ಧಾರವಾಡ ಜಿಲ್ಲೆಯ ಅಳ್ನಾವರದ ಸಾಲು ಮರದ ತಿಮ್ಮಕ್ಕ ಉದ್ಯಾನವನದ ಹಿಂಬಾಗದಲ್ಲಿನ ಡೌಗಿ ನಾಲಾ ಹಳ್ಳದಲ್ಲಿ ಯುವಕನೊಬ್ಬ ಈಜು ಬಾರದೆ ಶುಕ್ರವಾರ ಅ. 6ರಂದು ಮೃತಪಟ್ಟಿರುವ ಘಟನೆ ನಡೆದಿದೆ.
ಶುಕ್ರವಾರ ಬೆಳಿಗ್ಗೆ ಮನೆಯಿಂದ ಹೊರಟು ಸ್ನಾನಕ್ಕೆಂದು ಹೇಳಿ ಹೋಗಿದ್ದ ಯುವಕ ಈಜು ಬಾರದೆ ದಡ ಸೇರಲು ಸೆಣಸಾಡಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ನಡೆದಿದೆ. ಮೃತ ಯುವಕನನ್ನು ಪವನ ಶೇಖಪ್ಪ ಬಂಡಿವಡ್ಡರ (16) ಎಂದು ಗುರುತಿಸಲಾಗಿದ್ದು, ಅಮೃತ ನಗರದ ನಿವಾಸಿ ಎಂದು ತಿಳಿದುಬಂದಿದೆ.
ಈ ಕುರಿತು ಅಳ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.