ಇಬ್ಬರು ಅಮೆರಿಕ ಹಾಗೂ ಒಬ್ಬರು ಇಂಗ್ಲೆಂಡ್ ವಿಜ್ಞಾನಿಗೆ 2024ನೇ ಸಾಲಿನ ರಾಸಾಯನ ಶಾಸ್ತ್ರ ನೊಬೆಲ್ ಪ್ರಶಸ್ತಿಯನ್ನು ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿ ಪ್ರಕಟಿಸಿದೆ.
‘ಕಂಪ್ಯೂಟನೇಷನಲ್ ಪ್ರೊಟಿನ್ ಡಿಸೈನ್’ ನಲ್ಲಿನ ಆನಿಷ್ಕಾರಕ್ಕೆ ಅಮೆರಿಕದ ಡೇವಿಡ್ ಬೇಕರ್ ಹಾಗೂ ಇಂಗ್ಲೆಂಡ್‌ನ ಡೆಮಿಸ್ ಹಸ್ಸ್‌ಬಿಸ್ ಅವರಿಗೆ ಜಂಟಿಯಾಗಿ ಹಾಗೂ ‘ ಪ್ರೊಟೈನ್ ಸ್ಟ್ರಚರ್ ಪ್ರಿಡಿಕ್ಷನ್’ ನಲ್ಲಿನ ಸಂಶೋಧನೆಗಾಗಿ ಅಮೆರಿದ ಜಾನ್ ಎಂ ಜಂಪರ್ ಎಂಬುವವರಿಗೆ ಪ್ರಶಸ್ತಿ ನೀಡಲಾಗಿದೆ ಎಂದು ಆಯ್ಕೆ ಸಮಿತಿ ತಿಳಿಸಿದೆ.
ಈಗಾಗಲೇ ಭೌತಶಾಸ್ತ್ರದಲ್ಲಿ ಯಾಂತ್ರಿಕ ಕಲಿಕೆ ವಿಭಾಗದಲ್ಲಿ ಮಾಡಿದ ಅಪಾರ ಸಾಧನೆಗಾಗಿ ಅಮೆರಿಕದ ಜಾನ್ ಹೋಪ್‌ಫೀಲ್ಡ್ ಹಾಗೂ ಇಂಗ್ಲೆಂಡ್‌ನ ಜಿಯೋಫೆರ್ರಿ ಹಿಂಟನ್ ಅವರಿಗೆ ನೀಡಲಾಗಿದೆ.
ಈ ಸುದ್ದಿ ಓದಿದ್ದೀರಾ? ಅಮೆರಿಕದ ಇಬ್ಬರು ವಿಜ್ಞಾನಿಗಳಿಗೆ ವೈದ್ಯಕೀಯ ನೊಬೆಲ್ ಪ್ರಶಸ್ತಿ
1901 ರಿಂದ 1901 ರಿಂದ 2023 ರ ನಡುವೆ 117 ಬಾರಿ ಭೌತಶಾಸ್ತ್ರದಲ್ಲಿ ಪ್ರಶಸ್ತಿಯನ್ನು ನೀಡಲಾಗಿದೆ. ಜಾನ್ ಬಾರ್ಡೀನ್ ಎಂಬ ವಿಜ್ಞಾನಿ ಮಾತ್ರ ಭೌತಶಾಸ್ತ್ರದಲ್ಲಿ 1956 ಮತ್ತು 1972 ರಲ್ಲಿ ಎರಡು ಬಾರಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಏಕೈಕ ವ್ಯಕ್ತಿಯಾಗಿದ್ದಾರೆ.
ಹಾಗೆಯೇ ಅಮೆರಿಕದ ವಿಜ್ಞಾನಿಗಳಾದ ವಿಕ್ಟರ್ ಆಂಬ್ರೋಸ್ ಮತ್ತು ಗ್ಯಾರಿ ರುವ್ಕುನ್ ಅವರಿಗೆ 2024ರ ಸಾಲಿನ ಶರೀರಶಾಸ್ತ್ರ ಅಥವಾ ವೈದ್ಯಶಾಸ್ತ್ರಕ್ಕೆ ನೀಡುವ ನೊಬೆಲ್ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.ಅಕ್ಟೋಬರ್ 7 ರಿಂದ 14 ರವರೆಗೆ ವಿವಿಧ ಕ್ಷೇತ್ರಗಳ ಸಾಧನೆಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತದೆ.
ಡಿಸೆಂಬರ್ 10 ರಂದು ಸ್ವಿಡನ್‌ನ ಸ್ಟಾಕ್‌ಹೋಮ್‌ನಲ್ಲಿ ನೊಬೆಲ್ ಪ್ರಶಸ್ತಿಯನ್ನು ವಿಜೇತರಿಗೆ ವಿತರಿಸಲಾಗುವುದು.
