2024ನೇ ಸಾಲಿನ ನೊಬೆಲ್ ಶಾಂತಿ ಪ್ರಶಸ್ತಿಯನ್ನು ಜಪಾನಿನ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೀಡಲಾಗಿದೆ. ಜಗತ್ತಿನಲ್ಲಿ ಅಣ್ವಸ್ತ್ರ ಯುದ್ಧಗಳನ್ನು ತಡೆಯಲು ಹಾಗೂ ಹಿರೋಶಿಮಾ ಮತ್ತು ನಾಗಸಾಕಿ ಅಣ್ವಸ್ತ್ರ ದಾಳಿಯಿಂದ ಬದುಕುಳಿದವರ ಏಳಿಗೆಗಾಗಿ ಶ್ರಮಿಸಿದ ಕಾರಣಕ್ಕಾಗಿ ಪ್ರಶಸ್ತಿ ನೀಡಲಾಗುತ್ತಿದೆ ಎಂದು ನೊಬೆಲ್ ಆಯ್ಕೆ ಸಮಿತಿ ತಿಳಿಸಿದೆ.
ನಿಹಾನ್ ಹಿಡಾಂಕ್ಯೊ ಸಂಸ್ಥೆ ಹಿಬಾಕುಶಾ ಹೆಸರಿನಲ್ಲಿ ಹಿರೋಶಿಮಾ ಮತ್ತು ನಾಗಸಾಕಿ ಅಣ್ವಸ್ತ್ರ ದಾಳಿಯಿಂದ ಬದುಕುಳಿದವರ ಏಳಿಗೆಗಾಗಿ ಅಪಾರವಾಗಿ ಶ್ರಮಿಸುತ್ತಿದೆ. ಜಗತ್ತಿನಲ್ಲಿ ಅಣ್ವಸ್ತ್ರಗಳನ್ನು ತಡೆಯಲು ಕೂಡ ಅಪಾರವಾಗಿ ಶ್ರಮಿಸಿದೆ. ಪರಮಾಣು ಅಸ್ತ್ರಗಳನ್ನು ಮತ್ತೆ ಬಳಸಬಾರದೆಂದು ವಿಶ್ವದಾದ್ಯಂತ ಹಲವು ಕಾರ್ಯಾಗಾರಗಳನ್ನು ಹಮ್ಮಿಕೊಂಡು ಬರುತ್ತಿದೆ. ಈ ಕಾರಣಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ತಿಳಿಸದೆ.
ಈ ಸುದ್ದಿ ಓದಿದ್ದೀರಾ? ಮೂವರು ವಿಜ್ಞಾನಿಗಳಿಗೆ ರಾಸಾಯನಶಾಸ್ತ್ರ ನೊಬೆಲ್ ಪ್ರಶಸ್ತಿ ಪ್ರಕಟ
ಹಿರೋಶಿಮಾ ಮತ್ತು ನಾಗಸಾಕಿಯ ಅಣ್ವಸ್ತ್ರ ದಾಳಿಯಲ್ಲಿ ಬದುಕುಳಿದವರ ಗೌರವಾರ್ಥ ಸಲ್ಲಿಸಿದ ನೊಬೆಲ್ ಸಮಿತಿ, ಯುದ್ಧದಲ್ಲಿ ಗಾಯಗೊಂಡು ನೋವುಗಳನ್ನು ಅನುಭವಿಸಿ ಪುನಃ ವಿಶ್ವದಲ್ಲಿ ಶಾಂತಿ ಸಾರುತ್ತಿರುವ ಕಾರಣಕ್ಕಾಗಿ ನಿಹಾನ್ ಹಿಡಾಂಕ್ಯೊ ಸಂಸ್ಥೆಗೆ ನೊಬೆಲ್ ಪ್ರಶಸ್ತಿ ನೀಡಲಾಗುತ್ತಿದೆ ಎಂದು ನಾರ್ವೆಯ ನೊಬೆಲ್ ಸಮಿತಿ ತಿಳಿಸಿದೆ. ನಿಹಾನ್ ಹಿಡಾಂಕ್ಯೊ ಸಂಸ್ಥೆಯ ನಾಯಕರು ಮತ್ತು ಸದಸ್ಯರೆಲ್ಲರೂ ಅಣ್ವಸ್ತ್ರ ದಾಳಿಯಲ್ಲಿ ಬದುಕುಳಿದವರಾಗಿದ್ದಾರೆ.
