ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ ಯತಿ ನರಸಿಂಹಾನಂದ ಸರಸ್ವತಿ ಸ್ವಾಮೀಜಿಗಳ ವಿರುದ್ಧ ಹಾಗೂ ಪ್ರಚೋದನಕಾರಿ ಹೇಳಿಕೆ ನೀಡಿದ ಗಾಜಿಯಾಬಾದ್ ದೇವಸ್ಥಾನದ ದಾಸ್ನಾ ಅವರನ್ನು ಕೂಡಲೇ ಬಂಧಿಸಬೇಕೆಂದು ಆಗ್ರಹಿಸಿ ಸೇಡಂ ಪಟ್ಟಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಹಜರತ್ ಟಿಪ್ಪು ಸುಲ್ತಾನ್ ಯುವ ಚಾರಿಟೇಬಲ್, ವೆಲ್ಪರ್ ಟ್ರಸ್ಟ್ ಸಹಯೋಗದಲ್ಲಿ ಸೇಡಂ ಪಟ್ಟಣದ ಮುಖ್ಯ ರಸ್ತೆಯಿಂದ ಪ್ರಾರಂಭಗೊಂಡು ಕಿರಣಾ ಬಜಾರ್ ಮಾರ್ಗವಾಗಿ ತಹಸೀಲ್ದಾರ್ ಕಛೇರಿವರೆಗೆ ಪ್ರತಿಭಟನೆ ನಡೆಸಿದರು. ರಾಷ್ಟ್ರಪತಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಉಪ ವಿಭಾಗಾಧಿಕಾರಿ ಅವರಿಗೆ ಸಲ್ಲಿಸಿದರು.
ಸ್ವಾಮಿ ನರಸಿಂಹಾನಂದ ಸರಸ್ವತಿ ಅವರು ಪ್ರವಾದಿ ಮೊಹಮ್ಮದ್ ಪೈಗಂಬರ್ ಅವರನ್ನು ಅವಮಾನಿಸಿದ್ದಾರೆ. ಇದರಿಂದ ಮುಸ್ಲಿಂ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ. ಶಾಂತಿಪ್ರಿಯ ಭಾರತ ದೇಶದಲ್ಲಿ ಇಂತಹ ದ್ವೇಷ ಹುಟ್ಟಿಸುವ ಹೇಳಿಕೆ ನೀಡುವುದು ಖಂಡನೀಯವಾಗಿದೆʼ ಎಂದು ಆರೋಪಿಸಿದರು.
“ದೇಶದ ಸೌಹಾರ್ದತೆಗೆ ಧಕ್ಕೆ ತಂದು ದ್ವೇಷ ಹೇಳಿಕೆ ನೀಡಿದ ಯತಿ ಸ್ವಾಮಿ ನರಸಿಂಹನಂದ ಸರಸ್ವತಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕುʼ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಖ್ಯಾತ ಉದ್ಯಮಿ ರತನ್ ಟಾಟಾ ನಿಧನ: ಗಣ್ಯರು, ಅಭಿಮಾನಿಗಳಿಂದ ಕಂಬನಿ
ಪ್ರತಿಭಟನೆಯಲ್ಲಿ ಶಾಹಿದ್ ಹಜರತ್ ಟಿಪ್ಪು ಸುಲ್ತಾನ್ ಯುವ ಚಾರಿಟೇಬಲ್ ಟ್ರಸ್ಟ್ ವೆಲ್ಫರ್ ಟ್ರಸ್ಟ್ ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಕಾರ್ಯಕರ್ತರು ಸೇರಿದಂತೆ ಮುಸ್ಲಿಂ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.ವರದಿ: ಸುನೀಲ್ ರಾಣಿವಾಲ್