ಜೇವರ್ಗಿ ಪುರಸಭೆಯ ಪೌರಕಾರ್ಮಿಕರು ಮತ್ತು ಸ್ವಚ್ಛತಾ ಸಿಬ್ಬಂದಿಗೆ ಸರ್ಕಾರದ ಆದೇಶದಂತೆ ಹೆಚ್ಚುವರಿಯಾಗಿ ವೇತನ ಪಾವತಿ, ಎರಡು ಸಾವಿರ ಸಂಕಷ್ಟ ಭತ್ಯೆ, ಸಮವಸ್ತ್ರ ಸೇರಿದಂತೆ ರಕ್ಷಣಾ ಸಾಮಗ್ರಿಗಳನ್ನು ಒದಗಿಸಿ, ಬಾಕಿ ಉಳಿದಿರುವ ಐದು ಜನರಿಗೆ ನಿವೇಶನ ನೀಡಬೇಕು” ಎಂದು ದಲಿತ ಮುಖಂಡ ಸಿದ್ರಾಮ್ ಕಟ್ಟಿ ಆಗರಹಿಸಿದರು.
ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಪೌರಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ, ದಲಿತ ಸಂಘಟನೆಗಳ ಮುಖಂಡರು ಹಾಗೂ ಪೌರಕಾರ್ಮಿಕರು ಪ್ರತಿಭಟಿಸಿದರು. ನಂತರ ತಾಲೂಕು ದಂಡಾಧಿಕಾರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಪೌರಕಾರ್ಮಿಕರಿಗೆ ಮತ್ತು ಇತರೆ ಸಿಬ್ಬಂದಿಗೆ ಸ್ವಚ್ಛತೆ ಮತ್ತು ಆರೋಗ್ಯದ ದೃಷ್ಟಿಯಿಂದ ಸರಕಾರ ಕಾಳಜಿ ವಹಿಸಬೇಕು. ಪ್ರಮುಖ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು. ಈ ಕುರಿತಂತೆ ಪುರಸಭೆ ಮುಖ್ಯ ಅಧಿಕಾರಿಗಳು ನಿರ್ಲಕ್ಷ ವಹಿಸುತ್ತಿದ್ದಾರೆ. ನಾಲ್ಕು ತಿಂಗಳಿಂದ ಪೌರಕಾರ್ಮಿಕರಿಗೆ ಬೆಳಗಿನ ಉಪಹಾರ ನೀಡುವ ವ್ಯವಸ್ಥೆ ಮಾಡುತ್ತಿಲ್ಲ. ಅದನ್ನು ಕೂಡಲೇ ಪುನರ್ ಪ್ರಾರಂಭಿಸಬೇಕೆಂದು” ಆಗ್ರಹಿಸಿದರು.
ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ರಾಮ್ ಅವರು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಗದಗ | ಕಪ್ಪತಗುಡ್ಡದ ಜೀವ ವೈವಿಧ್ಯತೆ ಕಾಪಾಡಬೇಕಿದೆ: ಸಂಸದ…
ಈ ಪ್ರತಿಭಟನೆಯಲ್ಲಿ ಶಿವಕುಮಾರ್ ಹೆಗಡೆ, ಪರಮಾನಂದ ಯಲಗೋಡ, ಸೇರಿದಂತೆ ಪುರಸಭೆ ಪೌರಕಾರ್ಮಿಕರಾದ ಶಿವಕುಮಾರ್ ಬುಟ್ನಾಳ, ಮಲ್ಲಿಕಾರ್ಜುನ ಬಡಿಗೇರ್, ಭಗವಾನ್ ದೊಡ್ಡಮನಿ, ಬಸವರಾಜ್ ಧನಕರ್, ಮಹೇಶ್ ಬಿಲ್ಲಾರ್, ದೇವಿಂದ್ರ ಅಳಲೇಕರ್, ಮಾನಪ್ಪ ಗುಟ್ಟಾಳ್ ಮಲ್ಲಿನಾಥ್ ಹೆಗಡೆ, ಶರಣಪ್ಪ ಜಟ್ನಾಕರ್, ರಾಜಶೇಖರ ಪಡದಳ್ಳಿ,, ಲಕ್ಷ್ಮಣ ಮದನ್ನಾಕರ್, ವಿಶ್ವನಾಥ, ಕಸ್ತೂರಿಬಾಯಿ, ಮರೆವ್ವ, ಮರೆಮ್ಮ, ಶೀವಮ್ಮ, ಲೇವಿತಾ, ರೇಣುಕಾ, ಮರೆಮ್ಮ ಬಿ, ಭೀಮರಾಯ, ಷಣ್ಮುಖಪ್ಪ, ಯಲ್ಲಮ್ಮ, ಬಸವರಾಜ, ಮಹೇಶ, ಶೀವಪ್ಪ, ಕಲ್ಲಪ್ಪ, ಸಾಗರ, ರಾಜು, ಗುರಪ್ಪ, ಸಂಜೀವಕುಮಾರ, ಬಸವರಾಜ, ಮಲ್ಲಪ್ಪ, ಲಕ್ಷ್ಮೀಬಾಯಿ, ಸಂತೋಷ, ಸಾಯಿಕುಮಾರ ಇತರರು ಭಾಗವಹಿಸಿದ್ದರು..