂಕ ಹೊರಿಸಲು ಬಿಜೆಪಿ ಕಸರತ್ತು ನಡೆಸುತ್ತಿದೆ. ಮುಡಾ ನಿವೇಶನ ಹಂಚಿಕೆಯಲ್ಲಿ ಸಿದ್ದರಾಮಯ್ಯ ಅಕ್ರಮವಾಗಿ ತಮ್ಮ ಪತ್ನಿಗೆ ನಿವೇಶನ ಕೊಡಿಸಿದ್ದಾರೆ ಎಂದು ಆರೋಪಿಸಿ, ಬಿಜೆಪಿಗರು ಪಾದಯಾತ್ರೆ ನಡೆಸಿದ್ದರು. ಈ ಬಗ್ಗೆ ರಾಜ್ಯಪಾಲರಿಗೆ ಮೈಸೂರು ಮೂಲದ ಸ್ನೇಹಮಯಿ ಕೃಷ್ಣ, ಮಡಿಕೇರಿಯ ಟಿ.ಜೆ ಅಬ್ರಹಾಂ ಹಾಗೂ ಪ್ರದೀಪ್ ಎನ್ನುವವರು ದೂರು ನೀಡಿದ್ದರು. ದೂರು ನೀಡಿದ್ದ ದಿನವೇ ಸಿದ್ದರಾಮಯ್ಯ ಅವರಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ನೋಟಿಸ್ ಜಾರಿ ಮಾಡಿದ್ದರು. ಅಲ್ಲದೇ, ರಾಜ್ಯಪಾಲರು ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿ ಆದೇಶಿಸಿದ್ದರು. ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಶನ್ ಅನುಮತಿಯನ್ನು ಹೈಕೋರ್ಟ್ನಲ್ಲಿ ಪ್ರಶ್ನಿಸಿ ಹಾಗೂ ರಾಜ್ಯಪಾಲರು ನೀಡಿರುವ ಅನುಮತಿಯನ್ನು ರದ್ದು ಕೋರಿ ಸಿದ್ಧರಾಮಯ್ಯ ಅವರು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ರಾಜ್ಯಪಾಲರ ಆದೇಶವನ್ನು ಎತ್ತಿಹಿಡಿದ ಬಳಿಕ ಒಂದೇ ದಿನದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಸಿದ್ದರಾಮಯ್ಯ ವಿರುದ್ಧ ಎಫ್ಐಆರ್ ದಾಖಲಿಸಲು ಆದೇಶ ನೀಡಿದೆ. ಈ ಆಪಾದಿತ ಮುಡಾ ಪ್ರಕರಣದಲ್ಲಿ ಸಿದ್ಧರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲಿಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸೂಚನೆ ನೀಡುತ್ತದೆ. ಈ ಎಲ್ಲ ಪ್ರಹಸನಗಳ ನಡುವೆ, ಸಿದ್ದರಾಮಯ್ಯ ಅವರ ಪತ್ನಿ ಮುಡಾ ತಮಗೆ ಹಂಚಿಕೆ ಮಾಡಿದ್ದ ಸೈಟುಗಳನ್ನು ಹಿಂದಿರುಗಿಸಿದ್ದಾರೆ. ಸಿದ್ದರಾಮಯ್ಯ ವಿರುದ್ಧದ ಆರೋಪ, ದ್ವೇಷ ರಾಜಕಾರಣದಿಂದ ನೊಂದಿದ್ದೇನೆಂದು ಹೇಳಿಕೊಂಡಿದ್ದಾರೆ.

ಬಂಧನಕ್ಕೊಳಗಾಗಿ ಜೈಲಿನಿಂದ ಹೊರಬಂದಿರುವ ಮತ್ತು ಎಫ್‌ಐಆರ್ ದಾಖಲಾಗಿರುವ ಈ ಮೂವರು ಮುಖ್ಯಮಂತ್ರಿಗಳು ದೇಶದ ಮೂರು ಭಾಗಗಳಲ್ಲಿ ಬಿಜೆಪಿ ವಿರುದ್ಧ ಗಟ್ಟಿ ಧ್ವನಿಯಲ್ಲಿ ನಿಂತವರು. ಮೋದಿ ಸರ್ಕಾರ ಜನ-ವಿರೋಧಿ ನೀತಿಗಳು, ಪಕ್ಷಪಾತಿ ಧೋರಣೆಗಳನ್ನು ಖಂಡಿಸಿದವರು. ಬಿಜೆಪಿ-ಆರ್‌ಎಸ್‌ಎಸ್‌ನ ಕೋಮುವಾದಿ, ಮನುವಾದಿ ಸಿದ್ದಾಂತಗಳನ್ನು ಖಂಡಿಸಿದವರು. ಅಲ್ಲದೆ, ಬಿಜೆಪಿ ಆಕ್ರಮಿಸಿಕೊಳ್ಳಲು ಯತ್ನಿಸುತ್ತಿರುವ ರಾಜ್ಯಗಳಲ್ಲಿ ಬಿಜೆಪಿಗೆ ಸವಾಲಾಗಿ ನಿಂತಿರುವವರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಅಕ್ರಮ ವಾಸ; ಪಾಕಿಸ್ತಾನ ಪ್ರಜೆ ಸೇರಿ ನಾಲ್ವರ ಬಂಧನ

