ಗುರುವಾರದಿಂದ (ಅಕ್ಟೊಬರ್ 3) ರಾಜ್ಯದ ಎಲ್ಲ ಶಾಲಾಗಳಿಗೆ ದಸರಾ ರಜೆ ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಅಕ್ಟೋಬರ್ 20ರವರೆಗೆ ಅಂದರೆ, 17 ದಿನಗಳ ಕಾಲ ಶಾಲಾ ಮಕ್ಕಳಿಗೆ ದಸರಾ ರಜೆ ಇರಲಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ದಸರಾ ರಜೆ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. “2024-25ನೇ ಶೈಕ್ಷಣಿಕ ಸಾಲಿನ ದಸರಾ ರಜೆ ಅಕ್ಟೋಬರ್ 3 ರಿಂದ 20 ರವರೆಗೆ ಇರಲಿದೆ. ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಇದ್ದು, ಕಾರ್ಯಕ್ರಮದ ನಂತರ ರಜೆಗಳು ಆರಂಭವಾಗಲಿವೆ” ಎಂದು ಹೇಳಿದೆ. ಅಲ್ಲದೆ, ಅಕ್ಟೋಬರ್ 21ರಿಂದ ತರಗತಿಗಳು ಪುನರಾರಂಭವಾಗಲಿವೆ ಎಂದೂ ವಿವರಿಸಿದೆ.
ಅಕ್ಟೋಬರ್ 3ರಿಂದ ನವರಾತ್ರಿ ಆರಂಭವಾಗಲಿದ್ದು, ಅಕ್ಟೋಬರ್ 12ರಂದು ವಿಜಯದಶಮಿ ನಡೆಯಲಿದೆ. ಮೈಸೂರು, ಕೊಡಗು, ಮಂಗಳೂರು ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ದಸರಾ ಆಚರಣೆ ನಡೆಯಲಿದೆ. ಇದೇ ಅವಧಿಯಲ್ಲಿ ಪ್ರತಿವರ್ಷ ಶಾಲೆಗಳಿಗೆ ರಜೆ ಘೋಷಿಸಲಾಗುತ್ತದೆ.