ಬೆಳಗಾವಿ | ಬಸವಣ್ಣ; ಸಮಾಜೋಧಾರ್ಮಿಕ, ರಾಜಕೀಯ, ಆರ್ಥಿಕ ತತ್ವಗಳ ಆಧ್ಯಾತ್ಮಿಕ ವಿಜ್ಞಾನಿ: ಡಾ. ಅವಿನಾಶ ಕವಿ

Date:

Advertisements

ಶರಣ ಸಂಸ್ಕೃತಿ ಶಿಬಿರ ಮಕ್ಕಳಿಗಾಗಿ ಆಯೋಜಿಸಿರುವುದು ಮುಂದಿನ ಜನಾಂಗಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ವೈಜ್ಞಾನಿಕ, ವೈಚಾರಿಕತೆಯ ಮನೋಭಾವಗಳ ಜೊತೆಗೆ ಏಕದೇವೋಪಾಸನೆಯ ಕುರಿತು ಅರಿವು ಮೂಡಿ ಲಿಂಗಾಯತ ಧರ್ಮ ಉಳಿಸಿಕೊಂಡು ಬರಲು ಸಾಧ್ಯವಿದೆ. ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ತತ್ವಗಳ ಆಧ್ಯಾತ್ಮಿಕ ವಿಜ್ಞಾನಿ ಎಂದು ಕೆ.ಎಲ್.ಇ ಸಂಸ್ಥೆಯ ಜೆ.ಎನ್.ಎಮ್.ಸಿ ವೈದ್ಯಕೀಯ ಮಹಾವಿದ್ಯಾಲಯದ ಉಪನ್ಯಾಸಕ ಡಾ. ಅವಿನಾಶ ಕವಿ ಹೇಳಿದರು.

ಬೆಳಗಾವಿ ಜಿಲ್ಲೆಯ ಚನ್ನಮ್ಮನ ಕಿತ್ತೂರು ತಾಲೂಕಿನ ಬೈಲೂರ ಗ್ರಾಮದ ನಿಷ್ಕಲ ಮಂಟಪ ಚೆನ್ನಬಸವಣ್ಣನವರ ಸಭಾಭವನದಲ್ಲಿ ನಿಜಗುಣಾನಂದ ಸ್ವಾಮಿಗಳ ನೇತೃತ್ವದಲ್ಲಿ ಆಯೋಜಿಸಿದ ಶರಣ ಸಂಸ್ಕ್ರತಿ ಶಿಬಿರ ಕಾರ್ಯಕ್ರಮದಲ್ಲಿ ಶಿವಯೋಗದಲ್ಲಿ ವೈಜ್ಞಾನಿಕತೆ ಕುರಿತು ಪ್ರಾತ್ಯಕ್ಷಿಕೆ ಮೂಲಕ ಉಪನ್ಯಾಸ ನೀಡಿ, ಲಿಂಗಾಯತ ಧರ್ಮದಲ್ಲಿ ಮುಖ್ಯವಾಗಿ ಮೂರು ಸಿದ್ಧಾಂತ, ತತ್ವಗಳು (ಅಷ್ಟಾವರಣ, ಪಂಚಾಚಾರ, ಷಟಸ್ಥಲ) ಇವೆ. ಅವು ಬಸವಣ್ಣನವರು, ಹಾಗೂ ಸಮಕಾಲೀನ ಶರಣರು ತಮ್ಮ ದೈನಂದಿನ ಜೀವನದ ಕುರಿತು ದಾಖಲಿಸುವ ಮೂಲಕ ಜಗತ್ತಿನ ಯಾವ ಸಾಹಿತ್ಯಕ್ಕೂ ಸರಿಸಾಟಿಯಾಗದೆ ಅತ್ಯಂತ ಉನ್ನತ ಸ್ಥಾನದಲ್ಲಿ ಬಸವಾದಿ ಶರಣರ ವಚನ ಸಾಹಿತ್ಯ ನಿಲ್ಲುತ್ತದೆ ಎಂದರು.

ವಿಶ್ವ ಅರೋಗ್ಯ ಸಂಸ್ಥೆಯು ಆರೋಗ್ಯ ಎಂದರೆ ಒಬ್ಬ ವ್ಯಕ್ತಿಯ ಸಂಪೂರ್ಣ ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಆಧ್ಯಾತ್ಮಿಕ ಸಮತೋಲನ ಸ್ಥಿತಿ ಎಂದು ತಿಳಿಸಿದ್ದಾರೆ. ಅದು ನಮ್ಮ ಚೆನ್ನಬಸವಣ್ಣನವರ ಕರಣಹಸಿಗೆ ಎಂಬ ವಚನ ಗ್ರಂಥದಲ್ಲಿದೆ. ಜೊತೆಗೆ ಮನುಷ್ಯ ತನ್ನ ಆಹಾರ, ನಿದ್ರೆ, ಮಾತು, ಮಿತವಾಗಿರಬೇಕು ಎಂದು ವಚನಗಳಲ್ಲಿ ಉಲ್ಲೇಖಿಸಲಾಗಿದೆ ಎಂದರು.

