ಕಾರ್ಮಿಕ ನಾಯಕ ಆನಂದ ರಾಜ್ ಸ್ಪೂರ್ತಿಯ ಚಿಲುಮೆಯಾಗಿದ್ದರು. ದಾವಣಗೆರೆ ಜಿಲ್ಲೆಯ ಕಾರ್ಮಿಕ ಚಳುವಳಿಗೆ ಸ್ಫೂರ್ತಿ ಆಗಿದ್ದರು. ಯಾವುದೇ ವಿಷಯಗಳನ್ನು ನೇರವಾಗಿ ಹೇಳುವುದರ ಜೊತೆಗೆ ತಪ್ಪುಗಳನ್ನು ಖಂಡಿಸುತ್ತಿದ್ದರು. ನಿಷ್ಠುರವಾದಿ, ಸ್ನೇಹಜೀವಿ, ಮಾರ್ಗದರ್ಶನ ನೀಡುತ್ತಿದ್ದ ಧೀಮಂತ ನಾಯಕ. ಕಾರ್ಮಿಕರ ನಕ್ಷತ್ರ ಎಂದು ಸಿಪಿಐ ರಾಜ್ಯ ಮಂಡಳಿ ಸಹ ಕಾರ್ಯದರ್ಶಿ ಅಮ್ಜದ್ ಸ್ಮರಿಸಿದರು.
ದಾವಣಗೆರೆ ಪಟ್ಟಣದ ರೋಟರಿ ಬಾಲಭವನದಲ್ಲಿ ಭಾರತ ಕಮ್ಯೂನಿಸ್ಟ್ ಪಕ್ಷ ಮತ್ತು ಎಐಟಿಯುಸಿ ಜೊತೆಗೂಡಿ, ಹಿರಿಯ ಕಾರ್ಮಿಕ ಮುಖಂಡರು, ಸಿಪಿಐ, ಎಐಟಿಯುಸಿ ಜಿಲ್ಲಾ ಮಂಡಳಿಯ ಖಜಾಂಚಿ ದಿವಂಗತ ಆನಂದ ರಾಜ್ ಅವರ ʼನುಡಿ ನಮನʼ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
“ಹುಟ್ಟು ಸಾವು ಜೈವಿಕ ಸಹಜ ಕ್ರಿಯೆ, ಆದರೆ ನಮ್ಮ ಬದುಕಿನ ನಡುವೆ ಬಿಟ್ಟು ಹೋಗುವ ಹೆಜ್ಜೆ ಗುರುತುಗಳು ನಮ್ಮನ್ನು ಸದಾ ನೆನಪಿನಲ್ಲಿ ಇಡುತ್ತವೆ. ಯಾರೇ ಆಗಲಿ ತಪ್ಪು ಮಾಡಿದ್ದರೆ ಅತ್ಯಂತ ಶಿಸ್ತಿನ ಮೂಲಕ ಕಠೋರವಾದ ಮಾತಿನಿಂದ ಖಂಡಿಸುತ್ತಿದ್ದ ವ್ಯಕ್ತಿತ್ವ ಆನಂದ ರಾಜ್ ಅವರದ್ದು” ಎಂದು ಸ್ಮರಿಸಿದರು.
ಈ ಸುದ್ದಿ ಓದಿದ್ದೀರಾ? ವಿಜಯಪುರ | ಆರೋಗ್ಯ ಪೂರ್ಣ ಸಮಾಜಕ್ಕೆ ದೇಶದ ಸಂವಿಧಾನವೇ ಅಡಿಗಲ್ಲು; ಗಾಯಕ ಜನಾರ್ದನ
ಈ ವೇಳೆ ದಾವಣಗೆರೆ ಸಿಪಿಐ ಜಿಲ್ಲಾ ಮಂಡಳಿ ಕಾರ್ಯದರ್ಶಿ ಅವರಗೆರೆ ಚಂದ್ರು, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್ ಕುಮಾರ್, ಸಿಪಿಐ ಜಿಲ್ಲಾ ಸಹ ಕಾರ್ಯದರ್ಶಿ ಆವರಗೆರೆ ಹೆಚ್.ಜಿ.ಉಮೇಶ್, ಟಿ.ಎಸ್. ನಾಗರಾಜ್, ಎಐಟಿಯುಸಿ ಜಿಲ್ಲಾಧ್ಯಕ್ಷ ಕೆ.ರಾಘವೇಂದ್ರ ನಾಯರಿ, ಎ.ಬಿ.ಶಾರದಮ್ಮ, ಆವರಗೆರೆ ವಾಸು, ಮಹಮ್ಮದ್ ರಫೀಕ್, ವಿ.ಲಕ್ಷ್ಮಣ್, ನಿಟುವಳ್ಳಿ ಬಸವರಾಜ್, ಮಹಮ್ಮದ್ ಭಾಷಾ, ಟಿ.ಹೆಚ್.ನಾಗರಾಜ್, ಕಾರ್ತಿಕ್, ಜಿ.ಯಲ್ಲಪ್ಪ, ಹೆಚ್.ಕೆ.ಕೊಟ್ರಪ್ಪ, ಕೆ.ಜಿ.ಶಿವಮೂರ್ತಿ, ಐರಣಿ ಚಂದ್ರು, ಟಿ.ಇ.ತಿಪ್ಪೇಸ್ವಾಮಿ, ಸುರೇಶ್ ಯರಗುಂಟೆ, ಜೈನುಲ್ಲಾ ಖಾನ್, ಸರೋಜ, ಜಯಪ್ಪ, ಕೆ.ಗದಿಗೇಶ್, ಎಸ್.ಎಸ್.ಮಲ್ಲಮ್ಮ. ಸಿ.ರಮೇಶ್, ಶ್ಯಾಗಲೇ ಶರಣಪ್ಪ, ನರೇಗಾ ರಂಗನಾಥ, ಕೆ.ಬಾನಪ್ಪ ಮತ್ತು ಇತರರು ಭಾಗವಹಿಸಿದ್ದರು.