ಮುಡಾ ಪ್ರಕರಣವನ್ನು ಮರೆತು ಬೇರೆಡೆ ಗಮನ ಸೆಳೆಯುವಂತೆ ಮಾಡಲು ಸಿಎಂ ಸಿದ್ದರಾಮಯ್ಯನವರು ಜಾತಿ ಗಣತಿಯನ್ನು ಸ್ವಾಗತಿಸುತ್ತೇನೆ ಎಂದಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ರಾಷ್ಟ್ರ ಬಳಗದ ಕೆ ಎಸ್ ಈಶ್ವರಪ್ಪ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಹರಿಹಾಯ್ದರು.
ಶಿವಮೊಗ್ಗ ನಗರದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿ, “ಸಿದ್ದರಾಮಯ್ಯ ಅವರಿಗೆ ಈಗ ಜ್ಞಾನೋದಯವಾದಂತೆ ಕಾಣುತ್ತಿದೆ. ಜಾತಿ ಗಣತಿಗೆ ನಾನು ಸ್ವಾಗತ ಮಾಡುತ್ತೇನೆಂದು ವಿಷಯಾಂತರ ಮಾಡುತ್ತಿರುವುದು ಅನುಮಾನವಾಗಿದೆ. ಈ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಆಂಜನೇಯ ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿದ್ದಾಗ ಅನುಷ್ಠಾನಕ್ಕೆ ತರಲಿಲ್ಲ. ಏಳು ವರ್ಷ ಕಳೆದರೂ ಸಹ ಈವರೆಗೆ ವರದಿ ಜಾರಿ ಮಾಡಲಿಲ್ಲ” ಎಂದು ಆರೋಪಿಸಿದರು.
“ಸಿದ್ದರಾಮಯ್ಯ ನಂತರ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜಯಪ್ರಕಾಶ್ ಹೆಗಡೆ ಅವರನ್ನು ನೇಮಕ ಮಾಡಿತು.
ಕಾಂಗ್ರೆಸ್ ಸರ್ಕಾರ ಇದರ ದಾಖಲೆಯೇ ಕಳೆದು ಹೋಗಿದೆ ಎಂದಿದ್ದರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದ ಚಾಂಪಿಯನ್ ಎಂದು ಸಿದ್ದರಾಮಯ್ಯ ಕೇವಲ ತೋರ್ಪಡಿಕೆಗೆ ಸೀಮಿತರಾಗಿದ್ದಾರೆ” ಎಂದರು.
“1931ರಲ್ಲಿ ಜಾತಿ ಗಣತಿ ವರದಿ ನೀಡಿದ್ದರು. ಅಲ್ಲಿಂದ ಈವರೆಗೂ ಯಾವುದೂ ಆಗಲೇ ಇಲ್ಲ. ಇಂದು ಈ ವರದಿ ಬರಬೇಕು. ಇದರಲ್ಲಿ ಎಲ್ಲ ಸಮಾಜದ ಬಡವರಿಗೆ ಲಾಭ ಆಗುತ್ತ, ಇಲ್ಲವಾ ಎಂಬ ವೈಜ್ಞಾನಿಕ ಚರ್ಚೆಗಳು ಆಗಬೇಕು. ಕಾಂಗ್ರೆಸ್ ಪಕ್ಷದವರು ಅಂಬೇಡ್ಕರ್ ನಿಗಮದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದವರ ಹಣ ನುಂಗಿ ನೀರು ಕುಡಿದರು.
ಬಿಜೆಪಿ ಸರ್ಕಾರ ಹಿಂದುಳಿದ ವರ್ಗಕ್ಕೆ 1073 ಯೋಜನೆಗಳನ್ನು ಇಟ್ಟಿದ್ದ ಹಣವನ್ನು ಸಹರದ್ದು ಮಾಡಿತು. ಈಗ
ಹಿಂದುಳಿದ ವರ್ಗ ಹಾಗೂ ದಲಿತರಿಗೆ ಮೋಸ ಮಾಡಿದವರು ನಾವೇಯೆಂದು ಕಾಂಗ್ರೆಸ್ ಪಕ್ಷ ಒಪ್ಪಿಕೊಳ್ಳಬೇಕು” ಎಂದು ತಾಕೀತು ಮಾಡಿದರು.