ಇಬ್ಬರು ಕಳ್ಳರು ಚಾಕು ತೋರಿಸಿ ಮಹಿಳೆಯ ಆಭರಣಗಳನ್ನು ದೋಚಿ ಬಳಿಕ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಒಡಿಶಾದ ಭುವನೇಶ್ವರದ ಫ್ಲಾಟ್ ಒಂದರಲ್ಲಿ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿದಿದೆ. ನಗರದ ಮೈತ್ರಿ ವಿಹಾರ್ ಪ್ರದೇಶದಲ್ಲಿ ಸೋಮವಾರ ಮುಂಜಾನೆ 2 ಗಂಟೆ ಸುಮಾರಿಗೆ ಈ ದಾಳಿ ನಡೆದಿದ್ದು, ಮಹಿಳೆ ತನ್ನ ಎರಡು ವರ್ಷದ ಮಗಳೊಂದಿಗೆ ಇದ್ದಾಗ ಈ ಘಟನೆ ನಡೆದಿದೆ.
ಮನೆಯಲ್ಲಿ ಮಗು ಮತ್ತು ಮಹಿಳೆ ಮಾತ್ರ ಇದ್ದರು. ಬಿದಿರಿನ ಕಂಬಗಳನ್ನು ಬಳಸಿ ಕಳ್ಳರು ಕಟ್ಟಡಕ್ಕೆ ಪ್ರವೇಶಿಸಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನು ಓದಿದ್ದೀರಾ? ತ್ರಿಪುರಾ | ಶಾಲೆಯಿಂದ ಮರಳುತ್ತಿದ್ದ 5ನೇ ತರಗತಿ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ
ದೂರಿನ ಪ್ರಕಾರ, ಕಳ್ಳರು ಮೊದಲು ಆಕೆಯ ಆಭರಣಗಳು ಮತ್ತು ಮೊಬೈಲ್ ಫೋನ್ ಅನ್ನು ಚಾಕು ತೋರಿಸಿ ದೋಚಿದ್ದಾರೆ. ನಂತರ ಸಹಾಯಕ್ಕಾಗಿ ಕೂಗಿದರೆ ಮಗಳನ್ನು ಸಾಯಿಸುವುದಾಗಿ ಬೆದರಿಸಿ ಮಹಿಳೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ.
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿರುವ ಮಹಿಳೆ 10 ದಿನಗಳ ಹಿಂದಷ್ಟೆ ಭುವನೇಶ್ವರದ ಫ್ಲಾಟ್‌ಗೆ ತೆರಳಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಸಿಸಿಟಿವಿ ಕ್ಯಾಮೆರಾಗಳಿಲ್ಲದ ಕಾರಣ, ಅಧಿಕಾರಿಗಳು ಹತ್ತಿರದ ಸಿಸಿಟಿವಿ ಕ್ಯಾಮೆರಾಗಳ ಪರಿಶೀಲನೆ ಮಾಡುತ್ತಿದ್ದಾರೆ.
