ಮಧ್ಯಮ ವರ್ಗದವರ ಕನಸು ನನಸು – ಮುಚ್ಚುವಂತಹ ಸ್ಥಿತಿಯಲ್ಲಿದ್ದ ಸಂಸ್ಥೆ ಲಾಭದೆಡೆಗೆ; ರತನ್‌ ಟಾಟಾ ವಿಶಿಷ್ಟ ಸಾಧನೆಗಳು

Date:

Advertisements

ರತನ್‌ ಟಾಟಾ ಅವರ ಮಧ್ಯಮ ವರ್ಗದ ಭಾರತೀಯರ ಕನಸನ್ನು ನನಸು ಮಾಡಿದ್ದು, ಮಾತ್ರವಲ್ಲ, ಮುಚ್ಚುವಂತಹ ಸ್ಥಿತಿಯಲ್ಲಿದ್ದ ಸಂಸ್ಥೆಯನ್ನು ಲಾಭದೆಡೆಗೆ ಕೊಂಡೊಯ್ದಿದ್ದರು.

ಟಾಟಾ ಅವರ ಕನಸಿನ ಫಲವಾಗಿ 2009ರ ಮಾರ್ಚ್ 23ರಂದು ಮೊದಲ ಟಾಟಾ ನ್ಯಾನೋ ಕಾರು ಮಾರುಕಟ್ಟೆಗೆ ಪ್ರವೇಶಿಸಿತು. ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಕಾರು ತಯಾರಿಸುವ ಕನಸು ಕಂಡವರು ಉದ್ಯಮಿ ರತನ್ ಟಾಟಾ. ಅದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ 2003ರಲ್ಲಿ ಅವರಿಟ್ಟ ಮೊದಲ ಹೆಜ್ಜೆ ಹೆಸರೇ ‘ಟಾಟಾ ನ್ಯಾನೋ. ತನ್ನ ನಾವೀನ್ಯತೆ ಹಾಗೂ ಕೈಗೆಟುಕುವ ದರದಿಂದಲೇ ಅದು ಜನ ಮನ ಗೆಲ್ಲುವಲ್ಲಿ ಯಶಸ್ವಿಯಾಯಿತು.

ಮೊದಮೊದಲು ನ್ಯಾನೋಗೆ ನಿರೀಕ್ಷಿಸಿದಷ್ಟು ಸಫಲತೆ ದೊರಕಲಿಲ್ಲ. ಕಾರುಗಳನ್ನು ಅಗತ್ಯತೆ ಎಂದು ಪರಿಗಣಿಸಿದ್ದ ಟಾಟಾ ಅದನ್ನು ಅನ್ಯ ಕಾರುಗಳಂತೆ ಐಷಾರಾಮಿಯಾಗಿ ನಿರ್ಮಿಸಲಿಲ್ಲ. ನ್ಯಾನೋವನ್ನು ಕಡಿಮೆ ಬೆಲೆಯ ಕಾರೆಂದು ಬಿಂಬಿಸುವ ಮೂಲಕ ಅದರ ಖರೀದಿಯನ್ನು ಉತ್ತೇಜಿಸುವುದು ಟಾಟಾದ ತಂತ್ರವಾಗಿತ್ತಾದರೂ, ಜನ ಅಗ್ಗದ ವಸ್ತುವೆಂಬ, ಹಣೆಪಟ್ಟಿ ಹೊತ್ತ ಕಾರನ್ನು ಖರೀದಿಸಲು ಬಯಸಲಿಲ್ಲ.

Advertisements

ಇವೆಲ್ಲ ಕಾರಣಗಳಿಂದ ನ್ಯಾನೋ ಕಾರುಗಳ ಮಾರಾಟ ಕುಸಿತ ಕಂಡಿತು. ಆದರೂ 2018ರ ವೇಳೆಗೆ 2.75 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ಮೂಲಕ ಟಾಟಾ ನ್ಯಾನೋ ಸಂಘರ್ಷದ ಹಾದಿಯ ಮೂಲಕ ಸಫಲತೆಯನ್ನು ತಲುಪಿತು. ವರ್ಷಗಳು ಕಳೆದಂತೆ ನ್ಯಾನೋ ಕಾರುಗಳ ಮಾರಾಟ ಕುಂಠಿತವಾದ ಕಾರಣ 2020ರಲ್ಲಿ ಅದರ ಉತ್ಪಾದನೆಯನ್ನೇ ಸ್ಥಗಿತಗೊಳಿಸಲಾಯಿತು.

