ನ್ಯಾಯಾಧೀಕರಣದ ಅಂತಿಮ ಆದೇಶವಾಗಿ, ದೀರ್ಘ ಅವಧಿ ಗತಿಸಿದರೂ ಕಳಸಾ-ಬಂಡೂರಿ, ಮಹದಾಯಿ ಯೋಜನೆ ವಿಳಂಬ ಆಗುತ್ತಿರುವುದು ನೋವಿನ ಸಂಗತಿ. ನಮ್ಮ ಉತ್ತರ ಕರ್ನಾಟಕದಲ್ಲಿ ನಾಲ್ಕು ದಶಕಗಳಿಂದ ರೈತರನ್ನು ಕಡೆಗಣಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯ ವಿರೋಧಿಯಾಗಿದೆ ಎಂದು ರೈತ ಮುಖಂಡ ವಿಠ್ಠಲ ಜಾಧವ್ ಹೇಳಿದರು.
ಗದಗ ಜಿಲ್ಲೆಯ ನರಗುಂದ ಪಟ್ಟಣದಲ್ಲಿ ಕರ್ನಾಟಕ ರೈತ ಸಂಘಟನೆಗಳ ಮಹಾಸಂಘ ಒಕ್ಕೂಟ ಹಾಗೂ ಮಹದಾಯಿ ಕಳಸ ಬಂಡೂರಿ ಹೋರಾಟದ ಮುಖಂಡರು, ಮಹದಾಯಿ, ಕಳಸಾ-ಬಂಡೂರಿ ಜಾರಿಗೊಳಿಸಬೇಕು ಮತ್ತು ರೈತ ಹುತಾತ್ಮ ಸ್ಮಾರಕ ಅಭಿವೃದ್ಧಿ ಆಗಬೇಕೇಂದು ಉಪವಾಸ ಸತ್ಯಾಗ್ರಹ ನಡೆಸಿ, ತಹಶೀಲ್ದಾರ್ ಮೂಲಕ ಸಂಸದ ಪಿ ಸಿ ಗದ್ದಿಗೌಡ್ರ ಅವರಿಗೆ ಮನವಿ ಸಲ್ಲಿಸಿ, ಮಾತನಾಡಿದರು.

“ಮಹದಾಯಿಯ ಅಂತಿಮ ಹೋರಾಟಕ್ಕೆ ಸಜ್ಜಾಗಿದ್ದೇವೆ. ಸರಕಾರಕ್ಕೆ ಕಳಸಾ ಬಂಡೂರಿ ಮಹದಾಯಿ ಯೋಜನೆ ಜಾರಿ ಮಾಡಲು ಆಗುವುದಿಲ್ಲವೋ, ಆಗುತ್ತದೆಯೋ ಎಂದಾದರೂ ಹೇಳಲಿ. ಎಲ್ಲ ವ್ಯಾಜ್ಯವೂ ಕೊನೆಯಾಗಬೇಕು” ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ಕಲಬುರಗಿ | ಜೀವ ಕಳೆದುಕೊಳ್ಳುವ ಹಂತದಲ್ಲಿದೆ ಐತಿಹಾಸಿಕ ಮಳಖೇಡ ಕೋಟೆ
1980ರಲ್ಲಿ ರೈತ ಬಂಡಾಯದಲ್ಲಿ ರೈತರಿಗಾಗಿ ಪ್ರಾಣತ್ಯಾಗ ಮಾಡಿದ ‘ಈರಪ್ಪ ಕಡ್ಲಿಕೊಪ್ಪ’ ಇವರ ವೀರಗಲ್ ಅಭಿವೃದ್ಧಿ ಮತ್ತು ಸ್ಮಾರಕ ನಿರ್ಮಾಣ ಮಾಡಿ ಹುತಾತ್ ರೈತನಿಗೆ ಗೌರವ ನೀಡಬೇಕೆಂದು ಮಹಾತ್ಮ ಗಾಂಧಿಜಿಯವರ ಸತ್ಯ, ಅಹಿಂಸೆ, ತತ್ವದಡಿ ನಿರಂತರ ಉಪವಾಸ ಸತ್ಯಾಗ್ರವನ್ನು ಹಮ್ಮಿಕೊಂಡಿದ್ದೇವೆ. ಪರಿಹಾರ ಸಿಗದಿದ್ದಲ್ಲಿ ನಿರಂತರ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.