ತುಮಕೂರು | ವಿಷವಿಲ್ಲದೇ ಜನರಿಗೆ ಆಹಾರ ನೀಡುವವನೇ ನಿಜವಾದ ರೈತ: ಸಿದ್ದಲಿಂಗ ಸ್ವಾಮೀಜಿ

Date:

Advertisements

ರಾಸಾಯನಿಕ ಕೃಷಿಯ ಮೂಲಕ ಒಂದು ಎಕರೆಯಲ್ಲಿ ಐವತ್ತು ಕ್ವಿಂಟಾಲ್ ಭತ್ತ ಬೆಳೆದವ ಪ್ರಗತಿಪರ ರೈತನಲ್ಲ. ಸ್ವಾಭಾವಿಕ ಗೊಬ್ಬರಗಳನ್ನು ಬಳಸಿ, ಜನರಿಗೆ ವಿಷವಿಲ್ಲದೆಯೇ ಆಹಾರ ನೀಡುವವನೇ ನಿಜವಾದ ರೈತ. ಈ ನಿಟ್ಟಿನಲ್ಲಿ ದೊಡ್ಡ ಹೊಸೂರಿನ ಗಾಂಧಿ ಸಹಜ ಬೇಸಾಯ ಆಶ್ರಮ ಒಂದು ದೊಡ್ಡ ಪವಾಡವನ್ನೇ ಸೃಷ್ಟಿಸಿದೆ ಎಂದು ಸಿದ್ದಗಂಗಾ ಮಠಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ತಿಳಿಸಿದರು.

ಗಾಂಧಿ ಸಹಜ ಬೇಸಾಯ ಆಶ್ರಮದ ವತಿಯಿಂದ ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನ ನಿರ್ದೇಶನದಂತೆ ಬೇಯರ್ ಮತ್ತು ಮಾನ್ಸೆಂಟೋ ಕಂಪನಿಗಳ ಸಹಯೋಗದಲ್ಲಿ ತರಲು ಹೊರಟಿರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯನ್ನು ವಿರೋಧಿಸಿ ದೊಡ್ಡ ಹೊಸೂರಿನಲ್ಲಿ ಹಮ್ಮಿಕೊಂಡಿರುವ ದೊಡ್ಡ ಹೊಸೂರು ಸತ್ಯಾಗ್ರಹಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕೃಷಿ ಎಂಬುದು ಒಂದು ದಿನಕ್ಕೆ ಫಲಕೊಡುವಂತಹದ್ದಲ್ಲ. ಕೃಷಿಯಲ್ಲಿ ಭೂಮಿಯ ಫಲವತ್ತತೆಯ ಜೊತೆಗೆ, ಹವಾಮಾನಕ್ಕೆ ಅನುಗುಣವಾಗಿ ಬೆಳೆ ಬೆಳೆಯುವ ಮೂಲಕ ಸಾಲ ರಹಿತ ಕೃಷಿಕರನ್ನು ಸೃಷ್ಟಿಸುವುದೇ ಮೂಲ ಉದ್ದೇಶವಾಗಬೇಕು ಎಂದರು.

