ಹಾವೇರಿ | ನಾಡಹಬ್ಬವು ಸಾಂಸ್ಕೃತಿಕ ಪರಂಪರೆಯ ಜೀವಂತ ಪಳೆಯುಳಿಕೆ: ಜಾನಪದ ವಿದ್ವಾಂಸ ಶಂಭು ಬಳಿಗಾರ

Date:

Advertisements

ಕನ್ನಡ ನಾಡಿನಲ್ಲಿ ವಿಶಿಷ್ಟವಾಗಿ ಆಚರಿಸುತ್ತಿರುವ ನಾಡಹಬ್ಬವು ರಾಜ್ಯದ ಸಾಂಸ್ಕೃತಿಕ ಪರಂಪರೆಯ ಜೀವಂತ ಪಳೆಯುಳಿಕೆಯಾಗಿದೆ. ಪ್ರಾಚೀನ ಮತ್ತು ಐತಿಹಾಸಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದು, ಅವುಗಳ  ಉಳಿವು ಮತ್ತು ಮುಂದಿನ ಜನಾಂಗಕ್ಕೆ ವರ್ಗಾಯಿಸುವ ಮಹತ್ತರ ಜವಾಬ್ದಾರಿ ಪ್ರತಿ ನಾಗರಿಕನ ಮೇಲಿದೆ ಎಂದು ಇಳಕಲ್‌ನ ಜಾನಪದ ವಿದ್ವಾಂಸ ಶಂಭು ಬಳಿಗಾರ ಹೇಳಿದರು.

ಹಾವೇರಿ ಪಟ್ಟಣದ ಗುರುಭವನದಲ್ಲಿ ಹಾವೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ʼ27 ನೇ ನಾಡಹಬ್ಬ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

“ದೇಶದಲ್ಲಿ ಆಚರಿಸುವ ಯಾವುದೇ ಹಬ್ಬಗಳು ತನ್ನದೇ ಆದ ವಿಶಿಷ್ಟ ಐತಿಹ್ಯವನ್ನು ಹೊಂದಿವೆ. ಮಹಾಭಾರತದ ಕಾಲದಲ್ಲಿ ಈ ನಾಡಹಬ್ಬದ  ಆಚರಣೆ ಪ್ರಾರಂಭವಾಗಿದೆ. ನಮ್ಮ ನಡುವೆ ಪ್ರೀತಿ ವಿಶ್ವಾಸ, ನಂಬಿಕೆ ಹೆಚ್ಚಿಸಬೇಕು.  ಕೌಟುಂಬಿಕ ಮೌಲ್ಯಗಳು ಹಾಗೂ ಪ್ರಕೃತಿಯೊಂದಿಗೆ ಮಾನವ ಸಂಬಂಧ ಸುಧಾರಣೆಯ ಪ್ರತಿಪಾದನೆಯೂ ಹಬ್ಬದ  ಆಚರಣೆಯ ಮೂಲ ಆಶಯವಾಗಿದೆ” ಎಂದು ಶಂಭು ಬಳಿಗಾರ ಹೇಳಿದರು.

Advertisements

ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, “ನಾಡಹಬ್ಬವನ್ನು ಕೇವಲ ಸಾಂಪ್ರದಾಯಕವಾಗಿ ಮಾತ್ರ ಆಚರಣೆ ಮಾಡದೇ ಇದಕ್ಕೆ ಆಧುನಿಕ  ಸ್ಪರ್ಶವನ್ನು ನೀಡಬೇಕಾಗಿದೆ. ಆ ಮೂಲಕ ಯುವ ಜನಾಂಗವೂ ಕೈ ಜೋಡಿಸಲು ಸಾಧ್ಯವಾಗುತ್ತದೆ. ಗ್ರಾಮೀಣ ಯುವ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಇಂಥಹ ವೇದಿಕೆಗಳು ಸಹಕಾರಿಯಾಗಬೇಕು. ಸರ್ಕಾರಗಳು ಕೇವಲ ಮೈಸೂರಿಗೆ ಮಾತ್ರ  ಆದ್ಯತೆ ನೀಡದೇ ಎಲ್ಲ ಕಡೆಗೂ ಕನ್ನಡ ಹಬ್ಬವಾಗಲು ಸಹಾಯ ಮಾಡಬೇಕು” ಎಂದು ಹೇಳಿದರು.

ಜಿಲ್ಲಾ ಕಸಾಪ  ಅಧ್ಯಕ್ಷ ಲಿಂಗಯ್ಯ ಹಿರೇಮಠ್ ಮಾತನಾಡಿ, ಕನ್ನಡ ಸಾಹಿತ್ಯ ಭವನವು ಮುಕ್ತಾಯದ ಹಂತದಲ್ಲಿದ್ದು, ಮುಂದಿನ ನಾಡಹಬ್ಬ ಕಾರ್ಯಕ್ರಮಗಳು ಹೊಸ ಸಾಹಿತ್ಯ ಭವನದಲ್ಲಿಯೇ ನಡೆಯುತ್ತವೆ. ಇದಕ್ಕೆ ಸಾರ್ವಜನಿಕರ ಸಹಾಯ ಸಹಕಾರ ಬೇಕಾಗಿದೆ ಎಂದು ಹೇಳಿದರು.

