ಜವಳಿ ಕೈಗಾರಿಕೋದ್ಯಮಿ ಮತ್ತು ವರ್ಧಮಾನ್ ಗ್ರೂಪ್‌ನ ಅಧ್ಯಕ್ಷ ಎಸ್‌ಪಿ ಓಸ್ವಾಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಸೋಗಿನಲ್ಲಿ 7 ಕೋಟಿ ರೂ. ವಂಚನೆ ಮಾಡಲಾಗಿದೆ. ನಕಲಿ ವರ್ಚುವಲ್ ಕೋರ್ಟ್ ರೂಂ ಸೃಷ್ಟಿಸಿ ಈ ವಂಚನೆ ಮಾಡಲಾಗಿದೆ ಎಂದು ವರದಿಯಾಗಿದೆ.
ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ವಂಚಕರು ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡಿದ್ದಾರೆ. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧಿಸಲ್ಪಟ್ಟ ಜೆಟ್ ಏರ್‌ವೇಸ್ ಸಂಸ್ಥಾಪಕ ನರೇಶ್ ಗೋಯಲ್‌ಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ಓಸ್ವಾಲ್ ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದರು. ಬಳಿಕ ನಕಲಿ ಕೋರ್ಟ್ ರೂಂ ಸೃಷ್ಟಿಸಿ ದಂಡವೆಂಬಂತೆ 7 ಕೋಟಿ ರೂ. ವಸೂಲಿ ಮಾಡಿದ್ದಾರೆ.
ನಕಲಿ ಪಾಸ್‌ಪೋರ್ಟ್‌ಗಳು ಮತ್ತು ಡೆಬಿಟ್ ಕಾರ್ಡ್‌ಗಳೊಂದಿಗೆ ಮಲೇಷ್ಯಾಕ್ಕೆ ಪಾರ್ಸೆಲ್ ಕಳುಹಿಸಲು ಓಸ್ವಾಲ್ ತಮ್ಮ ಆಧಾರ್ ಅನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ನಕಲಿ ಬಂಧನ ವಾರಂಟ್‌ಗಳೊಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.
ಇದನ್ನು ಓದಿದ್ದೀರಾ? ಬೆಂಗಳೂರು | ಆನ್‌ಲೈನ್ ಉದ್ಯೋಗದ ಹೆಸರಲ್ಲಿ 6 ಕೋಟಿ ವಂಚನೆ: 10 ಮಂದಿ ಆರೋಪಿಗಳ ಬಂಧನ
ಇಂಡಿಯನ್ ಎಕ್ಸ್‌ಪ್ರೆಸ್ ಮತ್ತು ರಾಯಿಟರ್ಸ್ ವರದಿ ಪ್ರಕಾರ ವಂಚಕರು ಸ್ಕೈಪ್ ಕರೆ ಮೂಲಕ ನಕಲಿ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಸಿಜೆಐನಂತೆ ವ್ಯಕ್ತಿಯೊಬ್ಬರು ನಟಿಸಿದ್ದಾರೆ. ಬಳಿಕ ಮುದ್ರೆ ಒತ್ತಿರುವ ಸುಪ್ರೀಂ ಕೋರ್ಟ್ ಆದೇಶ ಪ್ರತಿಯಂತೆ ನಕಲಿ ಪ್ರತಿಯನ್ನು ಕಳುಹಿಸಿದ್ದಾರೆ. ದಂಡವಾಗಿ 7 ಕೋಟಿ ರೂಪಾಯಿ ಪಾವತಿಸಲು ನಿರ್ದೇಶನ ನೀಡಿದ್ದಾರೆ.
“ಸ್ಕೈಪ್ ಮೂಲಕ ನಕಲಿ ಸುಪ್ರೀಂ ಕೋರ್ಟ್ ವಿಚಾರಣೆಯ ನಡೆಸಲಾಗಿದೆ. ಈ ವೇಳೆ ನ್ಯಾಯಾಧೀಶರನ್ನು ನ್ಯಾಯಮೂರ್ತಿ ಚಂದ್ರಚೂಡ್ ಎಂದು ಪರಿಚಯಿಸಿಕೊಂಡಿದ್ದಾರೆ. ನಾನು ಅವರ ಮುಖವನ್ನು ನೋಡಲಿಲ್ಲ. ಆದರೆ ಅವರು ಮಾತನಾಡುವುದು ಮತ್ತು ಮೇಜಿನ ಮೇಲೆ ಸುತ್ತಿಗೆಯಿಂದ ಬಡಿಯುವುದು ಮಾತ್ರ ನನಗೆ ಕೇಳಿಸಿದೆ. ಅದಾದ ಬಳಿಕ ಲಿಖಿತ ಆದೇಶದ ಪ್ರತಿ ಬಂದಿದೆ. ಅದು ನಿಜವಾದ ಆದೇಶ ಪ್ರತಿಯಂತೆಯೇ ಇತ್ತು. ಅದನ್ನು ನಂಬಿ ನಾನು ಹಣ ವರ್ಗಾಯಿಸಿದೆ” ಎಂದು ಓಸ್ವಾಲ್ ಹೇಳಿದ್ದಾರೆ.
ಇದನ್ನು ಓದಿದ್ದೀರಾ? ಮಂಡ್ಯ | ಅಮಾಯಕರ ಹೆಸರಿನಲ್ಲಿ ₹1 ಕೋಟಿಗೂ ಹೆಚ್ಚು ಸಾಲ ಪಡೆದು ತಾಯಿ-ಮಗಳು ವಂಚನೆ; ಪರಾರಿ
ಇದು ನಕಲಿ ಎಂದು ತಿಳಿದ ಬಳಿಕ ಓಸ್ವಾಲ್ ಪೊಲೀಸರನ್ನು ಸಂಪರ್ಕಿಸಿ ದೂರು ದಾಖಲಿಸಿದ್ದಾರೆ. ವರದಿಗಳ ಪ್ರಕಾರ ಈವರೆಗೆ 5.25 ಕೋಟಿ ರೂಪಾಯಿ ಓಸ್ವಾಲ್ ಖಾತೆಗೆ ಮರಳಿಸಲಾಗಿದೆ ಮತ್ತು ಗುವಾಹಟಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆ. 7 ಮಂದಿ ಶಂಕಿತರ ಹುಡುಕಾಟ ಮುಂದುವರೆದಿದೆ.
Commendable work by @Ludhiana_Police in cracking an inter-state cyber fraud gang. Two persons have been arrested from #Guwahati, with the help of @assampolice, and seven more persons nominated. A recovery of ₹5.25 crore, along with ATM cards and mobile phones, marks the… pic.twitter.com/3glYE6jHb4
— DGP Punjab Police (@DGPPunjabPolice) September 30, 2024