ಸತ್ಯಾಗ್ರಹವೆಂಬುದು ಕೆಟ್ಟದು ಬೇಡ ಎಂದು ನಡೆಸುವ ಚಳವಳಿ. ಕುಲಾಂತರಿ ಬೀಜಗಳಿಂದ ಜನರ ಮೇಲಾಗುತ್ತಿರುವ ದುಷ್ಪರಿಣಾಮ ಹೇಳತೀರದು. ಕ್ಯಾನ್ಸರ್‌ಗೆ ಮೂಲ ಕಾರಣ ಕುಲಾಂತರಿ ತಳಿ ಎಂಬುದು ಹಲವಾರು ಸಂಶೋಧನೆಗಳಿಂದ ದೃಢಪಟ್ಟಿದೆ. ಹಾಗಾಗಿ, ರೈತರು ಕುಲಾಂತರಿ ತಳಿ ಬೀಜಗಳನ್ನು ಬಳಸುವುದಿಲ್ಲ ಎಂಬ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ. ಇದು ಇಡೀ ರಾಜ್ಯವಲ್ಲ, ದೇಶವನ್ನು ವ್ಯಾಪಿಸಬೇಕಿದೆ. ಮುಂದಿನ ಪೀಳಿಗೆಗೆ ಒಳ್ಳೆಯ ಪರಿಸರವನ್ನು ಬಿಟ್ಟು ಹೋಗಬೇಕಿದೆ. ಇದೇ ಈ ಸತ್ಯಾಗ್ರಹದ ಮೂಲ ಆಶಯವಾಗಿದೆ. ವಿಜ್ಞಾನಿಗಳು, ರೈತರು, ವಿದ್ಯಾರ್ಥಿಗಳು ಪಾಲ್ಗೊಳ್ಳುವ ಮೂಲಕ ನಾಡಿಗೆ ಒಳ್ಳೆಯ ಸಂದೇಶ ನೀಡುತ್ತಿದೆ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ತಿಳಿಸಿದರು.

Advertisements

ಕೃಷಿ ವಿಜ್ಞಾನಿ ಮಂಜುನಾಥ್, ರೈತರಾದ ರವೀಶ್, ಪರಿಸರವಾದಿ ಯತಿರಾಜು ಅವರುಗಳು ಸೇರಿ ಮಾಡಿರುವ ಗಾಂಧಿ ಸಹಜ ಬೇಸಾಯ ಆಶ್ರಮ ನಿಜಕ್ಕೂ ಗಾಂಧಿಯ ನೆನಪನ್ನು ತರುತ್ತಿದೆ. ರವೀಶ್ ಅವರ ತೋಟಕ್ಕೆ ಕಾಲಿಟ್ಟಾಗ ಅಹ್ಲಾದಕರ ವಾತಾವರಣ ಉಂಟಾಯಿತು. ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರುವ ಗಿಡಮರಗಳು ಇಲ್ಲಿವೆ. ಗಿಡಗಳಿಗೆ ಅಗತ್ಯವಿರುವಷ್ಟೇ ಪೋಷಕಾಂಶಗಳನ್ನು ನೀಡಿ, ಬರಡು ಭೂಮಿಯನ್ನು ಫಲವತ್ತಾದ ಭೂಮಿಯನ್ನು ಸೃಷ್ಟಿಸಿ, ಇತರರಿಗೆ ಮಾದರಿಯಾಗಿ ರೂಪಿಸಿದ್ದಾರೆ. ಇದು ಮತ್ತಷ್ಟು ಜನರಿಗೆ ಪ್ರೇರೇಪಣೆಯಾಗಲಿದೆ. ನಿಮ್ಮೆಲ್ಲಾ ಹೋರಾಟಗಳು ಯಶಸ್ವಿಯಾಗಲಿ ಎಂದು ಶ್ರೀಸಿದ್ದಲಿಂಗಸ್ವಾಮೀಜಿ ಶುಭ ಹಾರೈಸಿದರು.

