ಧಾರವಾಡ | ಮೋದಿ 5,000 ರೂ. ಕೊಡುತ್ತಾರೆಂಬ ವದಂತಿ; ಗ್ಯಾಸ್ ಕಚೇರಿ ಎದುರು ಜಮಾಯಿಸಿದ ಜನ

Date:

ಉಜ್ವಲ ಯೋಜನೆಯಡಿ ಪ್ರಧಾನಿ ಮೋದಿ ಅವರು 5,000 ರೂ. ಕೊಡುತ್ತಾರೆಂಬ ವದಂತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಮಾಹಿತಿಯನ್ನೇ ನಂಬಿಕೊಂಡ ಜನರು, ಕೆವೈಸಿ ಅಪ್‌ಡೇಟ್‌ ಮಾಡಿಸಲು ಗ್ಯಾಸ್‌ ಕಚೇರಿ ಎದುರು ಜಮಾಜಿಸಿರುವ ಘಟನೆ ಧಾರವಾಡ ಜಿಲ್ಲೆಯಲ್ಲಿ ನಡೆದಿದೆ.

ಉಜ್ವಲ ಯೋಜನೆಯಡಿ ಗ್ಯಾಸ್‌ ಪಡೆಯುತ್ತಿರುವವರು ಆಧಾರ್, ಬ್ಯಾಂಕ್‌ ಬಾಸ್‌ ಬುಕ್ಅನ್ನು ಗ್ಯಾಸ್‌ ನೋಂದಣಿ ಜೊತೆಗೆ ಕೆವೈಸಿ ಅಪ್‌ಡೇಟ್ ಮಾಡಿಸಬೇಕು. ಹಾಗೆ ಮಾಡಿಸಿದರೆ ಕೇಂದ್ರ ಸರ್ಕಾರದಿಂದ 5,000 ರೂ. ನೀಡುತ್ತಾರೆ ಎಂಬ ವದಂತಿಯ ಪೋಸ್ಟ್‌ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ.

ಹೀಗಾಗಿ, ಧಾರವಾಡ ಜಿಲ್ಲೆಯ ಕಲಘಟಗಿ ಸುತ್ತಮುತ್ತಲ ಹಳ್ಳಿಗಳ ಜನರು ಕೆವೈಸಿ ಅಪ್‌ಡೇಟ್‌ ಮಾಡಿಸಲು ಕಲಘಟಗಿಯ ಲೋಕಪೂಜ್ಯ ಗ್ಯಾಸ್‌ ಕಚೇರಿಗೆ ದೌಡಾಯಿಸಿದ್ದಾರೆ. ಅವರನ್ನು ನಿಯಂತ್ರಿಸಲು ಕಚೇರಿ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ.

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.

ಇತ್ತೀಚೆಗೆ, ಕರಾವಳಿ ಭಾಗದಲ್ಲಿ ಇಂತದ್ದೇ ಪೋಸ್ಟ್‌ ವೈರಲ್‌ ಆಗಿತ್ತು. ಕೆವೈಸಿ ಅಪ್‌ಡೇಟ್‌ ಮಾಡಿಸಿದರೆ, 500 ರೂ.ಗೆ ಸಿಲಿಂಡರ್‌ ದೊರೆಯುತ್ತದೆ. ಅಪ್‌ಡೇಟ್‌ ಮಾಡಿಸದಿದ್ದರೆ ಅಡುಗೆ ಅನಿಲದ ಸಿಲಿಂಡರ್ ಕಮರ್ಷಿಯಲ್‌ ಆಗಿ ಬದಲಾಗುತ್ತದೆ. ಆ ಸಿಲಿಂಡರ್‌ಗೆ 1,400 ರೂ. ಕೊಡಬೇಕಾಗುತ್ತದೆ ಎಂದು ನಕಲಿ ಪೋಸ್ಟ್‌ ವೈರಲ್‌ ಆಗಿತ್ತು. ಅದು ಸುಳ್ಳೆಂಬುದು ಈಗಾಗಲೇ ಸಾಬೀತಾಗಿದೆ.

ಇದೀಗ, ಧಾರವಾಡ ಜಿಲ್ಲೆಯಲ್ಲಿ 5,000 ರೂ. ಕೊಡುತ್ತಾರೆಂಬ ಮತ್ತೊಂದು ನಕಲಿ ಸುದ್ದಿ ವೈರಲ್ ಆಗಿದೆ.

ಇಂತಹ ಪೋಸ್ಟ್‌ಗಳ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೆಂಗಳೂರಿನ ಇಂಡೇನ್ ಗ್ಯಾಸ್ ಸರಬರಾಜು ಮಾಡುವ ಕವಿತಾ ಎಂಟರ್‌ಪ್ರೈಸಸ್ ಗ್ಯಾಸ್ ಏಜೆನ್ಸಿಯ ನಿರ್ವಾಹಕ ವೆಂಕಟೇಶ್ ಅವರು “ಉಜ್ವಲ ಯೋಜನೆಯಡಿ ಸಬ್ಸಿಡಿ ಪಡೆಯುತ್ತಿರುವ ಗ್ರಾಹಕರು ಮಾತ್ರ ಡಿಸೆಂಬರ್ 31ರೊಳಗೆ KYC ಮಾಡಿಸಬೇಕು. ಉಳಿದ ಗ್ರಾಹಕರು ಕೆವೈಸಿ ಮಾಡಿಸಬೇಕಾದ ಅಗತ್ಯವಿಲ್ಲ. KYC ಮಾಡಿಸಿದಾಕ್ಷಣ 500 ರೂ.ಗೆ ಗ್ಯಾಸ್ ಸಿಲಿಂಡರ್ ಸಿಗುತ್ತದೆ ಎಂಬುದು ಸುಳ್ಳು” ಅಂತ ಹೇಳಿದ್ದಾರೆ.

