ತುಮಕೂರು | ರಾಜಕೀಯ ಪಕ್ಷದ ಗುಲಾಮಗಿರಿ ಬಿಟ್ಟು ಒಳಮೀಸಲಾತಿ ಜಾರಿಗೆ ಹೋರಾಡಿ: ವೈ.ಎಚ್.ಹುಚ್ಚಯ್ಯ

Date:

Advertisements

ರಾಜಕೀಯ ಪಕ್ಷಗಳ ಆದೇಶ ಪಾಲಿಸುತ್ತಾ ಪಕ್ಷದ ಗುಲಾಮಗಿರಿ ಮಾಡುತ್ತಿರುವ ಮಾದಿಗ ಸಮುದಾಯದ ಮುಖಂಡರು ಒಳ ಮೀಸಲಾತಿಗಾಗಿ ಒಂದಾಗಬೇಕಿದೆ ಎಂದು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ ಕರೆ ನೀಡಿದರು.

ತುಮಕೂರು ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ನಡೆದ ಒಳ ಮೀಸಲಾತಿ ಚಿಂತನಾ-ಮಂಥನ ಹಾಗೂ ಒಳ ಮೀಸಲಾತಿ ಜಾರಿ ಹೋರಾಟದ ಸಭೆಯಲ್ಲಿ ಮಾತನಾಡಿದ ಅವರು, ಸಮಾಜದ ಹಿತಕ್ಕಾಗಿ ರಾಜಕೀಯವನ್ನು ಬದಿಗಿಡಬೇಕು, ಯಾವ ರಾಜಕೀಯ ಪಕ್ಷಗಳು ಸಹ ಒಳ ಮೀಸಲಾತಿ ಜಾರಿ ಆಶ್ವಾಸನೆ ನೀಡುವುದನ್ನು ಬಿಟ್ಟರೆ ಸಮುದಾಯದ ಹಿತಕ್ಕೆ ಬದ್ಧರಾಗಿಲ್ಲ ಎಂದರು.

ಒಳ ಮೀಸಲಾತಿ ಜಾರಿಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಾದ ಅವಶ್ಯಕತೆ ಇದೆ, ಸರ್ಕಾರ ನೀಡಿರುವ ಆಶ್ವಾಸನೆಯಂತೆ ಒಳ ಮೀಸಲಾತಿ ಜಾರಿಗೆ ತರಲು ಸರ್ಕಾರದ ಮೇಲೆ ಒತ್ತಡ ಹಾಕುವ ನಿಟ್ಟಿನಲ್ಲಿ ಮಾದಿಗ ಸಮುದಾಯ ಒಂದಾಗಿ ನಿಲ್ಲಬೇಕಿದೆ ಎಂದರು.

Advertisements

ಜಿಪಂ ಮಾಜಿ ಸದಸ್ಯ ಕೆಂಚಮಾರಯ್ಯ ಮಾತನಾಡಿ ಒಳ ಮೀಸಲಾತಿ ಜಾರಿಗೆ ಸರ್ಕಾರ ಬದ್ಧವಾಗಬೇಕಿದೆ, ಪ್ರಣಾಳಿಕೆಯಲ್ಲಿ ಭರವಸೆ ನೀಡಿದ ಮೇಲೆ ಅದನ್ನು ಜಾರಿ ಮಾಡಲೇಬೇಕು, ಮಾದಿಗರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಲು ಬದ್ಧತೆ ತೋರಬೇಕು ಎಂದರು.

ಒಳ ಮೀಸಲಾತಿ ಜಾರಿ ಆಗಲು ಹೋರಾಟ ನಡೆಸಬೇಕಿದೆ, ಇದರಲ್ಲಿ ಯಾವುದೇ ಪಕ್ಷ, ವ್ಯಕ್ತಿ ಮುಖ್ಯವಲ್ಲ, ಸಿದ್ಧರಾಮಯ್ಯ ಆಗಿರಲಿ ಇನ್ಯಾರೇ ಆಗಿರಲಿ ಒಳ ಮೀಸಲಾತಿ ಜಾರಿಗೆ ಬದ್ಧವಾಗಬೇಕಿದೆ, ಮಾದಿಗ ಸಮುದಾಯದ ಹಿತ ಕಾಯುವುದಷ್ಟೇ ನಮ್ಮ ಉದ್ದೇಶ ಇದರಲ್ಲಿ ಯಾವುದೇ ಪಕ್ಷವಿಲ್ಲ ಎನ್ನುವುದನ್ನು ಸಮುದಾಯದ ಮುಖಂಡರು ಅರಿಯಬೇಕು ಎಂದರು.

ಹೋರಾಟಗಾರ ಕೊಟ್ಟಶಂಕರ್ ಮಾತನಾಡಿ ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಒಳ ಮೀಸಲಾತಿ ಜಾರಿಗೆ ತರಬೇಕು, ಒಳ ಮೀಸಲಾತಿ ಜಾರಿ ಹೋರಾಟದಲ್ಲಿ ಯಾವುದೇ ಸಂಘಟನೆ ಹೋರಾಟ ಮಾಡಿದರು ಅದಕ್ಕೆ ಸಮುದಾಯದ ಬೆಂಬಲ ನೀಡಬೇಕು ಎಂದರು.

