ಮುಖ್ಯಮಂತ್ರಿ ಸಿದ್ದರಾಮಯ್ಯ ಝೀರೋ ಟ್ರಾಫಿಕ್‌ನಲ್ಲಿ ಸಂಚರಿಸುವ ವೇಳೆ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಪ್ರಯಾಣಿಸುತ್ತಿದ್ದ ಕಾರು ವಿರುದ್ಧ ದಿಕ್ಕಿನಲ್ಲಿ ಚಲಾಯಿಸಿ, ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಚಾಲಕನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಸಿಎಂ ಸಿದ್ದರಾಮಯ್ಯ ರಾಯಚೂರು ಪ್ರವಾಸ ಮುಗಿಸಿ ಬಳ್ಳಾರಿ ಜಿಂದಾಲ್ ವಿಮಾನ ನಿಲ್ದಾಣಕ್ಕೆ ತೆರಳುವ ಮಾರ್ಗದ ಮಧ್ಯೆ ಗಂಗಾವತಿ ನಗರದ ಸಿಬಿಎಸ್ ವೃತ್ತದಲ್ಲಿ ಡಿವೈಡರ್ ಹತ್ತಿಸಿದ ಘಟನೆ ಶನಿವಾರ ನಡೆದಿತ್ತು.
ಇದನ್ನು ಓದಿದ್ದೀರಾ? ಕೊಪ್ಪಳ | ಸಿಎಂ ಬರುವ ದಾರಿಯಲ್ಲಿ ವಿರುದ್ಧ ದಿಕ್ಕಿಗೆ ಸಾಗಿದ ಜನಾರ್ದನ ರೆಡ್ಡಿ ಕಾರು : ತಪ್ಪಿದ ಅನಾಹುತ
ನಗರದಲ್ಲಿ ಝೀರೋ ಟ್ರಾಫಿಕ್ ಸಂಚಾರ ದಟ್ಟಣೆಯಿಂದ ಶಾಸಕ ಜನಾರ್ಧನ್ ರೆಡ್ಡಿ ಸಿಲುಕಿಕೊಂಡಿತ್ತು. ಸಿಎಂ ಬೆಂಗಾವಲು ವಾಹನ ಬೇಗ ಬಾರದೆ ಕಾರಣ ತಾಳ್ಮೆ ಕಳೆದುಕೊಂಡಿದ್ದ ಶಾಸಕರ ವಾಹನ, ವಿರುದ್ಧ ದಿಕ್ಕಿನಲ್ಲಿ ಚಲಿಸಿತ್ತು. ಘಟನೆಯ ವಿಡಿಯೋ ವೈರಲಾದ ಬಳಿಕ ಗಂಗಾವತಿ ಟ್ರಾಫಿಕ್ ಪೊಲೀಸರು ಶಾಸಕ ಜನಾರ್ದನ ರೆಡ್ಡಿ ಚಾಲಕನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