ಒಂದು ವೇಳೆ KYC ಮಾಡಿಸದಿದ್ದರೆ ಗೃಹ ಬಳಕೆ ಸಿಲಿಂಡರ್‌ ಕಮರ್ಷಿಯಲ್ ಆಗಿ ಬಿಡುತ್ತದೆ ಅನ್ನೋದು ಕೂಡ ಸುಳ್ಳು. ಹಾಗೇನೂ ಆಗುವುದಿಲ್ಲ. ಗೃಹ ಬಳಕೆಯ ಗ್ರಾಹಕರಾಗಿಯೇ ಮುಂದುವರಿಯುತ್ತಾರೆ. ಆದರೆ, ಉಜ್ವಲ ಯೋಜನೆಯಡಿ ಅವರಿಗೆ ಸಿಗುತ್ತಿದ್ದ ಸಣ್ಣ ಪುಟ್ಟ ಸಬ್ಸಿಡಿ ನಿಂತು ಹೋಗಬಹುದು. ಹಾಗಾಗಿ ಕೆವೈಸಿ ಮಾಡಿಸಬೇಕು” ಅಂತ ಅವರು ಹೇಳಿದ್ದಾರೆ.

ಇನ್ನು, ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಅವರು ಕೂಡ ವಾಟ್ಸಾಪ್‌ನಲ್ಲಿ ವೈರಲ್ ಸಂದೇಶ ಸುಳ್ಳು ಅಂತ ಹೇಳಿದ್ದಾರೆ. ಈ ಬಗ್ಗೆ ವರದಿಗಳೂ ಪ್ರಕಟವಾಗಿವೆ. “ಉಜ್ವಲ ಯೋಜನೆಯ ಗ್ರಾಹಕರಿಗೆ ಮಾತ್ರ ಸಬ್ಸಿಡಿ ನೀಡುತ್ತಿದ್ದು. ಅವರು ಮಾತ್ರ ಆಧಾರ ದೃಢೀಕರಿಸಬೇಕು” ಅಂತ ಅವರು ಹೇಳಿದ್ದಾರೆ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಹೆಚ್ಚು ಓದಿಸಿಕೊಂಡ ಲೇಖನಗಳು

ವಿಡಿಯೋ

ಸುದ್ದಿ ನಿರಂತರವಾಗಿ ಉಚಿತವೇ ಆಗಿರುವುದು ಹೇಗೆ ಸಾಧ್ಯ? ಅದಕ್ಕೆ ನಿಮ್ಮ ಬೆಂಬಲವೂ ನಿರಂತರವಾಗಿ ಇದ್ದಾಗ ಮಾತ್ರ ಸಾಧ್ಯ. ಚಂದಾದಾರರಾಗಿ – ಆ ಮೂಲಕ ಸತ್ಯ, ನ್ಯಾಯ, ಪ್ರೀತಿ ಮೌಲ್ಯಗಳನ್ನು ಎಲ್ಲರಿಗೂ ಹರಡಲು ಜೊತೆಯಾಗಿ.
Related

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | ರಾಮೇಶ್ವರಂ ಕೆಫೆ ಸ್ಪೋಟ; ಎಲ್ಲ ಆಯಾಮಗಳಲ್ಲಿ ತನಿಖೆಗೆ ಮುಂದಾದ ಪೊಲೀಸರು

ಶುಕ್ರವಾರ ನಡೆದ ಘಟನೆ ರಾಜ್ಯ ರಾಜಧಾನಿ ಬೆಂಗಳೂರು ಜನತೆಯನ್ನು ಬೆಚ್ಚಿ ಬೀಳಿಸಿದೆ. ವೈಟ್...

‌ರಾಯಚೂರು | ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಸ್ಪರ್ಧೆ: ಬಿ.ವಿ ನಾಯಕ

ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ರಾಯಚೂರು ಕ್ಷೇತ್ರದಲ್ಲಿ ಸ್ಪರ್ಧಿಸಲು ನಾನು ಆಕಾಂಕ್ಷಿಯಾಗಿದ್ದೇನೆ....

ತುಮಕೂರು | ಕಲೆಯ ಗ್ರಹಿಕೆ ಮೇಲೆ ನಿರ್ಬಂಧ ಹೇರುವುದು ಅಪಾಯಕಾರಿ: ವಿಮರ್ಶಕ ರಾಘವೇಂದ್ರರಾವ್

ಕಲೆಯ ಗ್ರಹಿಕೆ ಮೇಲೆ ನಿರ್ಬಂಧಗಳನ್ನು ಹೇರುವುದು ಅಪಾಯಕಾರಿಯಾಗಿದೆ. ಗ್ರಹಿಕೆಯು ನಿಯಮಬದ್ಧವಾಗಿದ್ದರೂ ನಿರ್ಬಂಧ...

ಗದಗ | ಪ್ರತಿಯೊಬ್ಬರಿಗೂ ಮುಖ್ಯವಾದ ಸಂಪತ್ತು ಆರೋಗ್ಯ; ಎಂಎಲ್‌ಸಿ ಸಂಕನೂರ

ಪ್ರತಿಯೊಬ್ಬರಿಗೂ ಆರೋಗ್ಯ ಸಂಪತ್ತು ಮುಖ್ಯವಾದ ಸಂಪತ್ತಾಗಿದೆ. ನೌಕರರು ತಮ್ಮ ಆರೋಗ್ಯ ಸಂರಕ್ಷಣೆಗೆ...