2024ನೇ ಸಾಲಿನ ಸಾಹಿತ್ಯ ಕ್ಷೇತ್ರದ ನೊಬೆಲ್ ಪ್ರಶಸ್ತಿಯು ದಕ್ಷಿಣ ಕೊರಿಯಾದ ಲೇಖಕಿ ಹಾನ್ ಕಾಂಗ್ ಅವರಿಗೆ ಸಂದಿದೆ. ‘ಐತಿಹಾಸಿಕ ಆಘಾತಗಳು ಮತ್ತು ಮಾನವ ಜೀವನದ ದುರ್ಬಲತೆಯನ್ನು ಬಹಿರಂಗಪಡಿಸುವ ಅವರ ಕಾವ್ಯಾತ್ಮಕ ಗದ್ಯಕ್ಕೆ’ ಈ ಪ್ರಶಸ್ತಿ ನೀಡಲಾಗಿದೆ ಎಂದು ವರದಿಯಾಗಿದೆ.
ಹಾನ್ ಕಾಂಗ್ ತನ್ನ ವೃತ್ತಿಜೀವನವನ್ನು 1993ರಲ್ಲಿ ಪ್ರಾರಂಭಿಸಿದ್ದಾರೆ. ‘ಲಿಟರೇಚರ್ ಆಂಡ್ ಸೊಸೈಟಿ’ (Literature and Society) ಎಂಬ ನಿಯತಕಾಲಿಕದಲ್ಲಿ ಅವರ ಹಲವು ಕವಿತೆಗಳು ಮೊದಲ ಬಾರಿಗೆ ಪ್ರಕಟವಾಗಿದ್ದವು. ಅದಾದ ಬಳಿಕ ಅವರ ಮೊದಲ ಗದ್ಯ ‘ಲವ್ ಆಫ್ ಯೆಸು’ ಎಂಬ ಸಣ್ಣ ಕಥಾ ಸಂಗ್ರಹವು 1995ರಲ್ಲಿ ಬಿಡುಗಡೆಯಾಗಿದೆ.
ಅದಾದ ಬಳಿಕ ಅವರು ಹಲವು ಇತರ ಗದ್ಯ ಕೃತಿಗಳು, ಕಾದಂಬರಿಗಳು ಮತ್ತು ಸಣ್ಣ ಕಥೆಗಳನ್ನು ರಚಿಸಿದ್ದಾರೆ. ಕಾಂಗ್ ಅವರ ಪ್ರಮುಖ ಕಾದಂಬರಿಗಳಲ್ಲಿ ಒಂದು 2007ರಲ್ಲಿ, ದಿ ವೆಜಿಟೇರಿಯನ್ ಎಂಬ ಮತ್ತೊಂದು ಕಾದಂಬರಿ 2015ರಲ್ಲಿ ಬಿಡುಗಡೆಯಾಗಿದೆ.
ಇದನ್ನು ಓದಿದ್ದೀರಾ? ಮೂವರು ವಿಜ್ಞಾನಿಗಳಿಗೆ ರಾಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟ
ದಕ್ಷಿಣ ಕೊರಿಯಾದ ನಗರವಾದ ಗ್ವಾಂಗ್ಜುದಲ್ಲಿ 1970ರಲ್ಲಿ ಜನಿಸಿದ ಕಾಂಗ್ ಸಾಹಿತ್ಯ ಹಿನ್ನೆಲೆಯುಳ್ಳ ಕುಟುಂಬಕ್ಕೆ ಸೇರಿದವರಾಗಿದ್ದಾರೆ. ಅವರ ತಂದೆ ಹೆಸರಾಂತ ಕಾದಂಬರಿಕಾರರಾಗಿದ್ದರು. ಬರವಣಿಗೆ ಜೊತೆಗೆ ಕಾಂಗ್ ಕಲೆ ಮತ್ತು ಸಂಗೀತದ ಮೇಲೂ ಆಸಕ್ತಿಯನ್ನು ಹೊಂದಿರುವವರು.
BREAKING NEWS
— The Nobel Prize (@NobelPrize) October 10, 2024
The 2024 #NobelPrize in Literature is awarded to the South Korean author Han Kang “for her intense poetic prose that confronts historical traumas and exposes the fragility of human life.” pic.twitter.com/dAQiXnm11z
ವರದಿ ಪ್ರಕಾರ ಈ ಪ್ರಶಸ್ತಿಯನ್ನು ಗೆದ್ದ ಮೊದಲ ದಕ್ಷಿಣ ಕೊರಿಯಾದ ಬರಹಗಾರ್ತಿ ಹಾನ್ ಕಾಂಗ್ ಆಗಿದ್ದಾರೆ. ಕಳೆದ ವರ್ಷ, ಸಾಹಿತ್ಯ ನೊಬೆಲ್ ಪ್ರಶಸ್ತಿಯು ನಾರ್ವೇಜಿಯನ್ ಲೇಖಕ ಜಾನ್ ಒಲಾವ್ ಫೋಸ್ಸೆ ಅವರಿಗೆ ಲಭಿಸಿದೆ.
ಪ್ರಪಂಚದ ಅತ್ಯಂತ ಪ್ರತಿಷ್ಠಿತ ನೊಬೆಲ್ ಪ್ರಶಸ್ತಿಯು 10 ಮಿಲಿಯನ್ ಸ್ವೀಡಿಷ್ ಕ್ರೋನಾ ($915,000) ಬಹುಮಾನವನ್ನು ಒಳಗೊಂಡಿದೆ. 1901ರಿಂದ ಪ್ರತಿ ವರ್ಷ ವಿಜ್ಞಾನ, ಸಾಹಿತ್ಯ ಮೊದಲಾದ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ನೊಬೆಲ್ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಡೈನಮೈಟ್ ಅನ್ನು ಕಂಡುಹಿಡಿದ ಸ್ವೀಡಿಷ್ ರಸಾಯನಶಾಸ್ತ್ರಜ್ಞ ಆಲ್ಫ್ರೆಡ್ ನೊಬೆಲ್ ಅವರ ನೆನಪಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ.
