ಹಾವೇರಿ ಜಿಲ್ಲೆಯ ರಾಣೆಬೆನ್ನರು ಪಟ್ಟಣದ ತರಳಬಾಳು ಜಗದ್ಗುರು ತಾಂತ್ರಿಕ ಮಹಾವಿದ್ಯಾಲಯದಲ್ಲಿ 2024ನೇ ಸಾಲಿನಲ್ಲಿ ಉತ್ತೀರ್ಣರಾದ ಪದವೀಧರರಿಗೆ ಪದವಿ ಪ್ರದಾನ ಸಮಾರಂಭ ನಡೆಯಿತು.
ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಶಿವಕುಮಾರ್ ಬಿ ಮಾತನಾಡಿ, “ತಂತ್ರಜ್ಞಾನ ಮತ್ತು ಜಾಗತೀಕರಣದ ಸ್ಪರ್ಧಾತ್ಮಕ ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಗಳೊಂದಿಗೆ ವಿದ್ಯಾರ್ಥಿಗಳು ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು. ತಮ್ಮ ಮೌಲ್ಯಗಳು ಮತ್ತು ಸಂಸ್ಕೃತಿ, ಸಂಪ್ರದಾಯಗಳನ್ನು ಉಳಿಸಿಕೊಳ್ಳಬೇಕು. ಬೆಳೆಯುತ್ತಿರುವ ಈ ಜಗತ್ತಿಗೆ ಪೈಪೋಟಿ ನೀಡಿ ಕೊಡುಗೆ ನೀಡಬೇಕು” ಎಂದು ಸಲಹೆ ನೀಡಿದರು.
ಸಮಾರಂಭದಲ್ಲಿ ಸುಮಾರು 100ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.
ಈ ಸುದ್ದಿ ಓದಿದ್ದೀರಾ? ಧಾರವಾಡ | ಅಧಿಕಾರಿಗಳ ನಿರ್ಲಕ್ಷ್ಯ: ಕೆಟ್ಟಿರುವ ಸ್ಥಿತಿಯಲ್ಲೇ ಬಾಕಿಯಾದ ಶುದ್ಧ ಕುಡಿಯುವ ನೀರಿನ ಘಟಕ
ಡಾ.ಎಸ್.ಜಿ. ಮಾಕನೂರು ಸ್ವಾಗತಿಸಿದರು. ಡಾ.ಮುಜಿಬುಲ್ಲಾ ಖಾನ್ ಗುತ್ತಲ್ ವಂದಿಸಿದರು. ಪ್ರೊ.ಭಾವನಾ ಪಾಟೀಲ್ ಕಾರ್ಯಕ್ರಮ ನಿರೂಪಿಸಿದರು.
ಅಕ್ಯಾಡೆಮಿಕ್ ವಿಭಾಗದ ಡೀನ್ ಡಾ.ಎಸ್.ಎಫ್. ಕೊಡದ್, ವಿಭಾಗದ ಮುಖ್ಯಸ್ಥರಾದ ಪ್ರೊ.ಸಿ.ಎಂ.ಪರಮೇಶ್ವರಪ್ಪ, ಡಾ.ಎಸ್.ಜಿ. ಮಾಕನೂರು, ಡಾ.ಬಿ.ಮಹೇಶ್ವರಪ್ಪ, ಡಾ.ಮುಜೀಬುಲ್ಲಾ ಖಾನ್ ಗುತ್ತಲ್ , ಪ್ರೊ. ದಿನೇಶ್ ಮಾಗನುರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

