ಕೊಪ್ಪಳ ರೈಲ್ವೆ ನಿಲ್ದಾಣದ ರೈಲ್ವೆ ಯಾರ್ಡ್‌ನ ರೈಲ್ವೆ ಕಿ.ಮಿ ನಂ-115/000ರಲ್ಲಿ ಅಕ್ಟೋಬರ್ 02ರಂದು ಸುಮಾರು 35-40 ವರ್ಷದ ಅಪರಿಚಿತ ಪುರುಷನ ರೈಲಿಗೆ ಸಿಲುಕಿ ಮೃತಪಟ್ಟಿದ್ದು, ಈ ಸಂಬಂಧವಾಗಿ ಗದಗ ರೈಲ್ವೆ ಪೊಲೀಸ್ ಠಾಣೆ ಮೃತನ ವಾರಸುದಾರರ ಪತ್ತೆಗೆ ಆತನ ವಿವರಗಳನ್ನು ನೀಡಿ ಪ್ರಕಟಣೆ ಹೊರಡಿಸಿದೆ.
“ಗದಗ ರೈಲ್ವೆ ಪೊಲೀಸ್ ಠಾಣೆ ಯುಡಿಆರ್ ನಂಬರ್ 52/2024 ಕಲಂ 194 ಬಿಎನ್‌ಎಸ್‌ಎಸ್ ಅಡಿಯಲ್ಲಿ ಪ್ರಕರಣ ದಾಖಲಾಗಿ ತನಿಖೆಯಲ್ಲಿದ್ದು, ಮೃತನ ವಾರಸುದಾರರು ಆತನ ವಿವರಗಳನ್ನು ಪರಿಶೀಲಿಸಿ ಒಂದು ವೇಳೆ ಸದರಿ ಮೃತನು ಪತ್ತೆ ಆದಲ್ಲಿ ಗದಗ ರೈಲ್ವೆ ಪೊಲೀಸ್ ಠಾಣೆಗೆ ಸಂಪರ್ಕಿಸಬೇಕು” ಎಂದು ತಿಳಿಸಿದೆ.
ಮೃತನ ಚಹರೆ ಪಟ್ಟಿಯ ವಿವರ
ವಯಸ್ಸು: ಸುಮಾರು 35-40 ವರ್ಷ, ಗೋಧಿಗೆಂಪು ಮೈಬಣ್ಣ, ದುಂಡು ಮುಖ, ದಪ್ಪನೆ ಮೈಕಟ್ಟು, ತಲೆಯಲ್ಲಿ ಸುಮಾರು 1-2 ಇಂಚು ಕಪ್ಪು ಕೂದಲು, 1/4 ಇಂಚಿನಷ್ಟು ಕಪ್ಪು ದಾಡಿ ಮತ್ತು ಮೀಸೆ ಬಿಟ್ಟಿದ್ದಾನೆ.

ಬಟ್ಟೆ ಬರೆಗಳ ವಿವರ : ಮೃತನ ಮೈಮೇಲೆ ಒಂದು ಕಪ್ಪು ಬಣ್ಣದ ರೆಡಿಮೇಡ್ ಪುಲ್ ಶರ್ಟ್, ಒಂದು ಕಡುನೀಲಿ ಬಣ್ಣದ ಅಂಡರ್‌ವೇರ್, ಒಂದು ಚಾಕ್ಲೇಟ್ ಬಣ್ಣದ ಪುಲ್ ಪ್ಯಾಂಟ್, ಬಲಗೈಯಲ್ಲಿ ಕಪ್ಪು ಕಾಸಿದಾರ, ಕಾಲಿನಲ್ಲಿ ಪ್ಯಾರಾಗಾನ್ ಕಂಪನಿಯ ಚಪ್ಪಲಿ ಧರಿಸಿರುತ್ತಾನೆ.
ಈ ಸುದ್ದಿ ಓದಿದ್ದೀರಾ? ದಾವಣಗೆರೆ | ಗಾಂಧಿ ಜಯಂತಿ ಆಚರಣೆ
ಸಂಬಂಧಪಟ್ಟವರು ಗದಗ ರೈಲ್ವೇ ಪೊಲೀಸ್ ಠಾಣೆಯ ದೂರವಾಣಿ ನಂ 08372-278744 ಅಥವಾ ಮೊಬೈಲ್ ನಂಬರ್ 9480802128, Email: gadagrly@ksp.gov.in ಅಥವಾ ರೈಲ್ವೆ ಪೊಲೀಸ್ ಕಂಟ್ರೋಲ್ ರೂಂ 080- 22871291ಕ್ಕೆ ಕರೆಮಾಡಿ ತಿಳಿಸಬೇಕೆಂದು ಕೋರಿದ್ದಾರೆ.