ಪಾವಗಡ ಶ್ರೀರಾಮ್ ಮಾತನಾಡಿ ಜಿಲ್ಲೆಯಲ್ಲಿ ಇಬ್ಬರು ಪ್ರಭಾವಿ ಸಚಿವರಿದ್ದಾರೆ, ಸಚಿವರು ಒಳಮೀಸಲಾತಿಗೆ ಬದ್ಧರಾಗದೇ ಹೋದಲ್ಲಿ ಮಾದಿಗ ಸಮುದಾಯದ ಶಕ್ತಿ ತೋರಿಸಬೇಕಾಗುತ್ತದೆ, ಒಳ ಮೀಸಲಾತಿ ಹೋರಾಟದಲ್ಲಿ ಪಕ್ಷಾತೀತ ಹೋರಾಟ ಅವಶ್ಯಕತೆ ಇದೆ. ಒಳ ಮೀಸಲಾತಿ ವಿರೋಧಿಗಳಿಗೆ ತಕ್ಕ ಪಾಠ ಕಲಿಸಬೇಕಾದ ಅವಶ್ಯಕತೆ ಇದೆ ಎಂದರು.

ಒಳ ಮೀಸಲಾತಿ ಜಾರಿಗೆ ತುಮಕೂರಿನಲ್ಲಿ ಮಾದಿಗ ಸಮುದಾಯದ ಶಕ್ತಿ ತೋರಿಸಬೇಕಿದೆ, ಯಾವುದೇ ರೀತಿಯ ಹೋರಾಟಕ್ಕೂ ಸಮುದಾಯದ ಮುಖಂಡರು ಬದ್ಧರಾಗಬೇಕು, ಗ್ರಾಮ, ಹೋಬಳಿ, ತಾಲ್ಲೂಕು ಮಟ್ಟದಲ್ಲಿ ಸಮುದಾಯವನ್ನು ಸಂಘಟಿಸಬೇಕು, ಜಿಲ್ಲೆಯಲ್ಲಿ ಮಾದಿಗರ ಶಕ್ತಿಯನ್ನು ತೋರಿಸಬೇಕು ಎಂದು ಕರೆ ನೀಡಿದರು.

ಪ್ರಗತಿ ಪರ ಚಿಂತಕ ದೊರೈರಾಜ್ ಮಾತನಾಡಿ, ಮಾದಿಗ ಸಮುದಾಯದ ಅಭಿವೃದ್ಧಿಗೆ ಒಳಮೀಸಲಾತಿ ಜಾರಿ ಅವಶ್ಯಕವಾಗಿದ್ದು, ಕಳೆದ 30 ವರ್ಷಗಳಿಂದಲೂ ಮಾದಿಗ ಸಮುದಾಯ ಹೋರಾಟದಲ್ಲಿ ತೊಡಗಿಸಿಕೊಂಡರು ಸಹ ಸರ್ಕಾರಗಳು ನಮ್ಮ ಬೇಡಿಕೆಗೆ ಗಮನ ಹರಿಸುತ್ತಿಲ್ಲ, ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮಾದಿಗ ಸಮುದಾಯದ ಏಕೀಕೃತ ಹೋರಾಟ ನಡೆಸುವುದು ಅವಶ್ಯಕವಾಗಿದೆ ಎಂದರು.

ಅ.18 ರಂದು ನಡೆಯಲಿರುವ ಕ್ಯಾಬಿನೆಟ್ ಸಭೆಯಲ್ಲಿ ಒಳಮೀಸಲಾತಿ ಜಾರಿಗೆ ಸರ್ಕಾರ ನಿರ್ಧಾರ ಕೈಗೊಳ್ಳದೇ ಹೋದರೆ, ರಾಜ್ಯಾದ್ಯಂತ ಒಳಮೀಸಲಾತಿಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕಿದೆ, ಒಳ ಮೀಸಲಾತಿ ನಮ್ಮ ಹಕ್ಕು ಎನ್ನುವುದನ್ನು ಸರ್ಕಾರಕ್ಕೆ ಮನವರಿಕೆ ಮಾಡಬೇಕಿದ್ದು, ಈ ನಿಟ್ಟಿನಲ್ಲಿ ಮಾದಿಗ ಸಮುದಾಯ ಸಂಘಟನಾತ್ಮಕ ಹೋರಾಟಕ್ಕೆ ಸಿದ್ಧವಾಗಬೇಕಿದೆ ಎಂದರು.

ಸಭೆಯಲ್ಲಿ ವಕೀಲ ರಂಗಧಾಮಯ್ಯ, ನರಸಿಂಹಯ್ಯ, ಕುಣಿಗಲ್ ಪುರಸಭೆ ಸದಸ್ಯ ಶ್ರೀನಿವಾಸ್, ರಂಗನಾಥ್, ಲಕ್ಷ್ಮೀದೇವಮ್ಮ, ಪಿ.ಎನ್.ರಾಮಯ್ಯ, ಮರಳೂರು ಕೃಷ್ಣಮೂರ್ತಿ, ಹೆತ್ತೇನಹಳ್ಳಿ ಮಂಜುನಾಥ್, ಜಯಮೂರ್ತಿ, ಹೊಸಕೋಟೆ ನಾಗರಾಜು, ಆಟೋಶಿವರಾಜು, ರಮೇಶ್, ಗೋಪಿ ಮೊಸರುಕುಂಟೆ, ಸಾಗರ್, ಗಂಗಾಧರ್, ಮುಕುಂದ, ಟಿ.ಸಿ.ರಾಮಯ್ಯ, ಕೇಬಲ್ ರಘು, ಯೋಗೀಶ್ ಸೋರೆಕುಂಟೆ, ನಿಟ್ಟೂರು ರಂಗಸ್ವಾಮಿ, ರಂಜನ್, ಶ್ರೀನಿವಾಸ್, ನಾಗರಾಜು ಗೂಳಹರಿವೆ ಸೇರಿದಂತೆ ಇತರರಿದ್ದರು.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X