ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ ಇದು : ಸಿಎಂ ಬೊಮ್ಮಾಯಿ

Date:

ಈ ಚುನಾವಣೆ ಒಂದು ಕಡೆ ಅಭಿವೃದ್ಧಿ, ಮತ್ತೊಂದು ಕಡೆ ಸುಳ್ಳಿನ‌ ಚುನಾವಣೆ. ಕಳೆದ ಬಾರಿ ಅಪವಿತ್ರ ಮೈತ್ರಿ ಮಾಡಿಕೊಂಡು‌ ಸರ್ಕಾರ ನಡೆಸಲು‌ ಆಗದಿದ್ದಾಗ ನಮಗೆ ಕೊಟ್ಟರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹಾವೇರಿ ಜಿಲ್ಲೆಯ ಶಿಗ್ಗಾಂವನಲ್ಲಿ ಕುಟುಂಬ ಸದಸ್ಯರ ಜೊತೆ ಮತದಾನ ಮಾಡಿದ ಬಳಿಕ ಮಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, “ರಾಜ್ಯದ ಭವ್ಯ ಭವಿಷ್ಯ ಬರೆಯಲು ಮತದಾನ ಮಹತ್ವದ್ದು. ಎಲ್ಲರೂ ಮನೆಯಿಂದ ಹೊರಬಂದು ಮತದಾನ ಮಾಡಿ” ಎಂದರು.

“ಕರ್ನಾಟಕದ ಪ್ರತಿಯೊಬ್ಬ ನಾಗರಿಕನ ಕ್ಷೇಯೋಭಿವೃದ್ಧಿಗೆ ಜನರ ಮತ ಇರುತ್ತದೆ. ಭಾರತೀಯ ಜನತಾ ಪಕ್ಷಕ್ಕೆ ಸಂಪೂರ್ಣ ಬಹುಮತ ಸಿಗುತ್ತದೆ ಎನ್ನುವ ಆತ್ಮವಿಶ್ವಾಸ ನನಗೆ ಇದೆ. ಶಾಸಕನಾಗಿ, ಮುಖ್ಯಮಂತ್ರಿಯಾಗಿ ಮತದಾನ ಮಾಡುವುದರಲ್ಲಿ ವ್ಯತ್ಯಾಸ ಏನಿಲ್ಲ. ಕರ್ನಾಟಕದ ನಾಗರಿಕನಾಗಿ ನಾ‌ನು ಮತದಾನ ಮಾಡಿದ್ದೇನೆ” ಎಂದರು.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ʼಭಜರಂಗಬಲಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಚುನಾವಣೆಗಾಗಿ ನಾವು ಯಾವುದನ್ನು ಮಾಡುವುದಿಲ್ಲ. ನಾವು ಬಜರಂಗಬಲಿ ಮೇಲಿನ ನಂಬಿಕೆ, ವಿಶ್ವಾಸಕ್ಕಾಗಿ ಮಾಡಿದ್ದೇವೆ. ನಮ್ಮ ಮತ್ತು ದೇವರ ನಡುವೆ ಇರುವ ಸಂಬಂಧ ಹಾಗಿದೆ. ಕಾಂಗ್ರೆಸ್ ನವರು ಕೂಡ ದೇವಸ್ಥಾನಕ್ಕೆ ಹೋಗುತ್ತಿದ್ದಾರೆ‌. ಅವರು ಹೇಳಿದ್ದನ್ನು ಮಾಡುವುದಿಲ್ಲ. ಮಾಡೋದನ್ನು ಅವರು ಹೇಳುವುದಿಲ್ಲ” ಎಂದರು.

ಈ ದಿನ ಡೆಸ್ಕ್‌
Website | + posts

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ಅಬ್ಬರದ ಜನಜಾಗೃತಿ ನಡುವೆಯೂ ಕರ್ತವ್ಯ ಮರೆತ ನಗರದ ಮಂದಿ: ಅದೇ ಹಳೆ ಕಥೆ

ಕರ್ನಾಟಕದ 14 ಕ್ಷೇತ್ರಗಳಿಗೆ ಏಪ್ರಿಲ್ 26ರಂದು ಮೊದಲ ಹಂತದ ಮತದಾನ ನಡೆದಿದೆ....

ಮುಸ್ಲಿಮರ ಮೀಸಲಾತಿ ಬಗ್ಗೆ ಸತ್ಯ ಮರೆಮಾಚಿ ಬಿಜೆಪಿಯಿಂದ ಸುಳ್ಳು ಜಾಹೀರಾತು: ಸಿಎಂ ಸಿದ್ದರಾಮಯ್ಯ

"ಹಿಂದುಳಿದ ವರ್ಗಗಳ ಮೀಸಲಾತಿ(ಒಬಿಸಿ) ಪಟ್ಟಿಗೆ ಮುಸ್ಲಿಮರ ಸೇರ್ಪಡೆಯು ಮಂಡಲ್ ವರದಿಯನ್ನು ಆಧರಿಸಿ...

Fact Check | ಹಿಮಾಚಲದಲ್ಲಿ ಪ್ರಿಯಾಂಕಾ ಗಾಂಧಿ ಅಕ್ರಮವಾಗಿ ಬಂಗಲೆ ಖರೀದಿಸಿಲ್ಲ!

ಲೋಕಸಭಾ ಚುನಾವಣೆಯ ಸಮಯದಲ್ಲಿ ಹಿಮಾಚಲ ಪ್ರದೇಶದ ಛರಾಬ್ರಾದಲ್ಲಿರುವ ಪ್ರಿಯಾಂಕಾ ಗಾಂಧಿ ಅವರ...

ಬರ ಪರಿಹಾರ | ಮನಮೋಹನ್ ಸಿಂಗ್ ಸರ್ಕಾರ ಎಷ್ಟು ಪರಿಹಾರ ನೀಡಿದೆ ಎಂದು ಲೆಕ್ಕ ಕೊಡಿ: ಆರ್. ಅಶೋಕ್

"ಬರಗಾಲದಿಂದ ಬಳಲಿದ ರಾಜ್ಯದ ಜನತೆಗೆ 3,454 ಕೋಟಿ ರೂ. ಪರಿಹಾರವನ್ನು ಪ್ರಧಾನಿ...