ಕ್ರೀಡೆಯು ಯುವಕರ ಜೀವನದ ಅವಿಭಾಜ್ಯ ಅಂಗವಾಗಬೇಕು. ಮತ್ತು ಸಾಧನೆ ಮಾಡಲು ಮುನ್ನುಗ್ಗಬೇಕು ಎಂದು ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಶಿರೂರು ಗ್ರಾಮದಲ್ಲಿ ಏರ್ಪಡಿಸಿದ್ದ ಕ್ರಿಕೆಟ್ ಪಂದ್ಯಾವಳಿ ಕಾರ್ಯಕ್ರಮದಲ್ಲಿ ಮಾತನಾಡಿ ತಿಳಿಸಿದರು.
ಪಟ್ಟಣದ ಸಿದ್ದಲಿಂಗೇಶ್ವರ ಗೆಳೆಯರ ಬಳಗದವರು ದಸರಾ ನಿಮಿತ್ತ ಹಮ್ಮಿಕೊಂಡಿದ್ದ ಶಿರೂರ ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಕಾಂಗ್ರೆಸ್ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ರಕ್ಷಿತಾ ಈಟಿ ಮಾತನಾಡಿ, ಕ್ರೀಡೆಯಲ್ಲಿ ಆಟಗಾರರು ಸಾಧನೆ ತೋರಬೇಕಾದರೆ ಸತತ ಪ್ರಯತ್ನ ಹಾಗೂ ಹಿರಿಯರ ಮಾರ್ಗದರ್ಶನ ಅಗತ್ಯವಾಗಿದೆ. “ಕ್ರೀಡೆಯಲ್ಲಿ ಆಸಕ್ತಿ ತೋರುವುದರೊಂದಿಗೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು” ಎಂದರು.
ಯುವ ಮುಖಂಡ ಬಸವರಾಜ ಬಿಲ್ಲಾರ ಮಾತನಾಡಿ, “ಇತ್ತೀಚೆಗೆ ಕ್ರಿಕೆಟ್ ಆಟದಲ್ಲಿ ಬೆಟ್ಟಿಂಗ್ ಹಾವಳಿ ಹೆಚ್ಚಾಗಿದ್ದು, ಇದರಿಂದ ಯುವಕರು ದೂರವಿರಬೇಕು ಎಂದರು. ನಂತರ ಮಾಜಿ ಕ್ರಿಕೆಟ್ ಆಟಗಾರರನ್ನು ಸನ್ಮಾನಿಸಿದರು. ಹತ್ತು ದಿನಗಳ ಕಾಲ ಜರುಗುವ ಶಿರೂರ ಪ್ರೀಮಿಯರ್ ಕ್ರಿಕೆಟ್ ಪಂದ್ಯಾವಳಿಯಲ್ಲಿ 9 ತಂಡಗಳು ಭಾಗವಹಿಸಿದ್ದವು.
ಇದನ್ನು ಓದಿದ್ದೀರಾ? ಬೆಳಗಾವಿ | ಬೈಕ್‌ಗಳಿಗೆ ಡಿಕ್ಕಿ ಹೊಡೆದ ಲಾರಿ ಚಾಲಕ ಪರಾರಿ ಯತ್ನ; ಸೆರೆಹಿಡಿದು ಥಳಿಸಿದ ಗ್ರಾಮಸ್ಥರು
ಕಾಂಗ್ರೆಸ್ ಯುವ ಮುಖಂಡ ಮಲ್ಲಿಕಾರ್ಜುನ ಮೇಟಿ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ರಂಗಪ್ಪ ಮಳ್ಳಿ, ಮಾಜಿ ಸದಸ್ಯ ರಾಮನಗೌಡ ಮಾಚಾ, ಪಿಕೆಪಿಎಸ್ ಅಧ್ಯಕ್ಷ ಮುದಕಪ್ಪ ಬಿಲ್ಲಾರ, ಅರ್ಜುನ ಅಂಗಡಿ, ಶಂಕರ ಹೂಗಾರ, ರವಿ ಮೇಟಿ, ಸಂಜಯ ನಡುವಿನಮನಿ, ಸುರೇಶ ಗಾಣಿಗೇರ, ಅನ್ವರ್ ಅಮರಗೋಳ ಇದ್ದರು.