ತುಮಕೂರು | ಮನುಕುಲ ಭವಿಷ್ಯಕ್ಕಾಗಿ ಪರಿಸರ ಸಂರಕ್ಷಣೆ ಅಗತ್ಯ : ಜಿ.ಪರಮೇಶ್ವರ

Date:

Advertisements

ಮನುಷ್ಯ ಮತ್ತು ಸಕಲ ಜೀವಸಂಕುಲಗಳು ಬದುಕುಳಿಯಬೇಕಾದರೆ ಪರಿಸರವನ್ನು ಸಂರಕ್ಷಣೆ ಮಾಡುವ ಅಗತ್ಯವಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ತಿಳಿಸಿದರು.

ತುಮಕೂರು ನಗರದ ಎಂಪ್ರೆಸ್ ಶಾಲೆ ಸಭಾಂಗಣದಲ್ಲಿಂದು ನಡೆದ 70ನೇ ವನ್ಯಜೀವಿ ಸಪ್ತಾಹ ಕಾರ್ಯ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ಪರಿಸರವನ್ನು ನಾಶಮಾಡಿರುವ ಪರಿಣಾಮ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿದ್ದು, ಪ್ರಪಂಚದ ಹಸಿರು ಪದರ ಶೇ. 30 ರಷ್ಟಿದ್ದು, ದೇಶದಲ್ಲಿ ಶೇ.21.6, ರಾಜ್ಯದಲ್ಲಿ ಶೇ.21.2 ಹಾಗೂ ಜಿಲ್ಲೆಯಲ್ಲಿ ಶೇ.15ರಷ್ಟು ಮಾತ್ರ ಇದೆ. ಹಸಿರು ಪದರದ ಶೇಕಡ ಪ್ರಮಾಣ ಕಡಿಮೆಯಾಗಿ ಅನೇಕ ಜೀವ ಪ್ರಭೇದಗಳು ನಾಶದ ಅಂಚಿಗೆ ಬಂದು ನಿಂತಿವೆ. ಅರಣ್ಯ ನಾಶವಾದರೆ ವನ್ಯ ಜೀವಿಗಳೂ ಸಹ ನಾಶವಾಗುತ್ತವೆ. ವನ್ಯಜೀವಿಗಳನ್ನು ಸಂರಕ್ಷಿಸದಿದ್ದರೆ ಮುಂದಿನ ಪೀಳಿಗೆಯು ಪುಸ್ತಕ ಹಾಗೂ ಚಿತ್ರಗಳಲ್ಲಿ ಮಾತ್ರ ವನ್ಯ ಜೀವಿಗಳನ್ನು ನೋಡುವಂತಾಗುತ್ತದೆ ಎಂದರು.

WhatsApp Image 2024 10 06 at 11.28.05 AM

ಜಿಲ್ಲೆಯಲ್ಲಿ ಶೇಕಡಾ 15ರಷ್ಟು ಮಾತ್ರ ಹಸಿರು ಪದರವಿದ್ದು, ಹೆಚ್ಚಿನ ಗಿಡ-ಮರಗಳನ್ನು ಬೆಳೆಸಿ ಸಂರಕ್ಷಿಸಿ ಹಸಿರು ಪದರದ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಅರಣ್ಯ ಪ್ರದೇಶ ವಿಸ್ತರಣೆ ಮಾಡಬೇಕು. ಅರಣ್ಯ ಇಲಾಖೆಯಿಂದ ಪ್ರತಿ ವರ್ಷ ನೆಡಲಾಗುವ ಲಕ್ಷಾಂತರ ಗಿಡಗಳನ್ನು ಸಂರಕ್ಷಿಸಿ ಬೆಳಸುವುದರ ಮೂಲಕ ಜಿಲ್ಲೆಯಲ್ಲಿ ಅರಣ್ಯ ಪ್ರದೇಶವನ್ನು ವಿಸ್ತರಿಸಬೇಕು ಎಂದು ತಿಳಿಸಿದರು.

