ಗಾಂಧಿ ಜಯಂತಿ ಅಂಗವಾಗಿ ಗದಗ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವೀಜೇತರಾದ ವಿದ್ಯಾರ್ಥಿಗಳಿಗೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬಹುಮಾನ ವಿತರಿಸಲಾಯಿತು.
ಪ್ರೌಢಶಾಲೆ, ಪದವಿಪೂರ್ವ, ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗದ ವಿದ್ಯಾರ್ಥಿಗಳಿಗೆ ಜಿಲ್ಲಾ ಮಟ್ಟದಲ್ಲಿ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹3,000, ದ್ವಿತೀಯ ಸ್ಥಾನ ₹2,000 ಮತ್ತು ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ₹1,000 ನಗದು ಬಹುಮಾನ ಹಾಗೂ ಪ್ರಮಾಣಪತ್ರ ವಿತರಿಸಿದರು.
ಪ್ರೌಢಶಾಲಾ ವಿಭಾಗ: ಮಲ್ಲಿಕಾ ಅಂ. ತಿಪ್ಪಾರೆಡ್ಡಿ ಪ್ರಥಮ, ದಿವ್ಯಾ ಬ.ಲಕ್ಕುಂಡಿ ದ್ವಿತೀಯ, ಚಿನ್ನಾ ತಾ.
ದೊಡ್ಡಮನಿ ತೃತೀಯ ಸ್ಥಾನ ಪಡೆದು ಬಹುಮಾನಕ್ಕೆ ಆಯ್ಕೆಯಾದರು.
ಪದವಿಪೂರ್ವ ವಿಭಾಗ : ವಿಜಯಕುಮಾರ ದೊಡ್ಡಮನಿ ಪ್ರಥಮ, ಮೀನಾಜ್ ಡಾಲಾಯತ್ ದ್ವಿತೀಯ, ನಾಗರಾಜ ಬೆನ್ನಳ್ಳಿ ತೃತೀಯ ಸ್ಥಾನ ಪಡೆದು ಬಹುಮಾನಕ್ಕೆ ಆಯ್ಕೆಯಾದರು.
ಪದವಿ ಮತ್ತು ಸ್ನಾತಕೋತರ ವಿಭಾಗ : ಭಾಗ್ಯಶ್ರೀ ವಿ ಸಿ ಪ್ರಥಮ, ರೋಶನಿ ತಳಕಲ್ ದ್ವಿತೀಯ, ಈರಮ್ಮ ಕುಂದಗೋಳ ತೃತೀಯ ಸ್ಥಾನ ಪಡೆದು ಬಹುಮಾನಕ್ಕೆ ಆಯ್ಕೆಯಾದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಶುಚಿ ಸಂಭ್ರಮ ಕಿಟ್ ವಿತರಿಸಲು ಎಸ್ಎಫ್ಐ ಆಗ್ರಹ
ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮೂರು ವಿಭಾಗದಿಂದ ಒಟ್ಟು ಒಂಬತ್ತು ಮಂದಿ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ನಗದು ಬಹುಮಾನ ಸ್ವೀಕರಿಸಿದರು.
