ಬಾಗಲಕೋಟೆ | ಎದುರಾಳಿಯ ಗಾಯಗೊಳಿಸುವುದು ಆಟಗಾರನ‌ ಲಕ್ಷಣವಲ್ಲ: ಹನುಮಂತ ಶಿರೂರು

Date:

Advertisements

ಸೋಲು ಗೆಲುವು ನಂತರದ ವಿಚಾರವಾಗಿದೆ. ಆಟದ ಮೈದಾನದಲ್ಲಿ ಎದುರಾಳಿಯನ್ನು ಗಾಯಗೊಳಿಸುವುದು ಆಟಗಾರನ ಲಕ್ಷಣವಲ್ಲ ಎಂದು ಎಸ್.ಡಿ.ಎಮ್.ಸಿ ಅಧ್ಯಕ್ಷ ಹನುಮಂತ ಶಿರೂರು ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಕ್ರಾಸ್ ನ ಜೆ.ಪಿ.ಎನ್ ಶಾಲೆಯ ವಿದ್ಯಾರ್ಥಿ ಗಗನ, ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ 200 ಮೀಟರ್ ಓಟದ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದು, ಸತತವಾಗಿ ಮೂರು ಬಾರಿ ಆಯ್ಕೆ ಆಗಿರುವ ಸಂದರ್ಭದಲ್ಲಿ ಶುಭ ಹಾರೈಸಿ, ವಿದ್ಯಾರ್ಥಿಗಳಿಗೆ ಶಾಲೆಯ ಅಧ್ಯಕ್ಷ ಹನುಮಂತ ಶಿರೂರು ಕಿವಿಮಾತು ನೀಡಿದರು.

ಕ್ರೀಡೆಗಳಿಂದ ಸ್ನಾಯುಗಳು ಮತ್ತು ಮೂಳೆಗಳು ಗಟ್ಟಿಗೊಳ್ಳುತ್ತವೆ. ಕ್ರೀಡೆಯು ದೈಹಿಕ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿರಾಶೆಗೆ ಕ್ರೀಡೆಯನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ನಮ್ಮ ಕೆಲಸದಷ್ಟೇ ಕ್ರೀಡೆಯು ಮುಖ್ಯವಾಗಬೇಕು. ಆಟದಲ್ಲಿ ತೊಡಗಿಸಿಕೊಳ್ಳುವುದರಿಂದ ಸಮಯ ವ್ಯರ್ಥವಾಗುವುದಿಲ್ಲ. ಆಟದಲ್ಲಿ ಗಂಭೀರವಾಗಿದ್ದರೆ ಮಾತ್ರ ಆಟವನ್ನು ಕರಗತ ಮಾಡಿಕೊಳ್ಳಬಹುದು. ಸೋಲು ಗೆಲುವು ನಂತರದ ವಿಚಾರವಾಗಿದೆ. ಆಟದ ಮೈದಾನದಲ್ಲಿ ಎದುರಾಳಿಯನ್ನು ಗಾಯಗೊಳಿಸುವುದು ಆಟಗಾರನ ಲಕ್ಷಣವಲ್ಲ ಎಂದರು.

Advertisements

ದೈಹಿಕ ಶಿಕ್ಷಕ ಮುಬಾರಕ್ ಜಮಖಂಡಿ ಮಾತನಾಡಿ, ಕ್ರೀಡೆಗಳು, ಕ್ರೀಡಾಪಟುಗಳು ಮತ್ತು ಕ್ರೀಡಾ ಉತ್ಸಾಹಿಗಳಲ್ಲಿ ಪ್ರೇರಣೆ, ನಿರ್ಣಯ ಮತ್ತು ಸ್ಥಿತಿಸ್ಥಾಪಕತ್ವವನ್ನು ಪ್ರಚೋದಿಸುವ ಶಕ್ತಿಯನ್ನು ಹೊಂದಿವೆ. ಬುದ್ಧಿವಂತಿಕೆಯ ಈ ಸಂಕ್ಷಿಪ್ತ ಪದಗಳು ಅದಮ್ಯ ಮಾನವ ಆತ್ಮ ಮತ್ತು ಶ್ರೇಷ್ಠತೆಯ ಅನ್ವೇಷಣೆಯ ಜ್ಞಾಪನೆಗಳಾಗಿ ಕಾರ್ಯನಿರ್ವಹಿಸುತ್ತವೆ. ದಂತಕಥೆಗಳಿಂದ ಹಿಡಿದು ಅಂಡರ್‌ ಡಾಗ್‌ ಗಳವರೆಗೆ, ಈ ಉಲ್ಲೇಖಗಳು ಕ್ರೀಡೆಯ ಗಡಿಗಳನ್ನು ಮೀರಿದ್ದು, ಕನಸುಗಳನ್ನು ಸಾಕಾರಗೊಳಿಸಲು ನಮಗೆಲ್ಲರಿಗೂ ಸ್ಫೂರ್ತಿ ನೀಡುತ್ತವೆ. ಎಲ್ಲರೂ ಸಾಧನೆ ಮಾಡುವಂತಾಗಲಿ ಎಂದರು.

ಇದನ್ನೂ ಓದಿ ವಿಜಯಪುರ | ಸಮಾಜದ ಅಭಿವೃದ್ಧಿಯಲ್ಲಿ ಯುವಜನರ ಪಾತ್ರ ಬಹುಮುಖ್ಯ: ಆಂತೋನಿ ಸಿ

ಶಾಲೆಯ ಅಧ್ಯಕ್ಷ ಹನುಮಂತ ಶಿರೂರು ಮತ್ತು ಸದಸ್ಯರು, ಪ್ರೌಢ ವಿಭಾಗದ ಮುಖ್ಯ ಗುರುಮಾತೆ ಎಸ.ಎಚ್.ಶಿರೂರು, ಪ್ರಾಥಮಿಕ ವಿಭಾಗದ ಮುಖ್ಯ ಗುರುಗಳು ವಿ.ಎಂ.ಬಾನಿ ಹಾಗೂ ಪ್ರೌಢಶಾಲಾ ವಿಭಾಗದ ದೈಹಿಕ ಶಿಕ್ಷಕ ಮುಬಾರಕ್ ಜಮಖಂಡಿ, ಹಾಗೂ ಶಾಲೆಯ ಎಲ್ಲ ಗುರುಬಳಗ ಶುಭ ಹಾರೈಸಿ. ವಿದ್ಯಾರ್ಥಿಗೆ ಸನ್ಮಾನಿಸದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X