ವಿಜಯಪುರ | ನಕಲಿ ಮತದಾನಕ್ಕೆ ಯತ್ನಿಸಿದವರು ಪೊಲೀಸ್‌ ವಶಕ್ಕೆ

Date:

Advertisements

ಬಿಜೆಪಿ ಅಭ್ಯರ್ಥಿಯ ಪರ ಮತ ಚಲಾಯಿಸಲು ನಕಲಿ ಮತದಾರರನ್ನು ವಿಜಯಪುರ ನಗರ ವಿಧಾನಸಭಾ ಕ್ಷೇತ್ರಕ್ಕೆ ಕರೆತಂದಿರುವುದಾಗಿ ಶಿವಸೇನಾ ಪಕ್ಷದ ಅಭ್ಯರ್ಥಿ ಸತೀಶ್‌ ಅಶೋಕ್‌ ಪಾಟೀಲ ಆರೋಪಿಸಿದ್ದಾರೆ.

ಇಂದು (ಮೇ 10) ಮತದಾನ ಶುರುವಾದ ಸಮಯದಲ್ಲಿ ವಿಜಯಪುರ ನಗರದ ಬೂತನಾಳ ರಸ್ತೆಯಿಂದ ನಗರ ಪ್ರವೇಶಿಸುತ್ತಿದ್ದ ಕೆಲ ನಕಲಿ ಮತದಾರರನ್ನು ಕಾಂಗ್ರೆಸ್‌ ಕಾರ್ಯಕರ್ತರು ಹಿಡಿದಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಾಮಾಜಿಕ ಜಾಲತಾಣದಲ್ಲಿ ಓಡಾಡುತ್ತಿರುವ ವಿಡಿಯೋದಲ್ಲಿ, ಇಬ್ಬರು ಮಾತನಾಡಿದ್ದು ತಾವು ಚಿಂಚೋಳಿಯಲ್ಲಿಇರುವ ಸಕ್ಕರೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿರುವುದಾಗಿ ತಿಳಿಸಿದ್ದಾರೆ. ವಿಜಯಪುರ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪರ ಮತ ಚಲಾಯಿಸಲು ಬಂದಿರುವುದಾಗಿ ವಿಡಿಯೋದಲ್ಲಿದೆ.

ʻʻಸುಮಾರು 120ಕ್ಕೂ ಹೆಚ್ಚು ಮಂದಿ ನಕಲಿ ಮತದಾರರು, ಮತ ಚಲಾಯಿಸಲು ಬಂದಿದ್ದು, ನಮ್ಮನ್ನು ನೋಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರು. ಇಬ್ಬರನ್ನು ಪ್ರಸ್ತುತ ಪೊಲೀಸರ ವಶಕ್ಕೆ ನೀಡಲಾಗಿದೆʼʼ ಎಂದು ಹೆಸರು ಹೇಳಲಿಚ್ಛಿಸದ ಕಾಂಗ್ರೆಸ್‌ ಕಾರ್ಯಕರ್ತರೊಬ್ಬರು ತಿಳಿಸಿದರು.

ಈ ಕುರಿತು ಜಿಲ್ಲಾಧಿಕಾರಿಗಳಿಗೆ ಸೋಮವಾರ (ಮೇ 8)ದಂದೇ ಮನವಿ ಪತ್ರ ಸಲ್ಲಿಸಿರುವ ಅವರು, ʻʻಸೋಮವಾರ ನಡೆದ ಬಿಜೆಪಿ ಪಕ್ಷದ ರ್‍ಯಾಲಿಯಲ್ಲಿ ಭಾಗವಹಿಸಿದ್ದ ʼಸಿದ್ಧಸಿರಿʼ ಬ್ಯಾಂಕಿನ ಮ್ಯಾನೇಜರ್‌ಗಳು ಮತ್ತು ಸಿಬ್ಬಂದಿ ವರ್ಗದವರು ಬೇರೆ ಜಿಲ್ಲೆ ಮತ್ತು ತಾಲೂಕುಗಳಿಂದ ನಕಲಿ ಮತ ಹಾಕಲು ಬಂದಿದ್ದು, ಅಂತವರಿಗೆ ಮತ ಹಾಕಲು ಅವಕಾಶ ಕೊಡಬಾರದುʼʼ ಎಂದು ಆಗ್ರಹಿಸಿದ್ದರು.

ಕಳೆದ ಚುನಾವಣೆಯಲ್ಲಿಯೂ ಹೀಗೆ ಬೇರೆ ಮತಕ್ಷೇತ್ರದ ಜನರು ಬಂದು ಸುಮಾರು 3,000ದಿಂದ 4,000ವರೆಗೆ ನಕಲಿ ಮತ ಚಲಾಯಿಸಿ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿದ್ದರು. ಈ ಬಾರಿ ಹೀಗಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ಮನವಿ ಪತ್ರದಲ್ಲಿ ತಿಳಿಸಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಈಗ ಸ್ವತಂತ್ರ, ನ್ಯಾಯೋಚಿತ ಚುನಾವಣೆ ನಡೆಯುತ್ತಿಲ್ಲ: ಶಿವಸುಂದರ್‌ ಆತಂಕ

"ಚುನಾವಣಾತ್ಮಕ ಸರ್ವಾಧಿಕಾರಿ ದೇಶವಾಗಿ ಭಾರತ ಹೊಮ್ಮಿದೆ, ಚುನಾವಣೆ ನಡೆಯುತ್ತಿರುವ ಕಾರಣಕ್ಕೆ ಇದನ್ನು...

ವಿಜಯಪುರ | ಮನರೇಗಾ ಯೋಜನೆಯಲ್ಲಿ 2,000 ಕೋಟಿಗೂ ಹೆಚ್ಚು ಭ್ರಷ್ಟಾಚಾರ: ತನಿಖೆಗೆ ಕೆಆರ್‌ಎಸ್ ಪಕ್ಷ ಒತ್ತಾಯ

ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ (ಕೆಆರ್‌ಎಸ್‌) ಪದಾಧಿಕಾರಿಗಳು ವಿಜಯಪುರ ಜಿಲ್ಲೆಯ ಎಲ್ಲಾ...

ಧಾರವಾಡ | ಮೋದಿ 5,000 ರೂ. ಕೊಡುತ್ತಾರೆಂಬ ವದಂತಿ; ಗ್ಯಾಸ್ ಕಚೇರಿ ಎದುರು ಜಮಾಯಿಸಿದ ಜನ

ಉಜ್ವಲ ಯೋಜನೆಯಡಿ ಪ್ರಧಾನಿ ಮೋದಿ ಅವರು 5,000 ರೂ. ಕೊಡುತ್ತಾರೆಂಬ ವದಂತಿ...

ರಾಜಸ್ಥಾನದ ಶಾಸಕನಾದ ಬೆಂಗಳೂರಿನ ಬಟ್ಟೆ ವ್ಯಾಪಾರಿ

ಬೆಂಗಳೂರಿನಲ್ಲಿ ವಾಸವಿರುವ ಬಟ್ಟೆ ವ್ಯಾಪಾರಿಯೊಬ್ಬರು ರಾಜಸ್ಥಾನ ರಾಜ್ಯದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ರಾಜಾಜಿನಗರದಲ್ಲಿ ವಾಸವಿರುವ...

Download Eedina App Android / iOS

X