WhatsApp Image 2024 09 30 at 4.01.55 PM

ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್ ಮಾತನಾಡಿ, ರಾಜಕಾರಣಿಗಳಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಕುಲಾಂತರಿ ತಳಿ ಬೀಜಗಳ ಬಗ್ಗೆ ಕೃಷಿ ವಿಜ್ಞಾನಿಗಳಲ್ಲಿಯೂ ಭಿನ್ನಾಭಿಪ್ರಾಯವಿರುವುದು ದುರಂತವೇ ಸರಿ. ಭಾರತೀಯ ಕೃಷಿಕರು ಶ್ರಮ ಸಂಸ್ಕೃತಿಯವರು. ಇಲ್ಲಿನ ಕೂಗು ವಿಧಾನಸಭೆ, ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಚರ್ಚೆಯಾಗಬೇಕು. ಆ ಮೂಲಕ ಒಂದು ಪ್ರಭಲವಾದ ವಿರೋಧ ಸರಕಾರಕ್ಕೆ ಮುಟ್ಟಬೇಕು. ವಿಷಮುಕ್ತ ಆಹಾರ,ಸಾಲ ಮುಕ್ತ ರೈತ ನಮ್ಮ ಉದ್ದೇಶವಾಗಬೇಕು. ಇದಕ್ಕೆ ಬೇಕಾದ ಎಲ್ಲಾ ರೀತಿಯ ನೆರವು ನೀಡುವುದಾಗಿ ತಿಳಿಸಿದರು.

ರಾಜ್ಯಸಭೆಯ ಮಾಜಿ ಸದಸ್ಯ ಅನಿಲ್‌ ಹೆಗಡೆ ಮಾತನಾಡಿ, ಗ್ಯಾಟ್ ಒಪ್ಪಂದ ಫಲವಾಗಿ ಒಂದೊಂದೇ ಆತಂಕಕಾರಿ ಬೆಳವಣಿಗೆಗಳು ಕೃಷಿ ವಲಯದಲ್ಲಿ ಕಾಣುತ್ತಿವೆ. ಬಿ.ಹತ್ತಿಯನ್ನು ಎಷ್ಟೇ ತಡೆದರು ಕಳ್ಳಮಾರ್ಗದ ಮೂಲಕ ದೇಶ ಪ್ರವೇಶಿಸಿ ಹಲವಾರು ಅವಾಂತರಗಳನ್ನು ಸೃಷ್ಟಿಸಿದೆ. ಹಾಗಾಗಿ ಬಿ.ಟಿ.ಬದನೆಯನ್ನು ತಡೆಯಲು ಸಾಧ್ಯವಾಯಿತು. ಅದೇ ರೀತಿ ಕುಲಾಂತರಿ ಬೀಜ ನೀತಿಯನ್ನು ತಡೆಯುವ ಹೋರಾಟ ನಡೆಯಲಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಮಧು ಮಾದೇಗೌಡ ಮಾತನಾಡಿ, ಯಾವುದೇ ಹೋರಾಟಕ್ಕೆ ಬೆಲೆ ಬರಬೇಕೆಂದರೆ ಒಗ್ಗಟ್ಟು ಮುಖ್ಯ. ಮನುಷ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುವ ಕುಲಾಂತರಿ ತಳಿ ಬೀಜಗಳ ಕುರಿತು ರೈತರಿಗೆ ಅರಿವು ಮೂಡಿಸುವಲ್ಲಿ ಯಶಸ್ವಿಯಾದರೆ ಮಾತ್ರ ಪ್ರಬಲವಾಗಿ ಬಹುರಾಷ್ಟ್ರೀಯ ಬೀಜ ಉತ್ಪಾಧನಾ ಕಂಪನಿಗಳ ಈ ಹುನ್ನಾರ ತಡೆಯಲು ಸಾಧ್ಯ ಎಂದರು.

