ಬಿ ಎಲ್ ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿ ಆರೋಪ; ದಿನೇಶ್‌ ಅಮಿನ್‌ಮಟ್ಟು ಸೇರಿ ಐವರ ವಿರುದ್ಧ ಎಫ್‌ಐಆರ್‌

Date:

Advertisements
  • ಬಿಜೆಪಿಯ ಬೆಂಗಳೂರು ಕೇಂದ್ರ ಜಿಲ್ಲೆಯ ಸಂಚಾಲಕ ಯಶವಂತರಿಂದ ದೂರು
  • ದೂರಿ‌ನ ಮೇರೆಗೆ ಮೈಸೂರು ನಗರ ಪೊಲೀಸರಿಂದ ದಿಲೀಪ್ ಗೌಡ ಬಂಧನ

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್ ವಿರುದ್ಧ ಸುಳ್ಳುಸುದ್ದಿ ಸೃಷ್ಟಿಸಿ ವೈರಲ್ ಮಾಡಿರುವ ಆರೋಪದ ಮೇಲೆ ಹಿರಿಯ ಪತ್ರಕರ್ತ ದಿನೇಶ್‌ ಅಮಿನ್‌ಮಟ್ಟು ಸೇರಿದಂತೆ ಐವರ ಮೇಲೆ ಬಿಜೆಪಿ ದೂರು ದಾಖಲಿಸಿದೆ.

ಭಾರತೀಯ ಜನತಾ ಪಕ್ಷದ ಕಾನೂನು ವಿಭಾಗದ ಬೆಂಗಳೂರು ಕೇಂದ್ರ ಜಿಲ್ಲೆಯ ಸಂಚಾಲಕ ಯಶವಂತ ಎಂ ಅವರು, ದಿನೇಶ್‌ ಅಮಿನ್‌ಮಟ್ಟು, ಬೈರಪ್ಪ ಹರೀಶ್‌ಕುಮಾರ್‌, ಹೇಮಂತ್‌ ಕುಮಾರ್‌, ದಿಲೀಪ್‌ ಗೌಡ ಹಾಗೂ ಬಿಂದು ಗೌಡ ಅವರ ಮೇಲೆ ಬೆಂಗಳೂರು ಉತ್ತರ ವಿಭಾಗದ ಸಿಇಎಸ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.  

“ಮೇ 5ರಂದು ದಿನಪತ್ರಿಕೆಯಲ್ಲಿ ಬಂದಿರುವ ಹಾಗೇ ಸುಳ್ಳು ಸುದ್ದಿಯಾದ ‘ನಾವು ಹಿಂದುತ್ವದಲ್ಲಿ ಮುಂದುವರಿಯುತ್ತೇವೆ, ಲಿಂಗಾಯತರ ಅಗತ್ಯವಿಲ್ಲ: ಬಿ ಎಲ್‌ ಸಂತೋಷ್‌’ ಎಂಬ ಒಂದು ವರದಿ ಬಂದಿರುವ ಹಾಗೇ ಸೃಷ್ಟಿಸಿ, ಅದನ್ನು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್‌ ಮಾಡಿದ್ದು, ಲಿಂಗಾಯತ ಸಮುದಾಯವನ್ನು ಬಿಜೆಪಿ ವಿರುದ್ಧ ಎತ್ತಿ ಕಟ್ಟುವ ಸಲುವಾಗಿ ಸುಳ್ಳು ಸುದ್ದಿ ಸೃಷ್ಟಿಸಿದ್ದಾರೆ” ಎಂದು ಯಶವಂತ ಎಂ ದೂರಿನಲ್ಲಿ ಆರೋಪಿಸಿದ್ದಾರೆ.

Advertisements

ಬಿಜೆಪಿ ನೀಡಿದ ದೂರಿ‌ನ ಮೇರೆಗೆ ದಿಲೀಪ್ ಗೌಡ ಅವರನ್ನು ಈಗಾಗಲೇ ಮೈಸೂರು ನಗರ ಪೊಲೀಸರು ಬಂಧಿಸಿದ್ದಾರೆ.

