ಖಾಸಗಿ ವೈದ್ಯಕೀಯ ಕಾಲೇಜಿನ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯೋರ್ವ ನಿಗೂಢವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಶಹಜಹಾನ್‌ಪುರದಲ್ಲಿ ನಡೆದಿದೆ. ವಿದ್ಯಾರ್ಥಿಯು ಕ್ಯಾಂಪಸ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾನೆ ಎಂದು ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಮೃತರನ್ನು ವರುಣ್ ಅರ್ಜುನ್ ವೈದ್ಯಕೀಯ ಕಾಲೇಜಿನ ಕುಶಾಗ್ರ ಪ್ರತಾಪ್ ಸಿಂಗ್ (24) ಎಂದು ಗುರುತಿಸಲಾಗಿದೆ.
ಈ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ನೀಡಿದ ಕಾಲೇಜಿನ ಪ್ರಾಂಶುಪಾಲ, ಕರ್ನಲ್ (ನಿವೃತ್ತ) ಡಾ ರವೀಂದ್ರ ನಾಥ್ ಶುಕ್ಲಾ, “ವರುಣ್ ಅರ್ಜುನ್ ಗೋರಖ್‌ಪುರದ ನಿವಾಸಿಯಾಗಿದ್ದು ಕಾಲೇಜಿನಲ್ಲಿ ಎರಡನೇ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದರು. ಇಂದು ಅವರ ಮೃತದೇಹವು ಹಾಸ್ಟೆಲ್ ಹಿಂದೆ ಕಂಡುಬಂದಿದೆ. ನಂತರ ಪೊಲೀಸರಿಗೆ ಮಾಹಿತಿ ನೀಡಲಾಯಿತು” ಎಂದು ತಿಳಿಸಿದರು.
ಇದನ್ನು ಓದಿದ್ದೀರಾ? ದೆಹಲಿ | ಮದರಸಾದಲ್ಲಿ ಬಾಲಕ ನಿಗೂಢವಾಗಿ ಸಾವು
ಮೂರು ಅಂತಸ್ತಿನ ಕಟ್ಟಡವಾಗಿರುವ ಹಾಸ್ಟೆಲ್‌ನ ನೆಲ ಮಹಡಿಯಲ್ಲಿ ವಿದ್ಯಾರ್ಥಿ ವಾಸಿಸುತ್ತಿದ್ದ. ವಿದ್ಯಾರ್ಥಿ ತಾನಾಗಿಯೇ ಕಟ್ಟಡದಿಂದ ಬಿದ್ದಿರಬಹುದು ಅಥವಾ ಯಾರಾದರೂ ತಳ್ಳಿರಬಹುದು. ಆದರೆ ಮರಣೋತ್ತರ ಪರೀಕ್ಷೆ ಬಳಿಕವೇ ಸರಿಯಾದ ಮಾಹಿತಿ ಲಭಿಸಲಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜೇಶ್ ಎಸ್ ಹೇಳಿದರು.
ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಈ ಕುರಿತು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