ಬಹುಮುಖ್ಯವಾಗಿ, ಕೇಜ್ರಿವಾಲ್ ಭಷ್ಟ್ರಚಾರ ವಿರೋಧಿ ಆಂದೋಲನದಿಂದಲೇ ಅಧಿಕಾರಕ್ಕೆ ಬಂದವರು. ಸೊರೆನ್ ಈಶಾನ್ಯ ರಾಜ್ಯದ ಸ್ಥಳೀಯರ ನಾಯಕರಾಗಿ ಬಂದವರು. ಅದೇ ರೀತಿ, ಸಿದ್ದರಾಮಯ್ಯ ಅಹಿಂದ ನಾಯಕರಾಗಿ ಛಾಪು ಮೂಡಿಸಿರುವವರು. ಈ ಮೂವರ ಮೇಲೆ ಈವರೆಗೆ ಗಮನಾರ್ಹವಾದ ಯಾವುದೇ ಆರೋಪ, ಕಳಂಕಗಳಿರಲಿಲ್ಲ. ಹೀಗಾಗಿ, ಅವರ ಮೇಲೆಯೇ ಆರೋಪ ಹೊರಿಸಿ, ಜೈಲಿಗಟ್ಟಿದರೆ, ತಾವು ಯಾರನ್ನೂ ಬಿಡುವುದಿಲ್ಲ ಎಂಬ ಸಂದೇಶವನ್ನು ರವಾನಿಸಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಆದರೆ, ಬಿಜೆಪಿಯ ಎಲ್ಲ ತಂತ್ರಗಳು ಫಲಿಸುವುದಿಲ್ಲ. ಈ ದೇಶಕ್ಕೆ ಭದ್ರವಾದ ಸಂವಿಧಾನವಿದೆ. ಗಟ್ಟಿಯಾದ ಕಾನೂನುಗಳಿವೆ. ಅವೆಲ್ಲವನ್ನೂ ಬುಡಮೇಲು ಮಾಡಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿಯೇ, ಕೇಜ್ರಿವಾಲ್ ಮತ್ತು ಸೊರೇನ್ ಜಾಮೀನು ಪಡೆದಿದ್ದಾರೆ. ಜೈಲಿನಿಂದ ಹೊರಬಂದಿದ್ದಾರೆ. ಸಿದ್ದರಾಮಯ್ಯ ಅವರೂ ಕೂಡ ಕಾನೂನು ಹೋರಾಟ ನಡೆಸುತ್ತಿದ್ದಾರೆ. ಇದೇ ವೇಳೆ, ಬಿಜೆಪಿ ತಂತ್ರಗಳೂ ಬಟಾಬಯಲಾಗುತ್ತಿವೆ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಪರಾಷ್ಟ್ರಪತಿ ಚುನಾವಣೆ | ಜಾತ್ಯತೀತ ಹೋರಾಟದ ಹಿನ್ನೆಲೆಯ ಅಭ್ಯರ್ಥಿಗೆ RSS ಕಟ್ಟಾಳು ಎದುರಾಳಿ

2025ರ ಉಪರಾಷ್ಟ್ರಪತಿ ಚುನಾವಣೆಯು ಕೇವಲ ಇಬ್ಬರು ವ್ಯಕ್ತಿಗಳ ನಡುವಿನ ಸ್ಪರ್ಧೆಯಲ್ಲ; ಅದು...

ಪಟ್ಟಣ ಪಂಚಾಯತ್ ಚುನಾವಣೆ: ಮೂರರಲ್ಲಿ ಕಾಂಗ್ರೆಸ್‌ಗೆ ಮೇಲುಗೈ; ಎರಡರಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜಯ

ಕರ್ನಾಟಕದಲ್ಲಿ ಐದು ಪ್ರದೇಶಗಳು ತಾಲೂಕು ಸ್ಥಾನಕ್ಕೇರಿದ ಬಳಿಕ ರಚನೆಯಾದ ಪಟ್ಟಣ ಪಂಚಾಯಿತಿಗೆ...

ಅಲೆಮಾರಿಗಳಿಗೆ ಅನ್ಯಾಯ; ಸರ್ಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶ

ಮೀಸಲು ಹಂಚಿಕೆಯ ವಿವರಗಳು ಸ್ಪಷ್ಟವಾಗುತ್ತಿದ್ದಂತೆ ಸಂಭ್ರಮದ ಮನೆಯಲ್ಲಿ ಸಾವಿನ ಸೂತಕ ಆವರಿಸತೊಡಗಿತು....

Download Eedina App Android / iOS

X