ಮುಚ್ಚುವಂತಹ ಸ್ಥಿತಿಯಲ್ಲಿದ್ದ ಸಂಸ್ಥೆ ಲಾಭದ ಕಡೆ

ರತನ್ ಟಾಟಾ, ತಮ್ಮ ಸಂಸ್ಥೆಯನ್ನು 100 ಬಿಲಿಯನ್ ಡಾಲರ್ ಮೌಲ್ಯದ ಜಾಗತಿಕ ದರ್ಜೆಯ ಸಾಮ್ರಾಜ್ಯವನ್ನಾಗಿ ವಿಸ್ತರಿಸಿದ್ದರು. ತಮ್ಮದೇ ಸಂಸ್ಥೆಯ ಜ್ಯೂವೆಲ್ಲರಿ ಘಟಕವಾದ ತನಿಷ್ಕ್ ಬ್ರ್ಯಾಂಡ್ ಅನ್ನು, ಟಾಟಾ ಮೇಲೆತ್ತಿದ ಪರಿ ನಿಜಕ್ಕೂ ಅಚ್ಚರಿ.

ಈ ಸುದ್ದಿ ಓದಿದ್ದೀರಾ? 4 ಸಾವಿರ ಕೋಟಿ ರೂ. ಉದ್ಯಮವನ್ನು 8 ಲಕ್ಷ ಕೋಟಿ ರೂ.ಗಳಿಗೆ ವಿಸ್ತರಿಸಿದ್ದ ರತನ್‌ ಟಾಟಾ

1994ರಲ್ಲಿ ತನಿಷ್ಕ್ ಅನ್ನು ಟಾಟಾ ಸಮೂಹದ ಟೈಟನ್ ಸಂಸ್ಥೆ ಮಾರುಕಟ್ಟೆಗೆ ಪರಿಚಯಿಸಿತು. ಆರಂಭಿಕ ಹಂತದಲ್ಲಿ ಸೂಕ್ತವಾದ ಯೋಜನೆಯಿಲ್ಲದೇ ತನಿಷ್ಕ್ ಅನ್ನು ಮುಚ್ಚುವಂತಹ ಸ್ಥಿತಿಗೆ ಬಂದಿತ್ತು. ರತನ್ ಟಾಟಾ ಅವರ ಆಪ್ತರು ಇದನ್ನು ಮುಚ್ಚುವ ಸಲಹೆಯನ್ನು ನೀಡಿದ್ದರು. ಟೈಟನ್ ವಾಚ್ ಸಂಸ್ಥೆ ಉತ್ತಮ ಮಾರುಕಟ್ಟೆಯನ್ನು ಪಡೆಯಲಾರಂಭಿಸಿದ ನಂತರ, ಅತಿಯಾದ ಆತ್ಮವಿಶ್ವಾಶದಿಂದ ತನಿಷ್ಕ್ ಕೂಡಾ ಅದೇ ರೀತಿಯಲ್ಲಿ ಸಾಗಬಹುದು ಎನ್ನುವ ಸಂಸ್ಥೆಯ ಲೆಕ್ಕಾಚಾರ ಆರಂಭಿಕ ಹಂತದಲ್ಲಿ ಹಿನ್ನಡೆಯನ್ನು ಅನುಭವಿಸಿತು.

ಜ್ಯೂವೆಲ್ಲರಿ ಮಾರುಕಟ್ಟೆಯಲ್ಲಿ ಆಗಲೇ ಹಲವು ಸಂಸ್ಥೆಯ ಬ್ಯ್ರಾಂಡುಗಳು ಮಾರುಕಟ್ಟೆಯನ್ನು ಆವರಿಸಿಕೊಂಡಿದ್ದವು. ಗ್ರಾಹಕರನ್ನು ತನ್ನತ್ತ ಸೆಳೆಯಲು ಹೊಸದಾಗಿ, ಯೋಜನೆ ಆರಂಭಿಸಿದ ರತನ್ ಟಾಟಾ, 22 ಕ್ಯಾರೆಟ್ ಚಿನ್ನದ ಬದಲು 18 ಕ್ಯಾರೆಟ್ ಚಿನ್ನದ ಬ್ರ್ಯಾಂಡ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದರು. ಆದರೆ, ಇದು ಗ್ರಾಹಕರಿಗೆ ಇಷ್ಟವಾಗಲಿಲ್ಲ.