ಬಿ ಎಲ್‌ ಸಂತೋಷ್

ಬಿ ಎಲ್ ಸಂತೋಷ್ ವಿರುದ್ಧ ಸುಳ್ಳು ಸುದ್ದಿ ಸೃಷ್ಟಿಗೆ ದಿಲೀಪ್ ಗೌಡ ಬಂಧನಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದೆ. ಹಿರಿಯ ಪತ್ರಕರ್ತೆ ಹೇಮಾ ವೆಂಕಟ್ ಬಿಜೆಪಿಯ ನಡೆಯನ್ನು ಟೀಕಿಸಿ ಪೋಸ್ಟ್‌ ಹಾಕಿದ್ದು, “ಸುಳ್ಳು ಸುದ್ದಿ ಹರಡುವುದನ್ನು, ಸತ್ಯವನ್ನು ತಿರುಚುವುದನ್ನು ನಾನು ಬೆಂಬಲಿಸಲ್ಲ. ಆದರೆ ಒಂದು ರಾಷ್ಟ್ರೀಯ ಪಕ್ಷದ ಅಧ್ಯಕ್ಷ, ಮತ್ತವರ ಇಡೀ ಕುಟುಂಬವನ್ನು ಕತ್ತರಿಸಿ ಹಾಕುತ್ತೇನೆ ಎಂದು ಹೇಳಿಕೆ ನೀಡಿರುವ ರೌಡಿ, ಮೇಲಾಗಿ ‘ಸಂಸ್ಕೃತಿ ರಕ್ಷಕರ ಪಕ್ಷ’ ಬಿಜೆಪಿಯ ಅಭ್ಯರ್ಥಿ ಮಣಿಕಂಠ ರಾಥೋಡ್‌ನ ಬಂಧನವಾಗದಿದ್ದರೆ, ಚುನಾವಣಾ ಕಣದಿಂದ ಅನರ್ಹಗೊಳಿಸದಿದ್ದರೆ ಅದು ಈ ನೆಲದ ಕಾನೂನಿಗೆ ಮಾಡುವ ಘೋರ ಅವಮಾನ” ಎಂದು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಜೆಪಿಯಿಂದ ಖರ್ಗೆ ಕುಟುಂಬ ಹತ್ಯೆಗೆ ಸಂಚು, ಮೋದಿ ಮೌನಕ್ಕೆ ಶರಣು : ಸುರ್ಜೇವಾಲ ಗಂಭೀರ ಆರೋಪ

ಮುಂದುವರಿದು, “ಇದೇ ಬೆದರಿಕೆ ಮುಖ್ಯಮಂತ್ರಿ ಬೊಮ್ಮಾಯಿ ಅವರ ಮೇಲೆ ಬಂದಿದ್ದರೆ, ಸರ್ಕಾರ ಸುಮ್ಮನಿರುತ್ತಿತ್ತೇ? ಸುಳ್ಳು ಸುದ್ದಿ ಹರಡಿದವನ ಬಂಧನ ಮಾಡುವಲ್ಲಿ ಪೊಲೀಸರಿಗೆ ಇರುವ ಅದೇ ಬದ್ಧತೆ, ಕೊಲೆ ಬೆದರಿಕೆ ಹಾಕಿದವನನ್ನು ಬಂಧಿಸುವಲ್ಲಿಯೂ ಇರಬೇಕಲ್ಲ? ಬೆಂಗಳೂರಿನ ಆರ್ ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ತನ್ನ ಎದುರಾಳಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರ ಮೇಲೆ ನಡೆಸುತ್ತಿರುವ ದಾಳಿ ನೋಡಿಯೂ ಸುಮ್ಮನಿರುವ ಚುನಾವಣಾ ಆಯೋಗದ ಅಧಿಕಾರಿಗಳು ಯಾವ ಸಂದೇಶ ರವಾನಿಸುತ್ತಿದ್ದಾರೆ? ನಿನ್ನೆ ರಾತ್ರಿ ಪುಂಡನೊಬ್ಬ ಕೆಲವೇ ಬೆಂಬಲಿಗರ ಜೊತೆಗಿದ್ದ ಕುಸುಮಾ ಅವರನ್ನು ನಡು ರಸ್ತೆಯಲ್ಲಿ ತಳ್ಳಿರುವ ದೃಶ್ಯ ಹರಿದಾಡುತ್ತಿದೆ. ಮತದಾನ ಮುಗಿಯುವ ಮುನ್ನ ಅಭ್ಯರ್ಥಿಗಳ ಕೊಲೆ ನಡೆದರೂ ಅಚ್ಚರಿಯಿಲ್ಲ” ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸರ್ಕಾರದಿಂದ ನಷ್ಟ ಸರಿದೂಗಿಸಲಾಗದು, ರೈತರೇ ಕಷ್ಟಕ್ಕೆ ಒಗ್ಗಿಕೊಳ್ಳಬೇಕು: ಬಿಜೆಪಿ ನಾಯಕನ ಹೇಳಿಕೆಗೆ ತೀವ್ರ ಆಕ್ರೋಶ

ಇತ್ತೀಚಿಗೆ ಆದ ಅತಿವೃಷ್ಟಿಯಿಂದ ರೈತರಿಗೆ ಆಗಿರುವ ನಷ್ಟಕ್ಕೆ ಸರ್ಕಾರ ಪರಿಹಾರ ನೀಡಲು...

ಏನಿದು ಅನಿಲ್ ಅಂಬಾನಿ ಬ್ಯಾಂಕ್ ವಂಚನೆ? ಕ್ರಮ ಕೈಗೊಳ್ಳುತ್ತಾರ ಮೋದಿ?

ತನ್ನನ್ನು ತಾನು ದಿವಾಳಿ ಎಂದು ಘೋಷಿಸಿಕೊಂಡಿರುವ ಭಾರತದ ಭಾರೀ ಶ್ರೀಮಂತ ಉದ್ಯಮಿ...

ಧರ್ಮಸ್ಥಳ | ದೂರುದಾರನ ಹಿನ್ನೆಲೆ ತಿಳಿದುಕೊಂಡಿದ್ದರೆ ಸರ್ಕಾರದ ದುಡ್ಡು ಉಳೀತಿತ್ತು: ಆರ್. ಅಶೋಕ್

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂತಿಡಲಾಗಿದೆ ಎಂದು ದೂರು ಕೊಟ್ಟಿದ್ದ ಸಾಕ್ಷಿ ದೂರುದಾರನನ್ನು...

Download Eedina App Android / iOS

X