Advertisements

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಹಾಗೂ ಗುಬ್ಬಿ ಶಾಸಕ ಎಸ್.ಆರ್.ಶ್ರೀನಿವಾಸ್ ಮಾತನಾಡಿ, ವೈಯಕ್ತಿಕ ಬದುಕನ್ನು ಕಟ್ಟಿಕೊಳ್ಳಲು ಕಾಡುಗಳ ನಾಶ ಮಾಡುತ್ತಾ ಬಂದಿದ್ದೇವೆ. ಕಾಡುಗಳ ನಾಶದಿಂದ ಮನುಷ್ಯ ಮತ್ತು ವನ್ಯಜೀವಿಗಳ ನಡುವೆ ನಿರಂತರ ಸಂಘರ್ಷ ಉಂಟಾಗುವಂತಾಗಿದೆ. ಈ ನಿಟ್ಟಿನಲ್ಲಿ ಶಾಲೆ ಆವರಣ ಸೇರಿದಂತೆ ಸರ್ಕಾರಿ ಜಾಗಗಳಲ್ಲಿ ಹೆಚ್ಚು ಹೆಚ್ಚು ಗಿಡಗಳನ್ನು ನೆಡುವ ಮೂಲಕ ಅರಣ್ಯ ಪ್ರದೇಶವನ್ನು ಬೆಳೆಸಬೇಕು ಎಂದು ತಿಳಿಸಿದರು.

WhatsApp Image 2024 10 06 at 11.28.05 AM 1

ಕಾರ್ಯಕ್ರಮದಲ್ಲಿ ಅರಣ್ಯ ಸಂರಕ್ಷಣೆ, ಒತ್ತುವರಿ ತೆರವು, ವನ್ಯ ಜೀವಿ ಸಂರಕ್ಷಣೆ, ಉತ್ತಮ ನೆಡುತೋಪು ಬೆಳವಣಿಗೆ ಮತ್ತು ಸಂರಕ್ಷಣೆ ಸೇರಿದಂತೆ ಇಲಾಖೆಯಲ್ಲಿ ಉತ್ತಮ ಸೇವೆ ಸಲ್ಲಿಸಿದ ಗುಬ್ಬಿ ಉಪ ವಲಯದ ಅರಣ್ಯಾಧಿಕಾರಿ ಶಿವಪ್ರಸಾದ್; ಗಸ್ತು ಅರಣ್ಯಪಾಲಕರಾದ ಶಿರಾ ವಲಯದ ಬಿ.ಸಿ.ಮಂಜುನಾಥ್, ಕೊರಟಗೆರೆ ವಲಯದ ಟಿ.ನಿಂಗರಾಜು, ಕುಣಿಗಲ್ ವಲಯದ ಶಿವರಾಜು ಹಾಗೂ ಆರ್.ಶೇಖರ್; ಕ್ಷೇಮಾಭಿವೃದ್ಧಿ ನೌಕರರಾದ ಚಿಕ್ಕನಾಯಕನಹಳ್ಳಿ ವಲಯದ ಡಿ.ಸಿ.ಕೆಂಪಯ್ಯ, ತುಮಕೂರು ವಲಯದ ಹೆಚ್.ಎಲ್. ಗಂಗಣ್ಣ, ತಿಪಟೂರು ವಲಯದ ಹೊನ್ನಯ್ಯ, ಪಾವಗಡ ವಲಯದ ಮೂಡ್ಲಗಿರಿಯಪ್ಪ, ಮಧುಗಿರಿ ವಲಯದ ಶಿವರಾಜು ಹಾಗೂ ಬುಕ್ಕಾ ಪಟ್ಟಣ ವಲಯದ ನೆಡುತೋಪು ಕಾವಲುಗಾರ ರಾಮಚಂದ್ರಪ್ಪ ಸೇರಿದಂತೆ ಒಟ್ಟು 11 ಸಿಬ್ಬಂದಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

