ಬೀದರ್‌ | ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿದ್ದು‌ ಬಸವ ಧರ್ಮ : ದಿನೇಶ್‌ ಅಮೀನ್‌ ಮಟ್ಟು

Date:

Advertisements

ಮನುವಾದಕ್ಕೆ ವಿರುದ್ಧವಾಗಿ ಹುಟ್ಟಿಕೊಂಡಿದ್ದು‌ ಬಸವ ಧರ್ಮ. ಮನುವಾದವೇ ಹಿಂದೂ ಧರ್ಮವಾದರೆ ಅದಕ್ಕೆ ವಿರುದ್ಧವಾದದ್ದು ಬಸವತತ್ವ ಎಂದು ಬೆಂಗಳೂರಿನ ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ಹೇಳಿದರು.

ಬಸವಕಲ್ಯಾಣ ನಗರದ ಹರಳಯ್ಯ ಗವಿಯಲ್ಲಿ ಅಂತರ‍್ರಾಷ್ಟ್ರೀಯ ಲಿಂಗಾಯತ ಧರ್ಮ ಕೇಂದ್ರ ಹಾಗೂ ಅಖಿಲ ಭಾರತ ಲಿಂಗವಂತ ಹರಳಯ್ಯ ಪೀಠದ ಸಹಯೋಗದಲ್ಲಿ ನಡೆದ ಶರಣ ವಿಜಯೋತ್ಸವ ನಾಡಹಬ್ಬ ಹಾಗೂ ಹುತಾತ್ಮ ದಿನಾಚರಣೆಯ ಏಳನೇ ದಿನದಂದು ನಡೆದ ʼಬಸವ ಚಳುವಳಿ ಅಂದು, ಇಂದು, ಮುಂದುʼ ವಿಷಯ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ʼಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಿಸಿದ್ದರಿಂದ ಸರ್ಕಾರ ತನ್ನ ಗೌರವ ಹೆಚ್ಚಿಸಿಕೊಂಡಿದೆ. ಸಾಂಸ್ಕೃತಿಕ ನಾಯಕ ಘೋಷಣೆ ಎಂಬುದು ರಾಜಕೀಯ ತಂತ್ರಗಾರಿಕೆ ಎನ್ನಬಹುದು. ಆದರೆ ಬಸವತತ್ವ ವಿನಾಶಕ್ಕಾಗಿ ರೂಪಿಸುವ ರಾಜಕೀಯ ತಂತ್ರಗಾರಿಕೆಗಿಂತ ಬಸವತತ್ವ ಉಳಿವಿಗಾಗಿ ಮಾಡುವ ರಾಜಕೀಯ ತಂತ್ರಗಾರಿಕೆ ಈ ಸಮಾಜಕ್ಕೆ ಬೇಕಾಗಿದೆʼ ಎಂದರು.

Advertisements

ʼಬಸವಣ್ಣ ನೇತ್ರತ್ವದ ಶರಣ ಚಳವಳಿ ಮಹಿಳಾ, ದಲಿತ, ಭಾಷಾ, ಕಾರ್ಮಿಕ, ಸಾಹಿತ್ಯ ಸೇರಿದಂತೆ ಎಲ್ಲ ಚಳವಳಿಗಳನ್ನು ತನ್ನೊಳಗೆ ಇಟ್ಟುಕೊಂಡು ಮುನ್ನಡೆದ ಸಾಮಾಜಿಕ ಚಳವಳಿಯಾಗಿದೆ. ಬಸವಣ್ಣನವರು ಕೇವಲ ಧರ್ಮದ ಬಗ್ಗೆ ಅಷ್ಟೇ ಮಾತನಾಡಲಿಲ್ಲ. ಸಂವಿಧಾನದಲ್ಲಿರುವ ಸ್ವಾತಂತ್ರ್ಯ, ಸಮಾನತೆ ಹಾಗೂ ಭಾತೃತ್ವ ಆಶಯಗಳು ವಚನಗಳಲ್ಲಿ ಅಡಗಿವೆ.
ಪ್ರಜಾಪ್ರಭುತ್ವ ಪರಿಕಲ್ಪನೆ ಶರಣರ ಅನುಭವ ಮಂಟಪದಲ್ಲಿದೆ. ಎಲ್ಲ ಚಳವಳಿಗೂ ಬಸವ ಚಳವಳಿ ಮಾದರಿಯಾಗಿದೆʼ ಎಂದರು.

