ನ್ಯೂಜಿಲೆಂಡ್ ಮತ್ತು ಭಾರತ ನಡುವಿನ ಟೆಸ್ಟ್ ಪಂದ್ಯಾವಳಿಯು ಅಕ್ಟೋಬರ್ 16ರಿಂದ ಆರಂಭವಾಗಿವೆ. ಈ ಬಾರಿಯ ಟೆಸ್ಟ್ ಕ್ರಿಕೆಟ್ ಸರಣಿ ಭಾರತದಲ್ಲಿಯೇ ನಡೆಯಲಿದ್ದು, ಮೊದಲ ಟೆಸ್ಟ್ ಬೆಂಗಳೂರಿನಲ್ಲಿ ನಡೆಯಲಿದೆ. ಟೆಸ್ಟ್ ಸರಣಿಗಾಗಿ ಬಿಸಿಸಿಐ ಸಿದ್ದತೆಯಲ್ಲಿ ತೊಡಗಿದೆ. ಜೊತೆಗೆ, ಕ್ರಿಕೆಟ್ ಟೀಮ್ ಇಂಡಿಯಾದ ಆಟಗಾರರ ಪಟ್ಟಿಯನ್ನೂ ಪ್ರಕಟಿಸಿದೆ.
ಟೆಸ್ಟ್ ಪಂದ್ಯಾವಳಿಯಲ್ಲಿ ಭಾರತ ತಂಡವನ್ನು ನಾಯಕ ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಅವರಿಗೆ ಜಸ್‌ಪ್ರೀತ್ ಬೂಮ್ರಾ ಅವರು ಸಾಥ್ ನೀಡಲಿದ್ದು, ಬೂಮ್ರಾಗೆ ಉಪನಾಯಕನ ಜವಾಬ್ದಾರಿ ನೀಡಲಾಗಿದೆ.
ತಂಡದಲ್ಲಿ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿಯೂ ಇರಲಿದ್ದು, ಎಂದಿನಂತೆ ಓಪನಿಂಗ್ ಬ್ಯಾಟ್ಸ್‌ಮನ್ ಆಗಿರಲಿದ್ದಾರೆ. ಜೊತೆಗೆ, ರವಿಚಂದ್ರನ್ ಅಶ್ವಿನ್, ಕೆ.ಎಲ್ ರಾಹುಲ್, ರವೀಂದ್ರ ಜಡೇಜರಂತಹ ಅನುಭವಿ ಆಟಗಾರರೂ ಇದ್ದಾರೆ.
ತಂಡದಲ್ಲಿ 15 ಮಂದಿ ಆಟಗಾರರೊಂದಿಗೆ, ನಾಲ್ಕು ಮಂದಿ ಮೀಸಲು ಆಟಗಾರರೂ ಇದ್ದಾರೆ.
ಭಾರತ ತಂಡದ ಪಟ್ಟಿ:
ರೋಹಿತ್ ಶರ್ಮಾ (ನಾಯಕ),
ಜಸ್‌ಪ್ರೀತ್ ಬೂಮ್ರಾ (ಉಪನಾಯಕ),
ಯಶಸ್ವಿ ಜೈಸ್ವಾಲ್,
ಶುಭಮನ್ ಗಿಲ್,
ವಿರಾಟ್ ಕೊಹ್ಲಿ,
ಕೆ.ಎಲ್. ರಾಹುಲ್,
ಸರ್ಫರಾಜ್ ಖಾನ್,
ರಿಷಭ್ ಪಂತ್ (ವಿಕೆಟ್ ಕೀಪರ್),
ಧ್ರುವ್ ಜುರೇಲ್ (ವಿಕೆಟ್ ಕೀಪರ್),
ರವಿಚಂದ್ರನ್ ಅಶ್ವಿನ್,
ರವೀಂದ್ರ ಜಡೇಜ,
ಅಕ್ಷರ್ ಪಟೇಲ್,
ಕುಲದೀಪ್ ಯಾದವ್,
ಮೊಹಮ್ಮದ್ ಸಿರಾಜ್,
ಆಕಾಶ್ ದೀಪ್.
ಮೀಸಲು ಆಟಗಾರರು: ಹರ್ಷೀತ್ ರಾಣಾ, ನಿತೀಶ್ ಕುಮಾರ್ ರೆಡ್ಡಿ, ಮಯಂಕ್ ಯಾದವ್ ಮತ್ತು ಪ್ರಸಿದ್ಧ ಕೃಷ್ಣ
ವೇಳಾಪಟ್ಟಿ: ಅ.16ರಿಂದ ಅ.20: ಮೊದಲ ಟೆಸ್ಟ್, ಬೆಂಗಳೂರು,
ಅ.24ರಿಂದ ಅ.28: ಎರಡನೇ ಟೆಸ್ಟ್, ಪುಣೆ,
ನ.1ರಿಂದ ನ.5: ಮೂರನೇ ಟೆಸ್ಟ್, ಮುಂಬೈ