ರಾಮನಗರ | ಗಿಡ ನೆಡುವ ಮೂಲಕ ಜಯಕರ್ನಾಟಕ ಜನಪರ ವೇದಿಕೆಯ 4ನೇ ವಾರ್ಷಿಕೋತ್ಸವ ಆಚರಣೆ

Date:

Advertisements

ಜಯಕರ್ನಾಟಕ ಜನಪರ ವೇದಿಕೆಯ ನಾಲ್ಕನೇ ವಾರ್ಷಿಕೋತ್ಸವದ ಪ್ರಯುಕ್ತ ಅ.5ರ ಶನಿವಾರದಂದು ಕನಕಪುರದ ನಗರಸಭೆ ಮುಂಭಾಗದ ಉದ್ಯಾನವನದಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ನಗರಸಭಾ ಅಧ್ಯಕ್ಷೆ ಲಕ್ಷ್ಮಿ ಗೋವಿಂದಪ್ಪ, ಜಯಕರ್ನಾಟಕ ಜನಪರ ವೇದಿಕೆಯ ರಾಜ್ಯ ಸಲಹೆಗಾರರಾದ ಕುಮಾರಸ್ವಾಮಿ ಆಯೋಜಿಸಿದ್ದ ಪ್ರಗತಿಪರ ಸಂಘಟನೆಗಳ ಉಪಸ್ಥಿತಿಯಲ್ಲಿ ಹಣ್ಣಿನ ಗಿಡ ನೆಡುವ ಮೂಲಕ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಶುಭ ಕೋರಿದರು.

ಈ ವೇಳೆ ಕುಮಾರಸ್ವಾಮಿ, ಜಯಕರ್ನಾಟಕ ಜನಪರ ವೇದಿಕೆಯು ಸಂಸ್ಥಾಪನೆಗೊಂಡು ಇಂದಿಗೆ ನಾಲ್ಕು ವರ್ಷಗಳು ಸಂದಿವೆ. ಇದು ಅರ್ಥಪೂರ್ಣ ಮತ್ತು ಫಲವತ್ತಾದ ಯಾನವಾಗಿದೆ. ಇತರರ ಸೇವೆಯಲ್ಲಿ ತೊಡಗಿಸಿಕೊಂಡು ನಿಮ್ಮನ್ನು ನೀವೇ ಹುಡುಕಿಕೊಳ್ಳುವುದು, ಸರ್ವೋತ್ತಮ ಮಾರ್ಗವಾಗಿದೆ ಎಂಬ ಮಾತಿನಂತೆ ಈ ವಾರ್ಷಿಕೋತ್ಸವದ ಸವಿ ನೆನಪನ್ನು ಫಲ ನೀಡುವ ಗಿಡ ನೆಡುವ ಮೂಲಕ ಪ್ರಕೃತಿಯೂ ಸಹ ನಮ್ಮ ಸಂಭ್ರಮದಲ್ಲಿ ಭಾಗಿಯಾಗುವಂತೆ ಈ ಕಾರ್ಯಕ್ರಮ ಆಚರಿಸುತ್ತಾ ಬಂದಿದೆ ಎಂದರು.

Advertisements

ಜಯಕರ್ನಾಟಕ ಜನಪರ ವೇದಿಕೆಯು ಇಂದು ಇಲ್ಲಿ ಮಾತ್ರವಲ್ಲದೆ ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಸಹ ಹಣ್ಣಿನ ಗಿಡ ನೆಡುವ ಮೂಲಕ ಕರ್ನಾಟಕದಾದ್ಯಂತ ಆಚರಿಸುತ್ತಿರುವುದು ಹೆಮ್ಮೆಯ ಸಂಗತಿ. ನಮ್ಮದು ಕೇವಲ ಕನ್ನಡಪರ ಸಂಘಟನೆಯಲ್ಲದೆ, ಸಾಮಾಜಿಕ ಕೈಂಕರ್ಯಗಳನ್ನು ಸಹ ಅನುಸರಿಸುವ ವಿಶಿಷ್ಠವಾದ ಸಂಘಟನೆ ಎನಿಸಿದೆ. ಸಂಸ್ಥಾಪಕರಾದ ಗುಣರಂಜನ್ ಶೆಟ್ಟಿ, ಹಾಗೂ ರಾಜ್ಯಾಧ್ಯಕ್ಷರಾದ ಶ್ರೀನಿವಾಸ್ ಗೌಡರ ಮಾರ್ಗದರ್ಶನದಲ್ಲಿ ಜಯಕರ್ನಾಟಕ ಜನಪರ ವೇದಿಕೆ ಸಂಘಟನೆಯು ಉತ್ತಮ ಆಶಯಗಳನ್ನು ಹೊತ್ತು ಸಾಗುತ್ತಿದೆ ಎಂದು ನೆನಪಿಸಿದರು.