ʼಬಸವವಾದ ಮತ್ತು ಮನುವಾದಕ್ಕೆ ವ್ಯತ್ಯಾಸ ಇದೆ. ಯಾರು ಮನುವಾದ ಒಪ್ಪಿಕೊಳ್ಳುತಾರೋ ಅವರಿಗೆ ಬಸವಣ್ಣನವರ ಹೆಸರು ಹೇಳಲು ಯೋಗ್ಯತೆ ಇಲ್ಲ. ಮಹಾಪುರುಷರ ಕೇವಲ ಆರಾಧನೆಗೆ ಸೀಮಿತಿಗೊಳಿಸದೆ ಅವರ ಆದರ್ಶ ತತ್ವಗಳನ್ನು ಅನುಷ್ಠಾನಗೊಳಿಸಲು ಶ್ರಮಿಸಬೇಕು. ಬುದ್ಧ, ಬಸವಣ್ಣ, ವಿವೇಕಾನಂದ, ನಾರಾಯಣಗುರು ದೇವರಲ್ಲ, ಅವರೆಲ್ಲರೂ ಮನುಷ್ಯರು. ವೈಚಾರಿಕ ಬದ್ಧತೆ ಮೈಗೂಡಿಸಿಕೊಂಡರೆ ನಾವೆಲ್ಲರೂ ಬಸವಣ್ಣ ಆಗಬಹುದು. ಇದು ಬಹಳ ಸುಲಭ, ಅಷ್ಟೇ ಕಠಿಣ ಕೂಡ ಹೌದುʼ ಎಂದು ವಿಶ್ಲೇಷಿಸಿದರು.

ʼಎಲ್ಲ ಸರ್ವಾಧಿಕಾರಿಗಳು ಕೂಡ ಸತ್ಯ ಹೇಳುವರನ್ನು, ಜನರಲ್ಲಿ ಜಾಗೃತಿ ಹುಟ್ಟಿಸುವರನ್ನು, ತಾರತಮ್ಯ ವಿರೋಧಿಸುವರನ್ನು, ಮೂಲಭೂತ ಆಧಾರದಲ್ಲಿ ಸಮಾನತೆ ಸಮಾಜ ಕಟ್ಟಲು ಹೋದವರನ್ನು ಬಲಿಪಶು ಮಾಡುತ್ತದೆ. ಬಸವತತ್ವಕ್ಕೆ ವಿರುದ್ಧವಾಗಿರುವ ಮೆರವಣಿಗೆ ನಡೆಸುವುದು ಬಸವತತ್ವದ ನಾಶ, ಅದು ಬಸವಾದು ಶರಣರನ್ನು ನಾಶಪಡಿಸಿದಂತೆ, ಅದು ಆಗಬಾರದುʼ ಎಂದು ಹೇಳಿದರು.

ಗುಲ್ಬರ್ಗಾ ವಿಶ್ವವಿದ್ಯಾಲಯ ಸಿಂಡಿಕೇಟ್ ಸದಸ್ಯ ಸಿದ್ಧಪ್ಪ ಮೂಲಗೆ ಮಾತನಾಡಿ, ʼಜಗತ್ತಿನಲ್ಲೇ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ ಉದಾಹರಣೆ ಎಲ್ಲಿಯೂ ಇಲ್ಲ, ಆದರೆ, ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರು ಸಾಮಾಜಿಕ ನ್ಯಾಯದ ನಿಲುವಿನ ಬದ್ಧತೆಯಿಂದ ಬಸವಣ್ಣನವರನ್ನು ಕರ್ನಾಟಕ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದೆʼ ಎಂದರು.