ಮಾಜಿ ಶಾಸಕ ನೆಹರೂ ಓಲೇಕಾರ ಮತ್ತು ನಗರಸಭೆ ಅಧ್ಯಕ್ಷೆ ಶಶಿಕಲಾ ಮಾಳಗಿ ಮಾತನಾಡಿದರು. ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಅವಿಸ್ಮರಣೀಯ  ಸೇವೆ ಸಲ್ಲಿಸಿದ ಶಿವಣ್ಣ ಶಿರೂರ, ಹೊನ್ನಪ್ಪ ತಿಮ್ಮಾಪುರ, ಮುರುಗೆಪ್ಪ ಕಡೇಕೊಪ್ಪ, ಸಾವೇಂತ್ರವ್ವ ಹುಳಬುತ್ತಿ, ದುರುಗಮ್ಮ ಬಾರ್ಕಿ, ಸುರೇಶ ಚಲುವಾದಿ, ಅಬ್ದುಲ್ ಹುಬ್ಬಳ್ಳಿ, ನಾಗಪ್ಪ ಶೇಷಗಿರಿ ಅವರನ್ನು ಸನ್ಮಾನಿಸಲಾಯಿತು.

ಸಮತಾ ಕಲಾ ತಂಡ ಪ್ರಾರ್ಥಿಸಿದರು. ಎಸ್.ಆರ್. ಹಿರೇಮಠ್ ಸ್ವಾಗತಿಸಿದರು. ತಾಲೂಕು ಕಸಾಪ ಅಧ್ಯಕ್ಷ ವಾಯ್.ಬಿ.ಆಲದಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಅಕ್ಕಮ್ಮ ಹಾನಗಲ್ಲ ಮತ್ತು ಶೋಭಾ ಜಾಗಟಗೇರಿ ನಿರೂಪಿಸಿದರು. ಶಂಕರ ಬಡಗೇರ ವಂದಿಸಿದರು. ನಂತರ ಹಲವು ಕಲಾ ತಂಡಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆದವು.

ಈ ಸುದ್ದಿ ಓದಿದ್ದೀರಾ? ಬೆಳಗಾವಿ | ಬಸವಣ್ಣ; ಸಮಾಜೋಧಾರ್ಮಿಕ, ರಾಜಕೀಯ, ಆರ್ಥಿಕ ತತ್ವಗಳ…

ನಾಡಹಬ್ಬ ಉತ್ಸವ ಸಮಿತಿ ಅಧ್ಯಕ್ಷ ಶಂಕರ ಸುತಾರ  ಅಧ್ಯಕ್ಷತೆ ವಹಿಸಿದ್ದರು. ನಗರಸಭೆ ಉಪಾಧ್ಯಕ್ಷ ಮಲ್ಲಣ್ಣ ಸಾತೇನಹಳ್ಳಿ, ಎಸ್.ಎನ್. ದೊಡ್ಡಗೌಡರ, ವಿ.ಪಿ. ದ್ಯಾಮಣ್ಣನವರ,  ಅಮೃತಮ್ಮ ಶೀಲವಂತರ, ಚಂಪಾ ಹುಣಸಿಕಟ್ಟಿ, ಈರಣ್ಣ ಬೆಳವಡಿ, ಲಲಿತಕ್ಕ ಹೊರಡಿ, ಮಲ್ಲಿಕಾರ್ಜುನ ಹಿಂಚಿಗೇರಿ, ಸಿ.ಎಸ್.ಮರಳಿಹಳ್ಳಿ, ರಾಜೇಂದ್ರ ಹೆಗಡೆ, ಪೃಥ್ವಿರಾಜ ಬೆಟಗೇರಿ, ಸಿ.ಸಿ.ಪ್ರಭುಗೌಡರ, ಭರತರಾಜ ಹಜಾರೆ, ದಾಕ್ಷಾಯಣಿ ಗಾಣಗೇರಿ, ಗೀತಾ ಸುತ್ತಕೋಟಿ, ಮಮತಾ ನಂದೀಹಳ್ಳಿ, ಮಾಲತೇಶ ಮರಿಗೂಳಪ್ಪನವರ, ಕೆ.ಆರ್. ಹಿರೇಮಠ ಮತ್ತಿತರರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

ಚಿಕ್ಕಮಗಳೂರು | ಐದಳ್ಳಿ ಗ್ರಾಮದಲ್ಲಿ ನಿಲ್ಲದ ಕಾಡಾನೆಗಳ ದಾಂಧಲೆ: ಬೆಳೆ ನಾಶ; ಕ್ರಮಕ್ಕೆ ರೈತರ ಒತ್ತಾಯ

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆ ನಡುವೆ ಕಾಡಾನೆಗಳ ದಾಂಧಲೆ ಮಿತಿ...

Download Eedina App Android / iOS

X