ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ವಿರುದ್ಧ ಕೀಳುಮಟ್ಟದ ಭಾಷೆ ಬಳಸಿರುವ ಕರ್ನಾಟಕ ಲೋಕಾಯುಕ್ತ ವಿಶೇಷ ತನಿಖಾ ಅಮಾದಳದ ಮುಖ್ಯಸ್ಥ ಎಡಿಜಿಪಿ ಎಮ್.ಚಂದ್ರಶೇಖರ್ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿ ಬೀದರ್ ಜಿಲ್ಲಾ ಜೆಡಿಎಸ್ ಘಟಕದಿಂದ ಪ್ರತಿಭಟನೆ ನಡೆಸಲಾಯಿತು.
ಬೀದರ್ ನಗರದಲ್ಲಿ ಬುಧವಾರ ಜೆಡಿಎಸ್ ಜಿಲ್ಲಾ ಕಚೇರಿಯಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ರಾಜ್ಯಪಾಲರಿಗೆ ಬರೆದ ಮನವಿ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.

ಭ್ರಷ್ಟಾಚಾರ, ದುರ್ನಡತೆ, ಸುಲಿಗೆ ಸೇರಿದಂತೆ ಇತರೆ ಕ್ರಿಮಿನಲ್ ಪ್ರಕರಣಗಳಲ್ಲಿ ಭಾಗಿಯಾಗಿರುವ ಲೋಕಾಯುಕ್ತ ಎಸ್ಐಟಿ ಎಡಿಜಿಪಿ ಎಮ್.ಚಂದ್ರಶೇಖರ್ ಅವರನ್ನು ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸಿ ಅವರ ವಿರುದ್ಧ ಶಿಸ್ತು ಕಾನೂನು ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ತಾಲೂಕು, ಗ್ರಾಮೀಣ ಭಾಗದಲ್ಲಿ ಉಗ್ರವಾದ ಪ್ರತಿಭಟನೆ ನಡೆಸಬೇಕಾಗುತ್ತದೆʼ ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ರಾಯಚೂರು | ಧಾರಾಕಾರ ಮಳೆ : ಸಿಡಿಲಿಗೆ ಮಹಿಳೆ, ಎಮ್ಮೆ ಸಾವು
ಪ್ರತಿಭಟನೆಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ರಮೇಶ್ ಪಾಟೀಲ್ ಸೋಲಪುರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಕೋಡಗೆ ಹಾಗೂ ಜೆಡಿಎಸ್ ಮುಖಂಡರಾದ ದೇವೇಂದ್ರ ಸೋನಿ, ರಾಜು ಕಡ್ಯಾಳ, ಐಲಿಂಜಾನ್ ಮಠಪತಿ, ಎಮ್.ಡಿ ಅಸೋದುದ್ದೀನ್, ಸಜ್ಜದ್ ಸಾಹೇಬ್, ರಾಜಶೇಖರ ಜವಳೆ, ಭೋಮಗೊಂಡ ಚಿಟ್ಟಾವಾಡಿ, ಲಲಿತಾ ಕರಂಜಿ, ಅಭಿ ಕಾಳೆ, ಬಸವರಾಜ ಹಾರೂರಗೇರಿ, ಮಕ್ಸೂದ್ ಅಲಿ, ಶಿವಪುತ್ರ ಮಾಳಗೆ, ಪ್ರಲ್ಹಾದ್ ಚಿಟ್ಟಾವಾಡಿ, ಸಂಗು ಚಿದ್ರಿ, ರಾಜು ಚಿಂತಾಮಣಿ, ಅರುಣಕುಮಾರ್ ಎಸ್ ಹೊಸಪೇಟೆ, ಬಸವರಾಜ್ ಶಾಪೂರ್, ರವಿಕುಮಾರ್ ಎಸ್.ಎನ್ ಸಿರ್ಸಿ, ಪ್ರಶಾಂತ ವಿಶ್ವಕರ್ಮ, ಮಹಮ್ಮದ್ ಸಲಿಂ, ಜಗದೇವಿ ಮೇತ್ರಿ, ಶಾಂತಮ್ಮ, ನಾಗಮ್ಮ, ಲಕ್ಷ್ಮಣ್ ಗಾದಗಿ, ಚಂದಪ್ಪ, ಹಿರಾಮಣಿ ಬುದೇರಾ, ಶಿವಾಜಿ ಬರೂರ, ಸಂಜು ಬರೂರ, ಶಿವರಾಜ ಬಗದಲ್, ಗುರುದಾಸ್ ಕೋಳಾರ, ಜಾನ್ಸನ್, ಅಂಬಾದಾಸ ಸೋನಿ ಸೇರಿದಂತೆ ಇತರರಿದ್ದರು.