ಶಿವಮೊಗ್ಗ ಭದ್ರಾವತಿ ನಗರ ಅಭಿವೃದ್ಧಿ ಪ್ರಾಧಿಕಾರದಿಂದ ಕೊಡಮಾಡುತ್ತಿರುವ ಖಾಲಿ ನಿವೇಶನ ಹಂಚಿಕೆ ಪಾರದರ್ಶಕತೆಯಿಂದ ಇರಬೇಕು ಎಂದು ಎಸ್‌ಡಿಪಿಐ ಆಗ್ರಹಿಸಿದೆ.
ಶಿವಮೊಗ್ಗ ನಗರದಲ್ಲಿ ಪತ್ರಿಕೆ ಹೇಳಿಕೆ ನೀಡಿರುವ ಅವರು, “ಈಗಾಗಲೇ 437 ನಿವೇಶನ(ಸೈಟ್)ಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ನಿವೇಶನ ಹಂಚಿಕೆಯಲ್ಲಿ ರಾಜಕೀಯ ಬೆರಸದೆ ಸೂರಿಲ್ಲದವರಿಗೆ ನಿವೇಶನ ಹಂಚಿಕೆ ಮಾಡಬೇಕು. ಅರ್ಜಿದಾರರಿಗೆ, ಈ ನಿವೇಶನ ಹಂಚಿಕೆಯಲ್ಲಿ ಪ್ರಭಾವಿಗಳ ಮಾರ್ಗದರ್ಶನದಂತೆ ಸೈಟ್ ಹಂಚಿಕಯಾಗಲಿದೆಯೆಂಬ ಭಯವಿದೆ. ಇದು ಮುಂದಿನ ಭ್ರಷ್ಟಾಚಾರಕ್ಕೂ ಕಾರಣವಾಗಬಾರದು. ಹಾಗಾಗಿ ನಿವೇಶನ ಹಂಚಿಕೆಯಲ್ಲಿ ಪಾರದರ್ಶಕತೆ ಇರಲಿ” ಎಂದು ಮನವಿ ಮಾಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ರಾಮನಗರ | ಜನಪ್ರತಿನಿಧಿಗಳ ಇಚ್ಚಾಶಕ್ತಿಯ ಕೊರತೆಯಿಂದ ಅಭಿವೃದ್ಧಿ ಕುಂಠಿತ: ಯೋಗೇಶ್‌ಗೌಡ
“ಮನೆ ಹಾಗೂ ನಿವೇಶನದ ಅವಶ್ಯಕತೆ ಇರುವವರಿಗೆ ನಿವೇಶನ ಹಂಚಿಕೆಯಾಗಲಿ” ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಪಕ್ಷದ ಶಿವಮೊಗ್ಗ ಜಿಲ್ಲಾಧ್ಯಕ್ಷ ಇಮ್ರಾನ್ ಆಗ್ರಹಿಸಿದ್ದಾರೆ.