ಹಾವೇರಿ | ಆಕಾಶದತ್ತ ಚಿಗರಿತಲೇ ಬೇರು, ಮುತ್ತಾಯಿತಲೇ ಪರಾಕ್: ಕಾರ್ಣಿಕ ನುಡಿ

Date:

Advertisements

ಐತಿಹಾಸಿಕ ದೇವರಗುಡ್ಡದ ಮಾಲತೇಶ ಸ್ವಾಮಿ ಕಾರ್ಣಿಕ ನಡೆದಿದ್ದು, ʼಆಕಾಶದತ್ತ ಚಿಗರಿತಲೇ ಬೇರು, ಮುತ್ತಾಯಿತಲೇ ಪರಾಕ್‌ʼ ಎಂದು ಗೊರವಯ್ಯ ಕಾರ್ಣಿಕ ನುಡಿದಿದ್ದಾರೆ.

ಹಾವೇರಿ ಜಿಲ್ಲೆಯ ರಾಣೆಬೇನ್ನೂರು ತಾಲೂಕಿನ ದೇವರಗುಡ್ಡದಲ್ಲಿ ದಸರಾ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆ ಈ ಬಾರಿಯೂ ಶುಕ್ರವಾರ ಸಂಜೆ ನಡೆದ ಕಾರ್ಣಿಕೋತ್ಸವದಲ್ಲಿ ಕಾರ್ಣಿಕ ನುಡಿದಿದ್ದಾರೆ.

ಪ್ರತಿ ವರ್ಷ ನವರಾತ್ರಿ ವೇಳೆ ಭವಿಷ್ಯವಾಣಿ ನುಡಿಯುವ ಗೊರವಯ್ಯ 9 ದಿನ ಉಪವಾಸವಿದ್ದು ಸಾವಿರಾರು ಭಕ್ತರ ಸಮ್ಮುಖದಲ್ಲಿ 18 ಅಡಿ ಬಿಲ್ಲನ್ನೇರಿ ಕಾರ್ಣಿಕ ನುಡಿದಿಯುತ್ತಾರೆ. ಕಾರ್ಣಿಕ ನುಡಿ ಕುರಿತು ದೇವರಗುಡ್ಡದಲ್ಲಿ ಮಾಲತೇಶ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕ ಸಂತೋಷ್ ಭಟ್ ಗುರೂಜಿ ಹೇಳಿಕೆ ನೀಡಿದ್ದು, ʼಆಕಾಶದತ್ತ ಚಿಗುರಿತಲೇ, ಬೇರು ಮುತ್ತಾಯಿತಲೇ ಪರಾಕ್ʼ ಎಂದು ನುಡಿದಿದ್ದಾರೆ.

Advertisements

ಆಕಾಶದತ್ತ ಚಿಗುರಿತಲೇ ಅಂದರೆ ʼಒಳ್ಳೆ ಮಳೆ ಆಗುತ್ತೆʼ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ರೈತರಿಗೆ ಒಳ್ಳೆ ಬೆಳೆ ಬರುತ್ತೆ, ಅದನ್ನು ತೆಗೆದುಕೊಳ್ಳುವ ಫಲಾನುಭವಿಗಳಿಗೂ ಒಳ್ಳೆಯದಾಗುತ್ತದೆʼ ಎಂದರ್ಥ.

ಈ ಸುದ್ದಿ ಓದಿದ್ದೀರಾ? ಉಡುಪಿ | ಅಂಬೇಡ್ಕರ್, ದಲಿತರಿಗೆ ಅವಮಾನಿಸಿದ ಸಂಘಪರಿವಾರದ ಮುಖಂಡ ಉಮೇಶ್ ನಾಯ್ಕ: ಬಂಧನಕ್ಕೆ ಆಗ್ರಹ

“ರಾಜಕೀಯವಾಗಿ ಹೇಳುವುದಾದರೆ ಆಕಾಶದತ್ತ ಚಿಗುರೀತಲೇ, ಅಂದರೆ ʼಈಗಿರುವ ನಾಯಕತ್ವ ಆಕಾಶದತ್ತ ಚಿಗುರಿಬಿಟ್ಟಿದೆʼ, ಬೇರೆಲ್ಲಾ ಮುತ್ತಾಯಿತಲೇ ಅಂದರೆ ʼಅವರಿಗೆಲ್ಲಾ ಬೆನ್ನೆಲುಬಾಗಿ ನಿಂತಿರುವುದುʼ ಪ್ರಸ್ತುತ ದಿನಗಳಲ್ಲಿ ತಾವೆಲ್ಲ ನೋಡಿರಬಹುದು ಕಾನೂನು ವ್ಯವಸ್ಥೆಯಲ್ಲಿ ಏನೇ ಬದಲಾವಣೆ ಆದರೂ ಕೂಡಾ ಈಗಿರುವ ನಾಯಕತ್ವ ಹೇಳಿದಂಗೆ ಅವರು ಒಪ್ಪಿಕೊಳ್ತಾರೆ ಅಂತ. ಬೇರುಗಳೆಲ್ಲಾ ಮುತ್ತಾಯಿತಲೇ ಅಂದರೆ ʼಆಕಾಶತ್ತ ಚಿಗುರಿರೋ ಗಿಡ ಹೇಳಿದಂಗೆ ಬೇರುಗಳು‌ ಒಪ್ಪಿಕೊಳ್ಳುತ್ತಾವೆʼ ಎಂದರ್ಥ” ಎಂದು ಕಾರ್ಣಿಕವನ್ನು ವ್ಯಾಖ್ಯಾನಿಸಿದ್ದಾರೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X