ಅತ್ಯಾಚಾರ ಪ್ರಕರಣದಲ್ಲಿ ಜೈಲು ಶಿಕ್ಷೆ ಅನುಭಸುತ್ತಿರುವ ಡೇರಾ ಸಚ್ಚಾ ಸೌದಾ ಪಂಥದ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಸಿಂಗ್‌ಗೆ 20 ದಿನಗಳ ‘ಪೆರೋಲ್’ ನೀಡಲಾಗಿದೆ. ಆತ, ಬುಧವಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಗುರ್ಮೀತ್ ಸಿಂಗ್ ವಿರುದ್ಧದ ಆರೋಪ ಸಾಬೀತಾಗಿದ್ದು, ಆತನಿಗೆ 20 ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿದೆ. ಆತನನ್ನು ಹರಿಯಾಣದ ರೋಹಕ್ಟ್‌ನ ಸುನಾರಿಯಾ ಜೈಲಿನಲ್ಲಿ ಇರಿಸಲಾಗಿದೆ. ಇದೀಗ, ಹರಿಯಾಣ ಸರ್ಕಾರ ಆತನಿಗೆ 20 ದಿನಗಳ ಪೆರೋಲ್ ನೀಡಿದ್ದು, ಬಿಗಿ ಭದ್ರತೆಯ ನಡುವೆ ಗುರ್ಮೀತ್ ಸಿಂಗ್ ಜೈಲಿನಿಂದ ಹೊರಬಂದಿದ್ದಾರೆ.
ಜೈಲಿನಿಂದ ಹೊರಗಿರುವ ಈ 20 ದಿನಗಳ ಅವಧಿಯಲ್ಲಿ ಯಾವುದೇ ಚುನಾವಣಾ ಚಟುವಟಿಕೆ, ಪ್ರಚಾರ, ಭಾಷಣ ಮಾಡದಂತೆ ನಿರ್ಬಂಧ ವಿಧಿಸಲಾಗಿದೆ. ಗುರ್ಮೀತ್ ಸಿಂಗ್, ತಮ್ಮ ಬಿಡುಗಡೆಯ ತಾತ್ಕಾಲಿಕ ಅವಧಿಯನ್ನು ಉತ್ತರ ಪ್ರದೇಶದ ಬಾಗ್‌ಪತ್‌ನ ಬರ್ನಾವದಲ್ಲಿರುವ ಡೇರಾ ಆಶ್ರಮದಲ್ಲಿ ಕಳೆಯಲಿದ್ದಾರೆ ಎಂದು ವರದಿಯಾಗಿದೆ.
ಹರಿಯಾಣದಲ್ಲಿ ವಿಧಾನಸಭಾ ಚುನಾವಣೆ ಘೋಷಣೆಯಾಗಿದ್ದು, ಅಕ್ಟೋಬರ್ 5ರಂದು ಮತದಾನ ನಡೆಯಲಿದೆ. ಅಕ್ಟೋಬರ್ 8ರಂದು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಯ ಸಮಯದಲ್ಲಿ ಆತನಿಗೆ ಪೆರೋಲ್ ನೀಡಿರುವುದಕ್ಕೆ ಹರಿಯಾಣದ ಬಿಜೆಪಿ ಸರ್ಕಾರವನ್ನು ವಿಪಕ್ಷಗಳು ಟೀಕಿಸುತ್ತಿವೆ.
ಈ ಹಿಂದೆಯೂ ಪಂಜಾಬ್‌ನಲ್ಲಿ ವಿಧಾನಸಭೆ ಚುನಾವಣೆ ನಡೆಯುತ್ತಿದ್ದ ವೇಳೆ, ಆಗಸ್ಟ್‌ನಲ್ಲಿ ಗುರ್ಮೀತ್ ಸಿಂಗ್‌ಗೆ 21 ದಿನಗಳ ‘ಪೆರೋಲ್’ ನೀಡಲಾಗಿತ್ತು. ಅಂದಹಾಗೆ, ದೀರ್ಘಾವಧಿ ಜೈಲು ಶಿಕ್ಷಗೆ ಗುರಿಯಾಗಿರುವವರಿಗೆ ತಾತ್ಕಾಲಿಕ ಬಿಡುಗಡೆಗೆ ಅವಕಾಶವಿರುತ್ತದೆ. ಅವರು ಪೆರೋಲ್ ಮೇಲೆ ಜೈಲಿನಿಂದ ಹೊರಬರಲು ಅವನು ಮಾಡಿಕೊಡಲಾಗುತ್ತದೆ.