ಸಾಲ ತೀರಿಸುವಂತೆ ಬ್ಯಾಂಕ್ ಕಳುಹಿಸಿದ ನೋಟಿಸ್‌ಗೆ ಹೆದರಿ ರೈತರೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಜುಂಜವಾಡ ಗ್ರಾಮದಲ್ಲಿ ನಡೆದಿದೆ.
ಜುಂಜವಾಡ ಗ್ರಾಮದ ಬಾಳು ನಿಂಗಪ್ಪ ಗೊಶೆನಟ್ಟಿ (51) ಮೃತ ರೈತ. ಬಾಳು ಅವರಿಗೆ 28 ಗುಂಟೆ ಜಮೀನು ಹೊಂದಿದ್ದು, ಕೃಷಿ ಚಟುವಟಿಗಳಿಗಾಗಿ ಚೈತನ್ಯ ಮೈಕ್ರೋ ಪೈನಾನ್ಸ್, ನವಚೈತನ್ಯ ಫೈನಾನ್ಸ್, ಗ್ರಾಮ ಶಕ್ತಿ, ಫೈನಾನ್ಸ್ ,ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಸೇರಿದಂತೆ ವಿವಿಧ ಖಾಸಗಿ ಬ್ಯಾಂಕಿನಲ್ಲಿ ಸುಮಾರು ಆರು ಲಕ್ಷ ಐವತ್ತು ಸಾವಿರ ಸಾಲ ಪಡೆದಿದ್ದರು ಎನ್ನಲಾಗಿದೆ.
ಸಾಲ ಮರುಪಾವತಿ ಮಾಡುವಂತೆ ಬ್ಯಾಂಕ್ ಅಧಿಕಾರಿಗಳು ವಸೂಲಾತಿ ನೋಟಿಸ್ ನೀಡಿದ್ದರು. ಸಾಲ ಮರುಪಾವತಿ ದಾರಿ ಕಾಣದೆ ಮನನೊಂದು ರೈತ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.