Advertisements

ಇಷ್ಟಲಿಂಗ ಕೇವಲ ಲಿಂಗಾಯತ ಧರ್ಮದ ಲಾಂಛನವಾಗಿ, ಪೂಜೆ ಮಾಡುವುದಷ್ಟೇ ಅಲ್ಲದೇ ಇದು ಸಾಮಾಜಿಕ, ಆರ್ಥಿಕ, ಸಾಮಾಜಿಕ, ರಾಜಕೀಯ, ಧಾರ್ಮಿಕ, ಮಾನಸಿಕ ಆರೋಗ್ಯ, ದೈಹಿಕ ಆರೋಗ್ಯ, ಆಧ್ಯಾತ್ಮಿಕ, ತತ್ವಜ್ಞಾನಗಳ ಕುರಿತು ಸಮಗ್ರವಾಗಿ ಮಾರ್ಗದರ್ಶಿಯಾಗಿ ಇಷ್ಟಲಿಂಗವೂ ವೈಜ್ಞಾನಿಕ ಪರಭಾಷೆಯ ಅಂಶಗಳನ್ನು ಹೊಂದಿದ್ದು, ಮಕ್ಕಳಿಗೆ ಇಷ್ಟಲಿಂಗ ಸಂಸ್ಕಾರ ಅತ್ಯಾವಶ್ಯಕವಾಗಿದೆ ಎಂದರು.

ಇಷ್ಟಲಿಂಗದ ಕುರಿತು ಶಿಬಿರಗಳು ನಡೆದಾಗ ಮನಸ್ಸು, ಭಾವನೆಗಳನ್ನು ನಿತ್ಯ ಚೈತನ್ಯವಾಗಿರಿಸಲು ಸಹಕಾರಿಯಾಗುತ್ತದೆ. ಬಸವಣ್ಣನವರು ಧಾರ್ಮಿಕ, ಸಾಮಾಜಿಕ, ರಾಜಕೀಯ, ಆರ್ಥಿಕ ತತ್ವಗಳ ಆಧ್ಯಾತ್ಮಿಕ ವಿಜ್ಞಾನಿ ಎಂದರು.

ಈ ಸಂದರ್ಭದಲ್ಲಿ ಬಸವಧರ್ಮ ಪೀಠದ ಬಸವ ದೇವರು, ಶಿಕ್ಷಕ ಮಹಾಂತೇಶ ತೋರಣಗಟ್ಟಿ, ಬಸವರಾಜ ಲದ್ದಿಮಠ, ರುದ್ರಪ್ಪ ಇಟಗಿ, ರವಿ ಪಾಟೀಲ, ಶಕ್ರಣ್ಣಾ ಪತ್ತಾರ,  ಸಂಗಮೇಶ ಹಿರೇಮಠ, ನಾಗೇಶ ಬೆಣ್ಣಿ, ಶಿವಾನಂದ ಮೆಟ್ಯಾಲ, ಫಕ್ಕೀರಗೌಡ ಹಾದಿಮನಿ, ರವಿ ಮಡಿವಾಳರ, ಚನ್ನಪಗೌಡ ಪಾಟೀಲ, ಸಂಜು ಕೋಟಗಿ, ಗದಿಗೇಪ್ಪ ರುಮೋಜಿ ಹಾಗೂ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಇದನ್ನು ಓದಿದ್ದೀರಾ? ಬೆಳಗಾವಿ | ಪೋಷಣ್ ಆ್ಯಪ್ ಹ್ಯಾಕ್; ಲಿಂಕ್ ಕಳುಹಿಸಿ ನಿಮ್ಮ ಹಣ ವಂಚಿಸುತ್ತಾರೆ: ಲಕ್ಷ್ಮೀ ಹೆಬ್ಬಾಳ್ಕರ್ ಎಚ್ಚರಿಕೆ

ನಾಗರಾಜ ಹಿರೇಮಠ ಸ್ವಾಗತಿಸಿದರು, ನಾಗೇಶ ಅಜ್ಜವಾಡಿಮಠ ನಿರೂಪಿಸಿದರು, ಶರಣು ಇಳಿಗೇರ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X