ramanagar 2

ಜಿಕೆವಿಕೆಯ ನಿವೃತ್ತ ಪ್ರೊಫೆಸರ್ ಪುಟ್ಟರಾಜು ಮಾತನಾಡಿ, ಕನ್ನಡಪರ ಸಂಘಟನೆಯೊಂದು ಪರಿಸರ ಸ್ನೇಹಿ ಕಾರ್ಯಗಳಲ್ಲಿ ಸಹ ಭಾಗಿಯಾಗಿ ಆದರ್ಶ ಮೆರೆಯುತ್ತಿರುವುದು ಸಂತಸಕರ ಸಂಗತಿ. ಕನಕಪುರದಲ್ಲಿ ಕೃಷಿ ಕಾಲೇಜು ಸಹ ಅನುಮೋದನೆಗೊಂಡಿದ್ದು, ಮುಂದೆ ಇಲ್ಲಿನ ಹಸಿರ ಮಡಿಲಿನ ರೈತರ ಮಕ್ಕಳು ಕೃಷಿ ವಿಭಾಗದಲ್ಲಿ ಕಡಿಮೆ ಖರ್ಚಿನಲ್ಲಿ ಪದವೀಧರರಾಗಿ ಪರಿಸರಮುಖಿ ಸಂಶೋಧನೆಗಳಲ್ಲಿ ತೊಡಗಿಕೊಳ್ಳುವುದನ್ನು ಈ ಸಂದರ್ಭದಲ್ಲಿ ಹೇಳಲು ಹೆಮ್ಮೆ ಎನಿಸುತ್ತದೆ ಎಂದರು.

ಜಿಲ್ಲಾ ಲೇಖಕರ ವೇದಿಕೆಯ ಜಿಲ್ಲಾಧ್ಯಕ್ಷರಾದ ಸಾಹಿತಿ ಕೂ.ಗಿ. ಗಿರಿಯಪ್ಪ ಮಾತನಾಡಿ, ಕನ್ನಡಪರ ಸಂಘಟನೆಯೊಂದು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೇಲ್ಪಂಕ್ತಿ ಹಾಕಿ ಕೊಟ್ಟಿದೆ. ಅದಕ್ಕಾಗಿ ಜಯಕರ್ನಾಟಕ ಜನಪರ ವೇದಿಕೆಗೆ ಶುಭ ಹಾರೈಸುತ್ತೇನೆ ಎಂದರು.

ಇದನ್ನು ಓದಿದ್ದೀರಾ? ಚಿತ್ರದುರ್ಗ | ಒಳಮೀಸಲಾತಿ ಜಾರಿಗೊಳಿಸದಿದ್ದರೆ ಸಿಎಂ ಮನೆಗೆ ಪಾದಯಾತ್ರೆ: ಪಾವಗಡ ಶ್ರೀರಾಮ್

ಕಾರ್ಯಕ್ರಮದಲ್ಲಿ ಸ್ಟುಡಿಯೋ ಚಂದ್ರು, ಪ್ರಶಾಂತ್ ಹೊಸದುರ್ಗ, ಕನ್ನಡ ಭಾಸ್ಕರ್, ಗಬ್ಬಾಡಿ ಕಾಡೇಗೌಡ, ಮಳಗಾಳು ದಿನೇಶ್, ಚೀರಣಗುಪ್ಪೆ ರಾಜೇಶ್, ನಲ್ಲಹಳ್ಳಿ ಶ್ರೀನಿವಾಸ್, ಚಲವಾದಿ ನವೀನ್, ಕೆಬ್ಬಹಳ್ಳಿ ಶಿವರಾಜು, ಪುಟ್ಟಲಿಂಗಯ್ಯ, ಅಸ್ಗರ್ ಖಾನ್, ಅಂಗಡಿ ರಮೇಶ್, ಹಾರೋಹಳ್ಳಿ ಗಿರೀಶ್, ಕುಮಾರ್, ಅಂದಾನಿಗೌಡ, ಕಗ್ಗಲಹಳ್ಳಿ ಲಿಂಗರಾಜು, ಹಾಗೂ ನಗರಸಭೆ ಸಿಬ್ಬಂದಿಗಳು ಪಾಲ್ಗೊಂಡಿದ್ದರು‌.

ಈದಿನ 2
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X