ಹಲವು ವರ್ಷಗಳವರೆಗೆ ನಷ್ಟದಲ್ಲೇ ಸಾಗುತ್ತಿದ್ದ ತನಿಷ್ಕ್ ಬ್ರ್ಯಾಂಡ್‌ಅನ್ನು ಮೇಲೆತ್ತಲು, ’ಖಾರಾಮೀಟರ್’ ಎನ್ನುವ ಚಿನ್ನದ ಗುಣಮಟ್ಟವನ್ನು ಪತ್ತೆಮಾಡುವ ಮೀಟರ್ ಅನ್ನು ತಮ್ಮ ಎಲ್ಲ ಮಳಿಗೆಗಳಲ್ಲಿ ಪರಿಚಯಿಸಿದರು. ಇದು ಮಹಿಳಾ ಗ್ರಾಹಕರನ್ನು ಆಕರ್ಷಿಸಿತು. ಮಹಿಳೆಯರು ತಮ್ಮಲ್ಲಿರುವ ಚಿನ್ನದ ಗುಣಮಟ್ಟವನ್ನು ಪರಿಶೀಲಿಸಲು ತನಿಷ್ಕ್ ಮಳಿಗೆಗೆ ಬರಲಾರಂಭಿಸಿದರು.

ಗುಣಮಟ್ಟವಿಲ್ಲದ ಚಿನ್ನವನ್ನು ಗ್ರಾಹಕರಿಂದ ವಾಪಸ್ ಪಡೆದು ತನಿಷ್ಕ್ ಬದಲಾಯಿಸಲು ಆರಂಭಿಸಿತು. ಇದಕ್ಕೆ ಕೇವಲ ಮೇಕಿಂಗ್ ಚಾರ್ಜಸ್ ಅನ್ನು ಮಾತ್ರ ಪಡೆದುಕೊಂಡಿತು. ಇದು, ತನಿಷ್ಕ್ ಸಂಸ್ಥೆಯ ಮಾರುಕಟ್ಟೆ ಮತ್ತು ವಿಶ್ವಾಸಾರ್ಹತೆ ಎರಡನ್ನೂ ಬದಲಾಯಿಸಿತು.

ಮದುವೆ ಸಮಾರಂಭಗಳನ್ನು ಗಮನದಲ್ಲಿಟ್ಟುಕೊಂಡು 2017ರಲ್ಲಿ ತನಿಷ್ಕ್, ರಿವಾ, ರಿವಾಜ್ ಮತ್ತು ವಿವಾ ಎನ್ನುವ ಪ್ರೊಡಕ್ಟ್ ಅನ್ನು ರತನ್‌ ಟಾಟಾ ಯೋಜನೆಯ ಫಲವಾಗಿ ಪರಿಚಯಿಸಲಾಯಿತು. ವಿಶೇಷ ರಿಯಾಯತಿಯನ್ನು ಮದುವೆ ಸಂದರ್ಭಗಳಲ್ಲಿ ಕೊಡಲಾರಂಭಿಸಿತು. ಇದು ಸಹ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿ ಟಾಟಾ ಸಂಸ್ಥೆಗೆ ಹೊರೆಯಾಗಿದ್ದ ತನಿಷ್ಕ್ ಪ್ರೊಡಕ್ಟ್ ಅನ್ನು ಲಾಭದೆಡೆಗೆ ತಂದಿತು.