ʼ12ನೇ ಶತಮಾನಕ್ಕೂ ಮುನ್ನ ನಾವೆಲ್ಲರೂ ದಲಿತ, ಶೂದ್ರರಾಗಿದ್ದೆವು. ಶರಣ ಚಳವಳಿ ನಡೆದ ನಂತರ ನಾವು ಲಿಂಗಾಯತರಾಗಿದ್ದೇವೆ. ಲಿಂಗಾಯತ ಎಂಬುದು ಒಂದು ಜಾತಿ ಅಲ್ಲ, ಅದೊಂದು ಧರ್ಮ, ಚಳುವಳಿಯಾಗಿದೆ. ಶರಣರನ್ನು ಹತ್ಯೆಗೈದ ಶಕ್ತಿಗಳೇ ಎಂ.ಎಂ.ಕಲಬುರ್ಗಿ ಅವರನ್ನು ಕೊಂದಿದ್ದಾರೆ. ಈಚೆಗೆ ʼಶರಣರ ಶಕ್ತಿʼ ಚಲನಚಿತ್ರ, ʼವಚನ ದರ್ಶನʼ ಪುಸ್ತಕ ಮೂಲಕ ಮತ್ತೆ ಶರಣರ ಚರಿತ್ರೆ ಹರಣಗೊಳಿಸುವ ಹುನ್ನಾರ ನಡೆದಿದೆʼ ಎಂದು ಹೇಳಿದರು.

ನೇತೃತ್ವ ವಹಿಸಿದ ಡಾ. ಗಂಗಾಂಬಿಕಾ ಅಕ್ಕ ಮಾತನಾಡಿ, ʼಅಂದು ಬಸವಣ್ಣನವರು ಕಲ್ಯಾಣದಲ್ಲಿ ಕ್ರಾಂತಿ ನಡೆಸುವ ಮೂಲಕ ಲಿಂಗಾಯತ ಎಂಬ ಹೊಸ ಧರ್ಮ ಕಟ್ಟಿದ್ದರು. ಶರಣರು ಆಧ್ಯಾತ್ಮಿಕ, ಸಾಮಾಜಿಕ, ರಾಜಕೀಯ ದೇವರ ಕಲ್ಪನೆ ಹೀಗೆ ಎಲ್ಲಾ ರಂಗಗಳಲ್ಲಿ ಬದಲಾವಣೆ ತಂದರು. ಜಗತ್ತಿನ ಎಲ್ಲಾ ಕ್ರಾಂತಿಗಳ ತಾಯಿ ಕಲ್ಯಾಣ ಕ್ರಾಂತಿ. ಇಂದು ಸಮಾಜದಲ್ಲಿ ಸಾಮಾಜಿಕ ನ್ಯಾಯದ ಅವಶ್ಯಕತೆ ಇದೆʼ ಎಂದು ನುಡಿದರು.

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಜಾತಿ ಜನಗಣತಿ ಎತ್ತುವ ಹಲವು ಪ್ರಶ್ನೆಗಳು

ಕಾರ್ಯಕ್ರಮದಲ್ಲಿ ಭಾಲ್ಕಿ ಹಿರೇಮಠದ ಗುರುಬಸವ ಪಟ್ಟದ್ದೇವರು ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಸಾಹಿತಿ ಡಾ.ಸೋಮನಾಥ ಯಾಳವಾರ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಎಂಎಲ್‌ಸಿ ವಿಜಯಸಿಂಗ್, ಬಿಡಿಪಿಸಿ ನಿರ್ದೇಶಕ ಅನಿಲಕುಮಾರ ರಗಟೆ, ಬಸೇಪ್ರ ಕಲಬುರಗಿಯ ರಾಜಶೇಖರ ಯಂಕಂಚಿ, ಕಂಟೆಪ್ಪಾ ದಾನಾ, ಚನ್ನಬಸಪ್ಪಾ ವಡ್ಡನಕೇರೆ, ಲಕ್ಷ್ಮಿಕಾಂತ ಜ್ಯಾಂತೆ, ಮಲ್ಲಿಕಾರ್ಜುನ ಪಾಟೀಲ ಮಂಠಾಳ, ರೋಷನ್ ಶಾಶೆಟ್ಟೆ ಇತರರಿದ್ದರು. ರಾಷ್ಟ್ರೀಯ ಬಸವ ದಳ ತಾಲೂಕಾಧ್ಯಕ್ಷ ರವೀಂದ್ರ ಕೊಳಕೂರ ಸ್ವಾಗತಿಸಿದರೆ, ದತ್ತಾತ್ರೆ ಬಾಂದೆಕರ್ ನಿರೂಪಿಸಿದರು. ನಾಗನ್ನಾಥ ಮುಕ್ತಾ ಭಕ್ತಿ ದಾಸೋಹಗೈದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

Download Eedina App Android / iOS

X