ಥೈಲ್ಯಾಂಡ್ ದೇಶದಿಂದ ದುಬೈ ಮತ್ತು ಕೇರಳಕ್ಕೆ ತನ್ನ ಸಹಚರರೊಂದಿಗೆ ಹೈಡ್ರೋ ಗಾಂಜಾವನ್ನು ಸಾಗಿಸುತ್ತಿದ್ದ ಪ್ರಮುಖ ಡ್ರಗ್ ಪೆಡ್ಲರ್(ಮಾದಕ ವಸ್ತುಗಳನ್ನು ಮಾರಾಟಗಾರ) ಬಂಧನದ ಜತೆಗೆ ಆತನ ಆರು ಮಂದಿ ಸಹಚರರನ್ನು ಕೊಡಗು ಪೊಲೀಸರು ಬಂಧಿಸಿದ್ದಾರೆ.
ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಮರಾಜನ್ ಪತ್ರಿಕಾಗೋಷ್ಠಿ ನಡೆಸಿ ಪ್ರಕರಣದ ಕುರಿತು ಸಂಪೂರ್ಣ ಮಾಹಿತಿ ನೀಡಿ ಮಾತನಾಡಿದರು.
“ನಾಪೋಕ್ಲು ವಿನ ಅಕಿನಾಸ್ ಎಂ ಎನ್, ರಿಯಾಜ್ ಪಿ ಎಂ, ವಿರಾಜಪೇಟೆ ವಾಜಿದ್ ಸಿ ಇ, ನಾಪೋಕ್ಲು ಯಾಹ್ಯ ಸಿ ಎಚ್, ವಿರಾಜಪೇಟೆ ನಾಸೂರುದ್ದೀನ್ ಎಂ ಯು, ರಾಹುಫ್ ಎಂ ಎ ಗಾಂಜಾ ಆರೋಪಿಗಳಾಗಿದ್ದು, ಕಾಸರಗೋಡು ಜಿಲ್ಲೆಯ ಮೆಹರೂಫ್ ಕೆ ಎ ಪ್ರಕರಣದ ಪ್ರಮುಖ ಆರೋಪಿ” ಎಂದು ಮಾಹಿತಿ ನೀಡಿರುತ್ತಾರೆ.
“ಪ್ರಕರಣದ ಹಿನ್ನೆಲೆ ಥೈಲ್ಯಾಂಡ್ ದೇಶದ ಬ್ಯಾಂಕಾಕ್‌ನಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಮೆಹರೂಫ್ ಎಂಬಾತ ಕೆಫೆ ಇಟ್ಟುಕೊಂಡಿದ್ದು, ಆತನಿಂದ ವಿರಾಜಪೇಟೆಯ ರಾಹುಫ್ ಸೆಪ್ಟಂಬರ್ 23ರಂದು ವಿಮಾನದ ಮೂಲಕ ಥೈಲ್ಯಾಂಡ್‌ನಿಂದ ಬೆಂಗಳೂರಿಗೆ ಹೈಡ್ರೋ ಗಾಂಜಾವನ್ನು ತರಿಸಿ ತನ್ನ ಇತರ ಸಹಚಾರರೊಂದಿಗೆ ಮೈಸೂರು, ಗೋಣಿಕೊಪ್ಪ ಮಾರ್ಗವಾಗಿ ಬೆಳಗಿನ ಜಾವ ಆಗಮಿಸಿ, ಗೋಣಿಕೊಪ್ಪಲಿನ ಬೆಳ್ಳಿಯಪ್ಪ ರೆಸಿಡೆನ್ಸಿಯಲ್ಲಿ ಕೆಲವರು ತಂಗಿದ್ದರು” ಎಂದು ತಿಳಿಸಿದ್ದಾರೆ.
ಮಡಿಕೇರಿಯತ್ತ ಗಾಂಜಾ ಸಹಿತ ತೆರಳುತ್ತಿದ್ದ ಸಂದರ್ಭ ಖಚಿತ ಮಾಹಿತಿ ತಿಳಿದ ಡಿಸಿಆರ್‌ಬಿ ಪೊಲೀಸ್ ತಂಡ ಜಿಲ್ಲಾ ವರಿಷ್ಠಾಧಿಕಾರಿ ಮಾರ್ಗದರ್ಶನದಂತೆ ಇತರ ಸಹಚರನ್ನು ಬಂಧಿಸಿ ಪ್ರಕರಣವನ್ನು ಬಯಲಿಗೆಳೆದಿದ್ದಾರೆ.
ಈ ಸುದ್ದಿ ಓದಿದ್ದೀರಾ? ಉಡುಪಿ | ಕಸ ಎಸೆಯುತ್ತಿದ್ದ ಜಾಗ ಇದೀಗ ಸೆಲ್ಫಿ ಪಾಯಿಂಟ್!
“ಪ್ರಕರಣದ ಮುಖ್ಯ ರೂವಾರಿ ಮೆಹರೂಫ್ ಕೊಚ್ಚಿನ್ ಮೂಲಕ ಬ್ಯಾಂಕಾಕಿಗೆ ವಿಮಾನದ ಮೂಲಕ ತಪ್ಪಿಸಿಕೊಂಡು ಹೋಗಲು ಯತ್ನಿಸಿದಾಗ, ಕೊಚ್ಚಿನ್ ವಿಮಾನ ನಿಲ್ದಾಣದಲ್ಲಿ ಅಲ್ಲಿನ ಪೊಲೀಸ್ ಕಮಿಷನರ್ ಸಹಕಾರದಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಅನುಪ್ ಮೇದಪ್ಪ ಹಾಗೂ ತಂಡ ಸೆಪ್ಟೆಂಬರ್ 29 ರಾತ್ರಿ 10:30ಕ್ಕೆ ಬಂಧಿಸಿ ಕೊಡಗಿಗೆ ಕರೆ ತಂದಿದ್ದಾರೆ” ಎಂದು ಮಾಹಿತಿ ನೀಡಿದರು.