ಬೆಂಗಳೂರು ಏರ್‌ ಶೋನೊಂದಿಗೆ ಅವಿನಾಭಾವ ಸಂಬಂಧ

ಉದ್ಯಮಿ ರತನ್‌ ಟಾಟಾ ಅವರು ಬೆಂಗಳೂರಿನಲ್ಲಿ ನಡೆಯುವ ಏರ್‌ ಶೋನೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಉದ್ಯಾನ ನಗರಿಯಲ್ಲಿ ವಿಮಾನಗಳ ಪ್ರದರ್ಶನ ನಡೆಯುವ ಸಂದರ್ಭದಲ್ಲಿ ಆಗಾಗ ಯುದ್ಧ ವಿಮಾನಗಳಲ್ಲಿ ಸವಾರಿ ಮಾಡಿದ್ದಾರೆ. 2007ರಲ್ಲಿ ಬೋಯಿಂಗ್‌ ಎಫ್‌-18 ಸೂಪರ್‌ ಹಾರ್ನೆಟ್‌ ಯುದ್ಧ ವಿಮಾನ, 2011ರಲ್ಲಿ ತಮ್ಮ 73ನೇ ವಯಸ್ಸಿನಲ್ಲಿ ಎಫ್‌/ಎ-18 ಸೂಪರ್ ಹಾರ್ನೆಟ್‌ ಯುದ್ಧ ವಿಮಾನವನ್ನು ಪೈಲಟ್‌ಗಳ ಸಹಕಾರದೊಂದಿಗೆ ಚಲಾಯಿಸಿದ್ದರು. ರತನ್ ಟಾಟಾ ಅತ್ಯಂತ ದುಬಾರಿ ಖಾಸಗಿ ಜೆಟ್ ಮಾಡೆಲ್‌ಗಳಾದ ಡಸಾಲ್ಟ್ ಫಾಲ್ಕನ್ 2000 ಅನ್ನು ಹೊಂದಿದ್ದರು. ಇದು 200 ಕೋಟಿ ರೂಪಾಯಿಗಳಷ್ಟು ಬೆಲೆ ಬಳುತ್ತದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನಟಿಗೆ ಕಿರುಕುಳ ಆರೋಪ: ಕೇರಳ ಯುವ ಕಾಂಗ್ರೆಸ್ ಅಧ್ಯಕ್ಷನ ಹುದ್ದೆ ತೊರೆದ ರಾಹುಲ್ ಮಾಂಕೂಟತ್ತಿಲ್

ಕೇರಳದ ರಾಜಕೀಯದಲ್ಲಿ ದೊಡ್ಡ ಸಂಚಲನ ಸೃಷ್ಟಿಸಿರುವ ಅಶ್ಲೀಲ ಸಂದೇಶ ಹಾಗೂ ದುರ್ವರ್ತನೆ...

ನ್ಯಾಯದೇಗುಲಗಳಿಗೆ ಬಲು ಇಕ್ಕಟ್ಟಾದ ಬಾಗಿಲುಗಳ ಕಟ್ಟಿದ್ದೇವೆ- ಸಿಜೆಐ

‘ಹೈಕೋರ್ಟ್ ಜಡ್ಜ್ ಗಳ ಪೈಕಿ ಮೊಂಡರು, ಹಟಮಾರಿಗಳು, ಜಂಭದ ಕೋಳಿಗಳಿದ್ದಾರೆ...ಇನ್ನು ಕೆಲವರ...

ಉಪ ರಾಷ್ಟ್ರಪತಿ ಚುನಾವಣೆ: ಇಂಡಿಯಾ ಒಕ್ಕೂಟದ ಅಭ್ಯರ್ಥಿ ಸುದರ್ಶನ್ ರೆಡ್ಡಿ ನಾಮಪತ್ರ ಸಲ್ಲಿಕೆ

ಭಾರತದ ಉಪ ರಾಷ್ಟ್ರಪತಿ ಚುನಾವಣೆಗೆ ‘ಇಂಡಿಯಾ’ ಮೈತ್ರಿಕೂಟದ ಅಭ್ಯರ್ಥಿಯಾಗಿ ಸುಪ್ರೀಂ ಕೋರ್ಟ್‌ನ...

ಆನ್‌ಲೈನ್‌ ಜೂಜಾಟ ತಡೆಗೆ ಕಠಿಣ ಕಾನೂನು; ಸಂಸತ್ತಿನಲ್ಲಿ ಆನ್‌ಲೈನ್ ಗೇಮಿಂಗ್‌ ಪ್ರಚಾರ ಮತ್ತು ನಿಯಂತ್ರಣ ಮಸೂದೆ, 2025 ಮಂಡನೆ

ಭಾರತದ ಡಿಜಿಟಲ್ ಮನರಂಜನಾ ಕ್ಷೇತ್ರದಲ್ಲಿ ಭಾರೀ ಬದಲಾವಣೆಯನ್ನು ತರಲು ಸಿದ್ಧವಾಗಿರುವ ಆನ್‌ಲೈನ್...

Download Eedina App Android / iOS

X