ರೈತ ಮುಖಂಡರಾದ ಹೊನ್ನೂರು ಪ್ರಕಾಶ್ ಮಾತನಾಡಿ, ಆಹಾರ, ನೀರು, ಬೀಜ, ಗೊಬ್ಬರ ಇವುಗಳು ನ್ಯಾಯಾಲಯದಲ್ಲಿ ತೀರ್ಮಾನವಾಗುವಂತಹ ವಿಷಯಗಳಲ್ಲ. ಭಾರತ ಶೇ.98ರಷ್ಟು ಸಣ್ಣ ಹಿಡುವಳಿದಾರರನ್ನು ಹೊಂದಿರುವ ದೇಶ. ಇಲ್ಲಿ ಶೇ.100ರಷ್ಟು ಯಾತ್ರಿಕ ಕೃಷಿ ಸಾಧ್ಯವಿಲ್ಲ. ಕೇಂದ್ರ ಸರಕಾರ ರೈತರ ಬೇಡಿಕೆಗಳಿಂದ ನುಣುಚಿಕೊಳ್ಳುವ ಸಲುವಾಗಿ ಇಂತಹ ದುಕೃತ್ಯಕ್ಕೆ ಮುಂದಾಗಿದೆ. ಸಾವಿರಾರು ಕೇಸುಗಳಿರುವ ಬೇರ‍್ಸ್ ಕಂಪನಿಯ ಸಹಯೋಗದಲ್ಲಿ ನೀತಿ ರೂಪಿಸಲು ಹೊರಟಿರುವುದು ಹಾಸ್ಯಾಸ್ಪದವಾಗಿದೆ.ಇದು ರೈತರ ಭೂಮಿಯನ್ನು ಕಸಿದು ಕಾರ್ಪೋರೇಟ್ ಕಂಪನಿಗಳಿಗೆ ನೀಡುವ ಹುನ್ನಾರವಾಗಿದ್ದು,ಇದರ ವಿರುದ್ದ ನಾವೆಲ್ಲರೂ ಹೋರಾಟ ರೂಪಿಸಬೇಕಿದೆ.ಇದಕ್ಕೆ ದೊಡ್ಡ ಹೊಸೂರು ಸತ್ಯಾಗ್ರಹ ಮೊದಲ ಹೆಜ್ಜೆಯಾಗಿದೆ ಎಂದರು.

ಪರಿಸರವಾದಿ ಸಿ.ಯತಿರಾಜು ಮಾತನಾಡಿ,ಸುಪ್ರಿಂಕೋರ್ಟು ನಿರ್ದೇಶನದಂತೆ ಕುಲಾಂತರಿ ತಳಿ ಬೀಜ ನೀತಿ ರೂಪಿಸಲು ಕೇಂದ್ರ ಸರಕಾರ ತುದಿಗಾಲಲ್ಲಿ ನಿಂತಿದೆ.ಆದರೆ ಇದನ್ನು ಬಳಸಬೇಕಾದ ರೈತರು,ರೈತ ಮುಖಂಡರ ಗಣನೆಗೆ ತೆಗೆದುಕೊಂಡಿಲ್ಲ. ಸಾಧಕ, ಬಾಧಕಗಳ ಕುರಿತು ಚರ್ಚೆಯನ್ನೇ ನಡೆಸದೆ, ನೀತಿ ರೂಪಿಸುವುದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದೆ.ಬಿಟಿ ಹತ್ತಿಯಿಂದ ನಮ್ಮ ಪರಿಸರದ ಮೇಲಾಗಿರುವ ದುಷ್ಪರಿಣಾಮಗಳ ಬಗ್ಗೆ ವಿಜ್ಞಾನಿಗಳೇ ಮಾತನಾಡುತ್ತಿದ್ದಾರೆ.ಕುಲಾಂತರಿ ತಳಿಯ ಬಗ್ಗೆ ಸೂಕ್ತ ವಿರೋಧ ವ್ಯಕ್ತವಾಗದಿದ್ದರೆ ಕಾರ್ಪೋರೇಟ್ ಕೃಷಿ ದೇಶದ ರೈತರನ್ನು ಬಲಿ ಪಡೆಯಲಿದೆ.ನೀತಿ ರೂಪಗೊಂಡ ನಂತರ ಹೋರಾಡುವ ಬದಲು,ನೀತಿಯೇ ಬಾರದಂತೆ ತಡೆಯುವುದು ಅತ್ಯಂತ ಸೂಕ್ತ. ಹಾಗಾಗಿ ಇಂದಿನ ದೊಡ್ಡ ಹೊಸೂರು ಸತ್ಯಾಗ್ರಹ ಈ ಆಂದೋಲನದ ಆರಂಭವಷ್ಟೇ, ಎಲ್ಲರೂ ಇದಕ್ಕೆ ಕೈಜೋಡಿಸಬೇಕೆಂದು ಮನವಿ ಮಾಡಿದರು.

