ವಯೋವೃದ್ಧ ಸಾವಿಗೆ ಯುವಕರು ಸೇರಿ ಅಂತ್ಯಕ್ರಿಯೆ ನೆರೆವೇರಿಸಿದ್ದು, ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ನಡೆದಿದೆ.
ಸ್ನೇಹ ಸಂಜೀವಿನಿ ವಿವಿಧೋದ್ದೇಶಗಳ ಸಂಸ್ಥೆಯ ವೈಭವ ನಿರ್ಗತಿಕರ ಆಶ್ರಮದಲ್ಲಿ ನಿರ್ಗತಿಕ ವಯೋವೃದ್ಧ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂಸ್ಥೆಯ ಸಿಬ್ಬಂದಿ ವರ್ಗದ ಹಾಗೂ ನರಗುಂದ ನಗರದ ಸಮಾಜಮುಖಿ ಯುವಕರು ಸೇರಿಕೊಂಡು ವಿಧಿ ವಿಧಾನದ ಮೂಲಕ ಮೃತರ ಅಂತ್ಯಕ್ರಿಯೆಯನ್ನು ನೆರವೇರಿಸಿದ್ದಾರೆ.
ಈ ಸಂದರ್ಭದಲ್ಲಿ ಯುವಕರು ಮಾತನಾಡಿ, ವಯೋವೃದ್ಧ ತಂದೆ ತಾಯಿಗಳನ್ನು ಮನೆಯಿಂದ ಹೊರಹಾಕಿ ನಿರ್ಗತಿಕರನ್ನಾಗಿ ಮಾಡುವುದನ್ನು ನಿಲ್ಲಿಸಬೇಕು. ಹಿರಿಯರಿಗೆ ಮನೆಯಲ್ಲಿರಿಸಿಕೊಂಡು ಅವರ ಆರೋಗ್ಯದ ಕಡೆಗೆ ಖಾಳಜಿ ವಹಿಸಬೇಕು. ಹಿರಿಯರನ್ನು ಅನಾಥ ಆಶ್ರಮಗಳಿಗೆ ಕಳಿಸುವುದನ್ನು ತಡೆಯಬೇಕು. ನಿರ್ಗತಿಕರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದರು.
ಇತ್ತೀಚಿನ ದಿನಮಾನಗಳಲ್ಲಿ ಹಿರಿಯ ಜೀವಿಗಳು ಅನೇಕ ಮಾರಣಾಂತಿಕ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ. ಅವರ ಕುಟುಂಬಸ್ಥರು ಅವರ ಆರೋಗ್ಯವನ್ನು ವಿಚಾರಿಸಬೇಕು. ಅವರನ್ನು ನೋಡಿಕೊಳ್ಳಬೇಕು. ಇಲ್ಲವಾದರೆ ನಿರ್ಗತಿಕರಾಗಿ ತಮ್ಮ ಜೀವನವನ್ನು ಕಳೆದುಕೊಳ್ಳುತ್ತಾರೆ. ಇಂಥ ಘಟನೆಗಳು ನಡೆಯದಂತೆ ಸರಕಾರ ಎಚ್ಚರವಹಿಸಬೇಕು.
ನಿರ್ಗತಿಕ ವ್ಯವಸ್ಥೆಗೆ ಒಳಗಾದವರಿಗೆ ಸರಿಯಾದ ತಿಳುವಳಿಕೆಯನ್ನು ಒದಗಿಸಬೇಕು. ಮತ್ತು ಯಾರೂ ಹೆತ್ತವರನ್ನು ನಿರ್ಗತಿಕರನ್ನಾಗಿ ಮಾಡಬಾರದು ಎಂದು ಯುವಕರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡರು.
ಇದನ್ನೂ ಓದಿ ಗದಗ | ಗೋವಿಂದ ಪೈ ಜಯಂತಿ ಸರ್ಕಾರದಿಂದ ಆಚರಿಸಲು ಮನೋಹರ್ ಮೆರವಾಡೆ ಒತ್ತಾಯ
ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರು. ಆಡಳಿತ ಮಂಡಳಿಥ ಹಾಗೂ ಸಿಬ್ಬಂದಿ ಮತ್ತು ನರಗುಂದದ ಸಮಾಜಮುಖಿ ಯುವಕರು ಭಾಗವಹಿಸಿದ್ದರು.