WhatsApp Image 2024 10 06 at 11.28.07 AM

ವನ್ಯಜೀವಿ ಸಪ್ತಾಹ ಅಂಗವಾಗಿ ಆಯೋಜಿಸಿದ್ದ ವನ್ಯ ಜೀವಿ ಛಾಯಾಚಿತ್ರ ಸ್ಪರ್ಧೆಯಲ್ಲಿ ಪ್ರಥಮಸ್ಥಾನ ಗಳಿಸಿದ ಶಿವಕುಮಾರ್ ನಟರಾಜನ್, ದ್ವಿತೀಯ ಸ್ಥಾನ ಗಳಿಸಿದ ಪ್ರಶಾಂತ್ ಬಿ. ನರ‍್ವಾಣಿ ರಾವ್, ತೃತೀಯ ಸ್ಥಾನ ಗಳಿಸಿದ ಕಿರಣ್ ವಾಸುದೇವ್ ಮತ್ತು ಉಮಾಶಂಕರ್ ಅವರಿಗೆ ಬಹುಮಾನ ವಿತರಿಸಲಾಯಿತು.

ಅರಣ್ಯ ಸಂರಕ್ಷಿಸುವ ಹಾಗೂ ಅರಣ್ಯ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಅರಣ್ಯ ಇಲಾಖೆಯೊಂದಿಗೆ ಕಾರ್ಯ ನಿರ್ವಹಿಸುತ್ತಿರುವ ವನ್ಯ ಜೀವಿ ಛಾಯಾಗ್ರಾಹಕರಾದ ಬಿ.ವಿ. ಗುಂಡಪ್ಪ, ಡಾ: ಅಭಿಜಿತ್, ಡಾ: ಕೆ.ವಿ.ನಟರಾಜ್, ಹೇಮಂತ್, ಪ್ರೊ. ರುದ್ರಮೂರ್ತಿ ಹಾಗೂ ಜಿ.ಎ. ಚಂದುಬಾಬು; ಮಕ್ಕಳ ತಜ್ಞ ಹಾಗೂ ವನ್ಯ ಜೀವಿ ಛಾಯಾಗ್ರಾಹಕ ಡಾ. ಎಂ.ಎಲ್. ರಜಿತ್; ಹವ್ಯಾಸಿ ಪಕ್ಷಿ ಛಾಯಾಗ್ರಾಹಕ ಡಾ: ಬಿ. ಉಮಾಶಂಕರ್; ವಾರ್ಕೋ ಸಂಸ್ಥಾಪಕ ಕಾರ್ತಿಕ್ ಸಿಂಗ್; ವೈಲ್ಡ್ಲೈಫ್ ಅವೇರ್ ನೇಚರ್ ಕ್ಲಬ್ ಸದಸ್ಯ ಎಂ. ಮಲ್ಲಿಕಾರ್ಜುನ್, ವಿಪಿನ್ ರಾಯ್ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.

WhatsApp Image 2024 10 06 at 11.28.06 AM 1

ಈ ಸಂದರ್ಭದಲ್ಲಿ ತುಮಕೂರು ಜಿಲ್ಲೆಯಲ್ಲಿರುವ ವಿವಿಧ ಪ್ರಬೇಧಗಳ ಪಕ್ಷಿ ಸಂಕುಲ, ಚಿಟ್ಟೆ, ಸರೀಸೃಪ ಸಂಕುಲಗಳ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಲಾಯಿತು.

ಎಸ್.ಐ.ಟಿ.ಯ ಅರುಣ್ಸ್ ಆಲ್ಫಾ ಅಕಾಡೆಮಿಯಿಂದ ವನ್ಯ ಜೀವಿಗಳೊಂದಿಗೆ ಸಹಬಾಳ್ವೆಯಿಂದ ಬದುಕುವ ಬಗ್ಗೆ ಕಿರು ನಾಟಕ ಪ್ರದರ್ಶಿಸಲಾಯಿತು.

ಜಿಲ್ಲೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಅನುಪಮ, ಹಾಸನ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಆರ್. ರವಿಶಂಕರ್, ದೇವರಾಜ್, ಪಾವಗಡ ಶಾಸಕ ಹೆಚ್.ವಿ. ವೆಂಕಟೇಶ್, ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ. ಅಶೋಕ್, ಪಾಲಿಕೆ ಆಯುಕ್ತ ಬಿ.ವಿ. ಅಶ್ವಿಜ, ಎನ್‌ಸಿಸಿ ವಿದ್ಯಾರ್ಥಿಗಳು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X