kkkk

ಕುಲಾಂತರಿ ತಳಿ ಬೀಜಗಳಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಇಡೀ ದಿನ ಚರ್ಚಿಸಿ ಕೆಲ ನಿರ್ಣಯಗಳನ್ನು ಕೈಗೊಳ್ಳಲಾಯಿತು.ಕುಲಾಂತರಿ ಕಾಯ್ದೆ ತಿರಸ್ಕರಿಸಿ, ಸಹಜ ಬೇಸಾಯ ಪದ್ದತಿಯನ್ನು ಪಂಚಾಯಿತಿಗಳ ಮೂಲಕ ಸ್ಥಾಪಿಸಬೇಕು. ಕರ್ನಾಟಕವನ್ನು ಕುಲಾಂತರಿ ಮುಕ್ತ ರಾಜ್ಯವೆಂದು ಘೋಷಣೆ ಮಾಡಬೇಕು. ಬೇಯರ್-ಐಸಿಎಆರ್ ಒಪ್ಪಂದವನ್ನು ರದ್ದು ಪಡಿಸಬೇಕು. ಭಾರತ ಸರಕಾರ ಕುಲಾಂತರಿ ಸಂಶೋಧನೆಗೆ ನೀಡುತ್ತಿರುವ ಹಣಕಾಸಿನ ನೆರವನ್ನು ನಿಲ್ಲಿಸಬೇಕು.ಹೊರದೇಶದಿಂದ ಬರುತ್ತಿರುವ ಹಣಕ್ಕೂ ನಿರ್ಭಂದ ಹೇರಬೇಕು. ಭಾರತದಲ್ಲಿ ಕಳೆನಾಶಕ ಮಾರಾಟ ನಿಷೇಧಿಸಬೇಕು.ಸಹಜ ಬೇಸಾಯಕ್ಕೆ ಶೇ75ರಷ್ಟು ಹಣವನ್ನು ಪಂಚಾಯಿತಿಗಳ ಮೂಲಕ ಪೂರೈಸಬೇಕೆಂಬ ನಿರ್ಣಯ ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಕೃಷಿ ವಿಜ್ಞಾನಿಗಳಾದ ಡಾ.ಸಿದ್ದರಾಮೇಗೌಡ, ಡಾ.ನಾರಾಯಣಗೌಡ,ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗೋವಿಂದರಾಜು, ಡಾ.ಎಸ್.ನಾರಾಯಣ್, ವೆಂಕಟರಾಜು, ರವೀಶ್, ಜೆಡಿಯುನ ಕೆ.ಜಿ.ಎಲ್.ರವಿ, ರೈತ ಮುಖಂಡರು, ಯುವಜನರು ಪಾಲ್ಗೊಂಡಿದ್ದರು.

ಸಾವಯವ ಕೃಷಿ, ಸಹಜ ಕೃಷಿ ಹಾಗೂ ಕೃಷಿಯಲ್ಲಿ ನೀರು, ಗೊಬ್ಬರ,ಮಣ್ಣಿನ ಫಲವತ್ತೆ ಕುರಿತಂತೆ 12ಕ್ಕೂ ಹೆಚ್ಚು ಜನ ಸ್ವಯಂ ಸೇವಕರು ತೋಟದಲ್ಲಿ ಪ್ರಾತಕ್ಷಿಕೆಗಳ ಮೂಲಕ ಸತ್ಯಾಗ್ರಹಕ್ಕೆ ಬಂದ ರೈತರು, ರೈತ ಮಹಿಳೆಯರಿಗೆ ಮಾಹಿತಿ ನೀಡಿದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X